ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ1 ಕಪಲ್ ರಿಯಾಲಿಟಿ ಶೋ ಮೂಲಕ ನಟಿ ಶ್ವೇತಾ ಚಂಗಪ್ಪ ನಿರೂಪಣೆಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಜೋಡಿ ನಂ1 ಸ್ಪೆಷಲ್ ಎಪಿಸೋಡ್‌ನಲ್ಲಿ ಪ್ರತಿಯೊಂದು ಜೋಡಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಶ್ವೇತಾಗೆ ಸರ್ಪ್ರೈಸ್ ನೀಡಬೇಕೆಂದು ವಾಹಿನಿ ಅವರ ಪತಿ ಮತ್ತು ಪುತ್ರನನ್ನು ಕರೆಸಿದ್ದರು.
'ಈ ಜನ್ಮದಲ್ಲಿ ನಾನು ತುಂಬಾ ಬ್ಯೂಟಿಫುಲ್ ಆಂಡ್ ಹ್ಯಾಂಡ್ಸಮ್ ಪತಿಯನ್ನು ಪಡೆದಿರುವ ಅವರ ಹೆಸರು ಕಿರಣ್' ಎಂದು ಶ್ವೇತಾ ಹೇಳುತ್ತಿದ್ದಂತೆ ಹಿಂದಿನಿಂದ ಕಿರಣ್ ಬಂದು ಸರ್ಪ್ರೈಸ್ ನೀಡುತ್ತಾರೆ. ಇಬ್ಬರೂ ಒಟ್ಟಾಗಿ ನಟ ಪ್ರೇಮ್ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ.
ನಿಮ್ಮಿಬ್ಬರಲ್ಲಿ ಹೆಚ್ಚಿಗೆ ರೊಮ್ಯಾಂಟಿಕ್ ಯಾರು ಎಂದರೆ ಶ್ವೇತಾ ಎಂದಿದ್ದಾರೆ. ಮಗು ರೀತಿ ಒಬ್ಬರನ್ನೊಬ್ಬರು ಮುದ್ದಾಡುವುದು ಯಾರು ಎನ್ನುವ ಪ್ರಶ್ನೆ ಶ್ವೇತಾ ಎಂದಿದ್ದಾರೆ. ಆದರೆ ಮಗನನ್ನು ಹೆಚ್ಚಿನ ಮುದ್ದು ಮಾಡುವುದು ಯಾರು ಅಂದ್ರೆ ನಾನು ಅಂತ ಹೇಳಿದ್ದಾರೆ ಕಿರಣ್.
ವೇದಿಕೆ ಮೇಲೆ ರೊಮ್ಯಾಂಟಿಕ್ ದಿನ ಕ್ರಿಯೇಟ್ ಮಾಡಬೇಕು ಎಂದು ಕಿರಣ್ ಕೈಗೆ ಗುಲಾಬಿ ಹೂ ಕೊಟ್ಟು ಪ್ರಪೋಸ್ ಮಾಡಲು ಹೇಳುತ್ತಾರೆ. ಪ್ರಪೋಸ್ ಮಾಡಿದ ನಂತರ ಇಬ್ಬರೂ ಡ್ಯಾನ್ಸ್ ಮಾಡುತ್ತಾರೆ.
ಮೊದಲ ಬಾರಿ ವೇದಿಕೆ ಮೇಲೆ ಪುತ್ರ ಜಿಯಾನ್ ಬಂದಿರುವುದು ಶ್ವೇತಾ ಸಂತಸ ವ್ಯಕ್ತ ಪಡಿಸುತ್ತಾರೆ. ಈ ಹ್ಯಾಪಿ ಫ್ಯಾಮಿಲಿ ಇನ್ನಷ್ಟು ಹ್ಯಾಪಿಯಾಗಿರಲಿ ಎಂದು ಎಲ್ಲರೂ ವಿಶ್ ಮಾಡುವುದರ ಜೊತೆ ಕೊಡಗಿನ ಶೈಲಿಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ.