ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿರೋ ಅನುಪಮಾ ಸೀರಿಯಲ್‌ನಲ್ಲಿ ರೋಚಕ ಟ್ವಿಸ್ಟ್ ಏನದು?

First Published | Aug 2, 2023, 4:38 PM IST

ಹಿಂದಿಯ ಜನಪ್ರಿಯ ಧಾರಾವಾಹಿ ಅನುಪಮಾ, ಸದ್ಯ ಕನ್ನಡದಲ್ಲೂ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಿಂದಿಯ ಈ ಸೀರಿಯಲ್ ಅಲ್ಲಿ ಇದೀಗ ಏಳು ರೋಚಕ ತಿರುವುಗಳು ಕಾಣಿಸಿಕೊಂಡಿದೆ. ಅವುಗಳ ಬಗ್ಗೆ ತಿಳಿಯೋಣ. 
 

ಅನುಪಮಾ ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್
ರೂಪಾಲಿ ಗಂಗೂಲಿ (Rupali Ganguly) ಮತ್ತು ಗೌರವ್ ಖನ್ನಾ ನಟಿಸಿರುವ ಅನುಪಮಾ ಸೀರಿಯಲ್‌ನಲ್ಲಿ ಸದ್ಯದಲ್ಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರಲಿದೆ. ಮುಂದೆ ಕಥೆಯಲ್ಲಿ ಏನೇನು ಆಗಲಿದೆ ಅನ್ನೋದನ್ನು ನೋಡೋಣ. 

ಮಾಲತಿ ದೇವಿಯ ನಿಜವಾದ ಮಗಳ ಆಗಮನ
ಅನುಪಮಾ ಟಿವಿ ಸೀರಿಯಲ್‌ನಲ್ಲಿ ಸದ್ಯದಲ್ಲೇ ಹೊಸ ಎಂಟ್ರಿಯಾಗಲಿದೆ. ಮಾಲತಿ ದೇವಿಯ ಪಾತ್ರ ನಿರ್ವಹಿಸುತ್ತಿರುವ ಅಪಾರ ಮೆಹ್ತಾರದ ನಿಜವಾದ ಮಗಳು ಖುಷಾಲಿ ಜರಿವಾಲ (Khushali Jariwala) ಸದ್ಯದಲ್ಲೇ ಅನುಪಮಾ ಸೀರಿಯಲ್ ತಂಡ ಸೇರಿಕೊಳ್ಳಲಿದ್ದಾರೆ. 

Tap to resize

ಯಾವ ಪಾತ್ರದಲ್ಲಿ ಕಾಣಿಸಲಿದ್ದಾರೆ ಖುಷಾಲಿ?
ಖುಷಾಲಿ ಜರಿವಾಲ ಅವರನ್ನು ಸೀರಿಯಲ್‌ನಲ್ಲಿ (serial) ಮಾಲತಿ ದೇವಿಯವರ ಯಂಗ್ ವರ್ಷನ್ ಅಂದರೆ ಫ್ಲಾಶ್ ಬ್ಯಾಕ್ ಸ್ಟೋರಿಯಲ್ಲಿ ಮಾಲತಿ ದೇವಿಯಾಗಿ ತೋರಿಸಲಾಗುವುದು. 

ಮಾಲತಿ ದೇವಿಯ ಕಹಿ ಸತ್ಯ
ಮಾಲತಿ ದೇವಿ (Malati Devi) ತನ್ನ ಪರಿವಾರದ ಬದಲಾಗಿ, ತನ್ನ ಕರಿಯರ್ ಆಯ್ಕೆ ಮಾಡುವ ಮೂಲಕ, ಜೀವನ ಅತ್ಯಂತ ದೊಡ್ಡ ತಪ್ಪನ್ನು ಮಾಡಿದ್ದು, ಯಾಕೆ? ಹೇಗೆ? ಎನ್ನುವ ಬಗ್ಗೆ ಕಹಿ ಸತ್ಯ ಅನಾವರಣವಾಗಲಿದೆ. 

ಅನುಜ್ ನ ಸತ್ಯ ತಿಳಿಯಲಿರುವ ಅನುಪಮಾ
ಕಥೆಯಲ್ಲಿ ಮುಂದೆ ಡಿಂಪಿ ದೊಡ್ಡ ಸತ್ಯದ ಅನಾವರಣ ಮಾಡಲಿದ್ದಾಳೆ. ಅನುಜ್ , ಮಾಲತಿ ದೇವಿಯ ನಿಜವಾದ ಪುತ್ರ ಅನ್ನೋದನ್ನು ಡಿಂಪಿ ಹೇಳಲಿದ್ದಾರೆ. ಇದರಿಂದ ಮನೆಯವರೆಲ್ಲ ಶಾಖ್ ಆಗಲಿದ್ದಾರೆ. 

ತಪ್ಪೊಪ್ಪಿಕೊಳ್ಳಲಿರುವ ಕಾವ್ಯಾ
ಕಾವ್ಯಾ ಕೊನೆಗೂ ಅನುಪಮಾ (Anupama) ಬಳಿ ಅನಿರುದ್ಧನ ಮಗುವಿನ ತಾಯಿಯಾಗಲಿದ್ದಾಳೆಂಬ ಸತ್ಯ ಒಪ್ಪಿಕೊಳ್ಳಲಿದ್ದಾಳೆ. ವನರಾಜನ ಮಗುವಿನ ತಾಯಿ ಅಲ್ಲ ಅನ್ನೋದನ್ನು ಒಪ್ಪಿಕೊಳ್ಳಲಿದ್ದಾಳೆ. 

ಡಿಎನ್ಎ ಟೆಸ್ಟ್ ಮಾಡಿಸಲಿರುವ ವನರಾಜ್
ಕಾವ್ಯಾ, ಅನುಪಮಾ ಬಳಿ ತನ್ನ ವೈವಾಹಿಕ ಜೀವನವನ್ನು (Married Life) ಉಳಿಸುವಂತೆ ಅನುಪಮಾಳ ಬಳಿ ಬೇಡಿಕೊಳ್ಳುವಾಗ ವನರಾಜ್ ಎಲ್ಲ ಮಾತನ್ನೂ ಕೇಳಿಕೊಳ್ಳುತ್ತಾನೆ. ಜೊತೆಗೆ ಮುಂದೆ ಮಗುವಿನ ಡಿಎನ್ಎ ಟೆಸ್ಟ್ (DNA Test) ಮಾಡಿಸಲಿದ್ದಾನೆ. 

ಕೋಪಗೊಂಡ ಅಮ್ಮ
ವನರಾಜ್ ತಾಯಿ ಇನ್ನು ಮುಂದೆ ಸುಮ್ಮನೆ ಕುಳಿತುಕೊಳ್ಳಲ್ಲ. ಅವರು ಕಾವ್ಯಾಳಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ. ಇದನ್ನ ಮನೆಯವರೆಲ್ಲಾ ಕಣ್ಣು ಕಣ್ಣು ಬಿಟ್ಟು ನೋಡಬೇಕಾಗಿ ಬರಬಹುದು. 

Latest Videos

click me!