'ರೇಣುಕಾ ಯಲ್ಲಮ್ಮ' ಜೋಡಿ ಮತ್ತೆ ಒಂದಾಯ್ತಾ? ಶಾಪಿಂಗ್ ಮಾಲ್‌ನಲ್ಲಿ ಜಯಂತ್-ಮಹತಿ

Published : Jul 24, 2026, 03:14 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತಿದ್ದ ಜನಪ್ರಿಯ ಪೌರಾಣಿಕ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾಯಲ್ಲಮ್ಮ’ ಧಾರಾವಾಹಿಯ ಜೋಡಿಗಳಾದ ರೇಣುಕಾ ಮತ್ತು ಜಮಧಗ್ನಿ ಬಹು ದಿನಗಳ ಬಳಿಕ ಜೊತೆಯಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಇವರನ್ನ ನೋಡಿ ಹೇಳಿದ್ದೇನು ನೋಡಿ.

PREV
16
ರೇಣುಕಾಯಲ್ಲಮ್ಮ ನಟರು

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಪ್ರಸಾರವನ್ನು ಮುಗಿಸಿದ ಜನಪ್ರಿಯ ಧಾರಾವಾಹಿ ‘ಶ್ರೀ ರೇಣುಕಾಯಲ್ಲಮ್ಮ’. ಈ ಧಾರಾವಾಹಿಯ ರೇಣುಕೆ ಮತ್ತು ಜಮಧಗ್ನಿ ಪಾತ್ರಧಾರಿಗಳು, ಸೀರಿಯಲ್ ಮುಗಿದ ಹಲವು ದಿನಗಳ ಬಳಿಕ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

26
ಜಯಂತ್- ಮಹತಿ

‘ರೇಣುಕಾಯಲ್ಲಮ್ಮ’ ಧಾರಾವಾಹಿಯಲ್ಲಿ ಯುವ ಜಮಧಗ್ನಿಯ ಪಾತ್ರದಲ್ಲಿ ಜಯಂತ್ ನಟಿಸಿದ್ದರೆ, ಯಲ್ಲಮ್ಮನಾಗಿ ನಟಿ ಮಹತಿ ವೈಷ್ಣವಿ ನಟಿಸಿದ್ದರು. ಇವರಿಬ್ಬರ ಜೋಡಿಯನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಇದೀಗ ಇಬ್ಬರು ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

36
ಶಾಪಿಂಗ್ ಮಾಲ್ ನಲ್ಲಿ ಜೋಡಿ

ಜಯಂತ್ ಮತ್ತು ಮಹತಿ ಇಬ್ಬರು ಜೊತೆಯಾಗಿ ಶಾಪಿಂಗ್ ಮಾಲ್ ನಲ್ಲಿ ಕಾಣಿಸಿಕೊಂಡಿದ್ದು, ಮಿರರ್ ಸೆಲ್ಫಿ ಕ್ಲಿಕ್ ಮಾಡಿ, ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಇಬ್ಬರೂ ಡೇಟಿಂಗ್ ಮಾಡ್ತಿದ್ದೀರಾ? ಎನ್ನುವ ಕಾಮೆಂಟ್ ಕೂಡ ಮಾಡಿದ್ದಾರೆ.

46
ಬಿಂದಾಸ್ ಲುಕ್ ನಲ್ಲಿ ಸೀರಿಯಲ್ ಜೋಡಿ

ಜಯಂತ್ ನೀಲಿ ಜೀನ್ಸ್, ಬ್ಲ್ಯಾಕ್ ಟೀಶರ್ಟ್ ಮೇಲೆ ಆಫ್ ವೈಟ್ ಶರ್ಟ್ ಧರಿಸಿದ್ದರೆ, ಮಹತಿ, ನೀಲಿ ಬ್ಯಾಗಿ ಜೀನ್ಸ್ ಜೊತೆ ಪಿಂಕ್ ಬಣ್ಣದ ಟಾಪ್ ಧರಿಸಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಹಲವು ದಿನಗಳ ಬಳಿಕ ರೇಣುಕೆ-ಜಮಧಗ್ನಿಯನ್ನು ಈ ಲುಕ್ ನಲ್ಲಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

56
ಏನು ಮಾಡ್ತಿದ್ದಾರೆ ಜಯಂತ್

‘ರೇಣುಕಾಯಲ್ಲಮ್ಮ’ ಧಾರಾವಾಹಿ ಬಳಿಕ ಜಯಂತ್ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ‘ವಸುಧೈವ ಕುಟುಂಬ’ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು, ಇದೀಗ ‘ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

66
ಅವಕಾಶಕ್ಕಾಗಿ ಕಾಯುತ್ತಿದ್ದಾರೆ ವೈಷ್ಣವಿ

ಮಹತಿ ವೈಷ್ಣವಿ ಬಳಿಕ ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲ. ಹೊಸ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ತೂಕ ಇಳಿಸಿಕೊಂಡಿರುವ ಮಹತಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ಶೂಟ್ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories