ಹಾಸ್ಯನಟ ಮತ್ತು ನಟ ಸುನಿಲ್ ಗ್ರೋವರ್ (Sunil Grover) ಯಾರಿಗೆ ಪರಿಚಯವಿಲ್ಲ ಹೇಳಿ. ಟಿವಿ, ಲೈವ್ ಶೋಗಳ ಮೂಲಕ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುನೀಲ್ ಇಂದು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಸುನಿಲ್ ಗ್ರೋವರ್ 46 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1977 ರಲ್ಲಿ ಮಂಡಿ ಡಬ್ವಾಲಿಯಲ್ಲಿ ಜನಿಸಿದ ತಿಂಗಳಿಗೆ 500 ರೂಪಾಯಿ ಸಂಪಾದನೆ ಮಾಡುತ್ತಿದ್ದ ಸುನೀಲ್ ಇಂದು ಕೋಟಿಗಳ ಒಡೆಯ.
ಸುನಿಲ್ ಗ್ರೋವರ್ ಬಾಲ್ಯದಿಂದಲೂ ನಟನಾಗುವ ಉತ್ಸಾಹವನ್ನು ಹೊಂದಿದ್ದರು ಮತ್ತು ಈ ಕನಸು ಅವರನ್ನು ಮುಂಬೈಗೆ ಕರೆದೊಯ್ಯಿತು.
210
ಆದರೆ, ಕಿರುತೆರೆಗೆ ಬರುವ ಮುನ್ನ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದರು. ರೇಡಿಯೋದಲ್ಲಿ ಜೋಕುಗಳನ್ನು ಹೇಳುತ್ತಿದ್ದರು. ಸುನಿಲ್ ಗ್ರೋವರ್ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಹಾಸ್ಯನಟ ಜಸ್ಪಾಲ್ ಭಟ್ಟಿ.
310
ಇದಾದ ನಂತರ ಅವರಿಗೆ ಹಲವು ಕಾರ್ಯಕ್ರಮಗಳ ಆಫರ್‌ಗಳು ಬಂದವು. ಸುನಿಲ್ ತಮ್ಮ ಗುತ್ತಿ ಪಾತ್ರಕ್ಕೆ ಸಖತ್ ಫೇಮಸ್ ಅವರ ಕಾಲೇಜಿನ ಸಹಪಾಠಿಯಿಂದ ಈ ಪಾತ್ರಕ್ಕೆ ಸ್ಫೂರ್ತಿ ಸಿಕ್ಕಿದ್ದಂತೆ.
410
ಗುತ್ತಿ ಜೊತೆ ಡಾ.ಗುಲಾಟಿ, ರಿಂಕು ಭಾಭಿ ಪಾತ್ರ ಮಾಡಿದ್ದ ಸುನೀಲ್ ಗ್ರೋವರ್ ಗೆ ಮುಂಬೈಗೆ ಬಂದಾಗ ತಿಂಗಳಿಗೆ ಕೇವಲ 500 ರೂಪಾಯಿ ಸಂಪಾದನೆ ಮಾಡುತ್ತಿದ್ದರು,
510
ಇಂದು ಈ ಕಾಮಿಡಿಯನ್ ಕೋಟಿಗಟ್ಟಲೆ ಆಸ್ತಿಯ ಮಾಲೀಕರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಸುಮಾರು 22 ಕೋಟಿ ಮೌಲ್ಯದ ಆಸ್ತಿ ಮಾಲೀಕರಾಗಿದ್ದಾರೆ.
610
ಸುನಿಲ್ ಗ್ರೋವರ್ ಟಿವಿ ಹಾಸ್ಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ಇದರೊಂದಿಗೆ ಸುನಿಲ್ ಗಳಿಕೆಯೂ ಹೆಚ್ಚಿದೆ. ಇದೀಗ ಮುಂಬೈನಲ್ಲಿ ಸ್ವಂತ ಬಂಗಲೆ ಹೊಂದಿದ್ದು, ಅದರ ಬೆಲೆ ಸುಮಾರು 2.5 ಕೋಟಿ ರೂ.
710
ಸುನಿಲ್ ಗ್ರೋವರ್ ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಕೋಟ್ಯಂತರ ಮೌಲ್ಯದ ಬಂಗಲೆ ಜತೆಗೆ ಹಲವಾರು ವಾಹನಗಳನ್ನೂ ಹೊಂದಿದ್ದಾರೆ. ರೇಂಜ್ ರೋವರ್, ಬಿಎಂಡಬ್ಲ್ಯು, ಆಡಿ ಮುಂತಾದ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ.
810
goodbye
ಸುನಿಲ್ ಗ್ರೋವರ್ ಅವರ ವಾರ್ಷಿಕ ಆದಾಯ 3 ಕೋಟಿಗೂ ಹೆಚ್ಚು. ಒಂದು ಸಂಚಿಕೆಯಲ್ಲಿ ಕೆಲಸ ಮಾಡಲು 10 ರಿಂದ 15 ಲಕ್ಷ ರೂ ಚಾರ್ಜ್ ಮಾಡುವ ಸನೀಲ್ . ಅದೇ ಸಮಯದಲ್ಲಿ, ಒಂದು ಚಿತ್ರಕ್ಕೆ ಅವರ ಸಂಭಾವನೆ ಸುಮಾರು 50 ರಿಂದ 60 ಲಕ್ಷ ರೂಪಾಯಿಗಳು ಪಡೆಯುತ್ತಾರೆ.
910
ಸುನಿಲ್ ಗ್ರೋವರ್ ಟಿವಿ ಶೋಗಳ ಜೊತೆಗೆ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಮೊದಲು ಅಜಯ್ ದೇವಗನ್ ಅವರ ಪ್ಯಾರ್ ತೋ ಹೋನಾ ಹಿ ಥಾ ಚಿತ್ರದಲ್ಲಿ ಕಾಣಿಸಿಕೊಂಡರು.
1010
ಇದಲ್ಲದೆ, ಅವರು ಗಬ್ಬರ್ ಈಸ್ ಬ್ಯಾಕ್, ಹೀರೋಪಂತಿ, ಬಾಘಿ ಮತ್ತು ಭಾರತ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಮುಂಬರುವ ಚಿತ್ರ ಶಾರುಖ್ ಖಾನ್ ಕಿ ಜವಾನ್.