ಬಿಗ್‌ಬಾಸ್‌ ಮನೆಯಿಂದ ಬಂದವಳೇ ರಾಷ್ಟ್ರೀಯ ಗೌರವ ಪ್ರಶಸ್ತಿ ಸ್ವೀಕರಿಸಿದ ಶೋಭಾ ಶೆಟ್ಟಿ!

Published : Dec 27, 2023, 11:21 PM IST

ಅಪ್ಪಟ ಕನ್ನಡತಿಯಾಗಿದ್ದರೂ ತೆಲುಗು ಧಾರಾವಾಹಿಯಲ್ಲಿ ಮಿಂಚುತ್ತಾ ಮನೆ ಮಗಳಾಗಿದ್ದ ಶೋಭಾ ಶೆಟ್ಟಿ ತೆಲುಗು ಬಿಗ್‌ಬಾಸ್‌ ಮನೆಯಲ್ಲಿ ಕೊನೆಯ ವಾರ ಎಲಿಮಿನೇಟ್ ಆಗಿ ಹೊರ ಬಂದಿದ್ದಾಳೆ. ಆದರೆ, ಬಿಗ್‌ಬಾಸ್‌ ಮನೆಯಿಂದ ಹೊರಬಂದ ಶೋಭಾಗೆ ಅದೃಷ್ಟ ಕೈ ಹಿಡಿದದ್ದು, ತಾವು ನಟಿಸಿದ ಕಾರ್ತಿಕ ದೀಪಂ ಧಾರಾವಾಹಿಯ ಮೋನಿತಾ ಖಳನಾಯಕಿ ಪಾತ್ರಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ಸ್ವೀಕರಿಸಿದ್ದಾಳೆ.

PREV
18
ಬಿಗ್‌ಬಾಸ್‌ ಮನೆಯಿಂದ ಬಂದವಳೇ ರಾಷ್ಟ್ರೀಯ ಗೌರವ ಪ್ರಶಸ್ತಿ ಸ್ವೀಕರಿಸಿದ ಶೋಭಾ ಶೆಟ್ಟಿ!

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಶೋಭಾಗೆ ಅದೃಷ್ಟ ಕೈ ಹಿಡಿದದ್ದು, ತಾವು ನಟಿಸಿದ ಕಾರ್ತಿಕ ದೀಪಂ ಧಾರಾವಾಹಿಯ ಮೋನಿತಾ ಖಳನಾಯಕಿ ಪಾತ್ರಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ಸ್ವೀಕರಿಸಿದ್ದಾಳೆ.

28

ತೆಲುಗು ಧಾರಾವಾಹಿ ಕ್ಷೇತ್ರದ ಮೋನಿತಾ ಎಂದೇ ಪ್ರಸಿದ್ಧಿಯಾದ ಶೋಭಾಶೆಟ್ಟಿ ಅವರಿಗೆ ಬಿಗ್‌ಬಾಸ್‌ ಮನೆಯಿಂದ ಬಂದ ಮೇಲೆ ಅದೃಷ್ಟವೇ ಖುಲಾಯಿಸಿದೆ. ಶೋಭಾ ಶೆಟ್ಟಿ 'ಕಾರ್ತಿಕ್ ದೀಪಂ' ಧಾರಾವಾಹಿಯಿಂದ ಎಷ್ಟು ಫೇಮಸ್ ಆಗಿದ್ದಳೋ.. ಬಿಗ್ ಬಾಸ್ ಮೂಲಕವೂ ಅಷ್ಟೇ ಫೇಮಸ್ ಆಗಿದ್ದಾಳೆ.
 

38
Shobha shetty

ಬಿಗ್‌ಬಾಸ್‌ ಮನೆಯಲ್ಲಿ ಶೋಭಾಶೆಟ್ಟಿ ಕಾರ್ತಿಕ ದೀಪಂ ಧಾರಾವಾಹಿಯ ಮೋನಿತಾ ಎಂಬಂತೆ ನಡೆದುಕೊಂಡರೂ ಒಂದಷ್ಟು ಋಣಾತ್ಮಕತೆಯನ್ನು ಮುಚ್ಚಿಟ್ಟರು. ತೆಲುಗು ಬಿಗ್ ಬಾಸ್ ಸೀಸನ್ 7ರಲ್ಲಿ ಶೋಭಾ ಶೆಟ್ಟಿ ತೋರಿಸಿದ ಬಿಗ್‌ಫೈಟ್ ಆಕೆಯನ್ನು ಟಾಪ್‌ 7 ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾಗುವಂತೆ ಮಾಡಿದೆ.

48

ಕಾರ್ತಿಕದೀಪಂ ಧಾರಾವಾಹಿಯ ಮೋನಿತಾ ಪಾತ್ರಕ್ಕಾಗಿ ಅತ್ಯುತ್ತಮ ನೆಗೆಟಿವ್ (ಖಳನಾಯಕಿ) ಪಾತ್ರಕ್ಕಾಗಿ ರಾಷ್ಟ್ರೀಯ ಗೌರವ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಸಂತೋಷವಾಗಿದೆ. ನನ್ನ ಈ ಧಾರಾವಾಹಿ ಪ್ರಯಾಣವನ್ನು ಬೆಂಬಲಿಸಿ ಆಶೀರ್ವದಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ತಿಳಿಸಿದ್ದಾರೆ.

58

ರಾಷ್ಟ್ರೀಯ ಗೌರವ ಪ್ರಶಸ್ತಿ ಸ್ವೀಕರಿಸಿದ ಪ್ರಶಸ್ತಿಯ ಸಂಭ್ರಮವನ್ನು ಶೋಭಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
 

68

ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ವೈಷ್ಣವಿ ಅವರ ತಂಗಿ ತನು ಆಗಿ ನಟಿಸಿ ಪ್ರಸಿದ್ಧಿಯಾಗಿದ್ದ ಶೋಭಾ ತೆಲುಗು ಧಾರಾವಾಹಿಯಲ್ಲಿ ಖಳನಟಿಯಾಗಿ ಅತ್ಯಂತ ಪ್ರಸಿದ್ಧಿಯಾಗಿದ್ದಾರೆ. ಸೌಂದರ್ಯದಲ್ಲಿ.. ನೆಗೆಟಿವ್ ಪಾತ್ರಗಳಲ್ಲಿ.. ಹಾವಭಾವದಲ್ಲಿ ಧಾರಾವಾಹಿಗಳ ನಾಯಕಿಯರಿಗೇ ಶೋಭಾ ಪೈಪೋಟಿ ನೀಡಿದ್ದಾರೆ. 
 

78
Shobha shetty

ಇನ್ನು ಬಿಗ್‌ಬಾಸ್‌ ತೆಲುಗು ಸೀಸನ್ 7ರಲ್ಲಿ 5 ವಾರಗಳಲ್ಲಿ ಆಕೆ ಮನೆ ಬಿಟ್ಟು ಹೋಗುತ್ತಾಳೆ ಎಂದು ನಿರೀಕ್ಷಿಸಿದ್ದರು. ಆದರೆ, ಬಿಗ್‌ಬಾಸ್‌ ಮನೆಯಲ್ಲಿ ಗಟ್ಟಿಯಾಗಿ ನಿಂತು ಆಟವಾಡಿದ ಶೋಭಾ ಫಿನಾಲೆ ಹಿಮದಿನ ವಾರ ಮನೆಯಿಮದ ಹೊರ ಬಂದಿದ್ದಾರೆ. 

88
Bigg Boss Telugu 7

ಬಿಗ್ ಬಾಸ್ ಸೀಸನ್ ಮುಗಿದು ತಕ್ಷಣವೇ ಶೋಭಾ ಶೆಟ್ಟಿ ಧಾರಾವಾಹಿಯಲ್ಲಿನ ಖಳ ಪಾತ್ರಕ್ಕಾಗಿ ರಾಷ್ಟ್ರೀಯ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು. ಕನ್ನಡ ಇಂಡಸ್ಟ್ರಿಗೆ ಸೇರಿರುವ ಶೋಭಾ ಶೆಟ್ಟಿ ಸದ್ಯ ಟಾಲಿವುಡ್‌ನಲ್ಲಿ ನಿಷ್ಕ್ರಿಯರಾಗಿದ್ದಾರೆ. ಆದರೆ, ಮುಂದಿನ ಯಾವ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ. 

Read more Photos on
click me!

Recommended Stories