ಮಜಾ ಟಾಕೀಸ್‌ಗೆ ಮತ್ತೆ ಎಂಟ್ರಿ ಕೊಟ್ಟ ಶ್ವೇತಾ ಚಂಗಪ್ಪ; ನೆಟ್ಟಿಗರ ಕಾಮೆಂಟ್‌ ನೋಡಿ ಶಾಕ್!

First Published | Dec 5, 2020, 3:26 PM IST

ಪುತ್ರ ಜಿಯಾನ್‌ಗೆ ಜನ್ಮ ನೀಡಿದ ನಂತರ ವೃತ್ತಿ ಜೀವನದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ ಶ್ವೇತಾ ಚಂಗಪ್ಪ ಈಗ ಮತ್ತೆ ಮಜಾ ಟಾಕೀಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವೀಕ್ಷಕರು ಮಜಾದಲ್ಲಿ ರಾಣಿಯನ್ನು ನೋಡಿ ಫುಲ್ ಖುಷಿಯಾಗಿದ್ದಾರೆ. ಆದರೆ...
ಫೋಟೋಕೃಪೆ: ಶ್ವೇತಾ ಚಂಗಪ್ಪ ಇನ್‌ಸ್ಟಾಗ್ರಾಂ

ಮಜಾ ಟಾಕೀಸ್‌ನಲ್ಲಿ ಸೃಜನ್ ಪಕ್ಕ ಮತ್ತೆ ರಾಣಿ ನೋಡಿ ಖುಷ್ ಆದ ಕಿರುತೆರೆ ವೀಕ್ಷಕರು.
ಮೊದಲಿಗಿಂತಲೂ ಕೊಂಚ ಡಿಫರೆಂಟ್ ಆಗಿ ಕಾಣಿಸಿಕೊಂಡ ರಾಣಿ ಶ್ವೇತಾ.
Tap to resize

ಶ್ವೇತಾ ಕಾಣಿಸಿಕೊಂಡ ಎಪಿಸೋಡ್ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ.
'ಏನೇ ಹೇಳಿ ರಾಣಿ ನಿಮ್ಮನ್ನು ಮೀರಿಸೋ ಹೆಂಡತಿ ಪಾತ್ರ ಯಾರಿಂದಲೂ ಮಾಡಲಾಗುವುದಿಲ್ಲ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಶ್ವೇತಾ ಗರ್ಭಿಣಿ ಇದ್ದಾಗಲೂ ಮಜಾ ಟಾಕೀಸ್ ಚಿತ್ರೀಕರಣ ಮಾಡಿದ್ದರು. ಆದರೆ ಆಗ ಪ್ರೆಂಗ್ನೆನ್ಸಿ ಬಗ್ಗೆ ರಿವೀಲ್ ಮಾಡಿರಲಿಲ್ಲ.
ಶ್ವೇತಾ ಇನ್‌ಸ್ಟಾಗ್ರಾಂ ಕಾಮೆಂಟ್‌ನಲ್ಲಿ ನೆಟ್ಟಿಗರಿಂದ ಮೆಚ್ಚುಗೆ ಹರಿದು ಬರುತ್ತಿವೆ. ಇಷ್ಟೊಂದು ಕಾಮೆಂಟ್‌ ನೋಡಿ ರಾಣಿ ಶಾಕ್ ಆಗಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.
ಶ್ವೇತಾ ಚಂಗಪ್ಪ ಎಷ್ಟು ಫೇಮಸೋ ಪುತ್ರ ಜಿಯಾನ್‌ ಕೂಡ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ ಪೇಮಸ್‌.
ಶ್ವೇತಾ ಇನ್ನು ಡಿಫರೆಂಟ್ ಆಗಿ ಮಜಾ ಟಾಕೀಸ್‌ನಲ್ಲಿ ವೀಕ್ಷಕರನ್ನು ಮನೋರಂಜಿಸಬೇಕು ಎಂದು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

Latest Videos

click me!