ಆರಂಭವಾಗಿ ಮೂರು ತಿಂಗಳಲ್ಲೇ ಅಂತ್ಯ ಕಾಣ್ತಿದ್ಯಾ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ?

First Published | Jun 22, 2024, 9:46 AM IST

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಟಿಫನ್ ರೂಂ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. 
 

ಕೆಲವೊಂದು ಸೀರಿಯಲ್ ಗಳು ಅದ್ಭುತವಾಗಿ ಜನಪ್ರಿಯತೆ ಗಳಿಸುತ್ತವೆ. ಹಲವು ವರ್ಷಗಳ ಕಾಲ ಸೀರಿಯಲ್ ಗಳು (Serials) ಪ್ರಸಾರವಾಗುತ್ತವೆ. ಆದರೆ ಇನ್ನೂ ಕೆಲವು ಸೀರಿಯಲ್ ಗಳು ಆರಂಭವಾಗಿ ಕೆಲವೇ ಸಮಯದಲ್ಲಿ ಮುಗಿಸುವಂತಹ ಸ್ಥಿತಿ ಬರುತ್ತೆ. ಹೆಚ್ಚಾಗಿ ಟಿಆರ್ ಪಿ ಕಾರಣದಿಂದಲೇ ಈ ಸ್ಥಿತಿ ಬರುತ್ತೆ. 
 

ಇತ್ತೀಚೆಗೆ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ 6 ತಿಂಗಳ ಹಿಂದಷ್ಟೇ ಪ್ರಸಾರವಾಗಿದ್ದ ಬೃಂದಾವನ ಸೀರಿಯಲ್ ಕಾರಣಾಂತರಗಳಿಂದ ಪ್ರಸಾರ ನಿಲ್ಲಿಸಿತ್ತು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬಹು ನಿರೀಕ್ಷೆಯಿಂದ ಆರಂಭವಾಗಿದ್ದ ಲಕ್ಷ್ಮೀ ಟಿಫನ್ ರೂಂ ಇದೀಗ ಮುಕ್ತಾಯ ಕಾಣ್ತಿದೆಯಂತೆ. 
 

Tap to resize

ಸೋಶಿಯಲ್ ಮೀಡಿಯಾದ ಟ್ರೋಲ್ ಪೇಜ್ ಗಳ ಮಾಹಿತಿಯ ಪ್ರಕಾರ ಜೈಮಾತಾ ಕಂಬೈನ್ಸ್ ನವರ  ಇತ್ತೀಚೆಗಷ್ಟೇ ಆರಂಭವಾಗಿದ್ದ ಲಕ್ಷ್ಮೀ ಟಿಫನ್ ರೂಂ (ShrIlakshmi Tiffin Room) ಧಾರಾವಾಹಿ ಇದೇ ಜೂನ್ 29 ರಂದು ಕೊನೆಯ ಎಪಿಸೋಡ್ ಪ್ರಸಾರ ಮಾಡುವ ಮೂಲಕ ತನ್ನ ಪ್ರಸಾರವನ್ನು ಶಾಶ್ವತವಾಗಿ ನಿಲ್ಲಿಸಲಿದೆ ಎನ್ನಲಾಗುತ್ತಿದೆ. 
 

ಸುನೇತ್ರಾ ಪಂಡಿತ್, ಅನಂತವೇಲು, ಮಧುಮಿತಾ, ವಿಜಯಲತಾ, ವಚನ್, ಕಾವ್ಯ, ಭಗತ್, ಪ್ರೀತಮ್ ಮಕ್ಕಿಹಾಳಿ ನಟನೆಯ ‘ಲಕ್ಷ್ಮೀ ಟಿಫನ್ ರೂಮ್’ ಮಾರ್ಚ್ ತಿಂಗಳಲ್ಲಿ ಮೊದಲ ಎಪಿಸೋಡ್ ಪ್ರಸಾರವಾಗಿತ್ತು. ಉತ್ತಮ ಕಥೆ ಹೊಂದಿದ ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 
 

ನೇರ ನಡೆ ನೇರ ನುಡಿಯ ಹುಡುಗಿ ವರಲಕ್ಷ್ಮೀ ಐಎಎಸ್ ಅಧಿಕಾರಿ (IAS Officer) ಆಗಬೇಕೆಂಬ ಮಹತ್ತರ ಕನಸು ಹೊತ್ತ ಹುಡುಗಿ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹುಡುಗಿ ಎಂದರೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತರಾಗಿರಬೇಕೆಂದು ನಂಬಿರುವ ಮನೆಗೆ ಸೊಸೆಯಾಗಿ ಹೋಗುತ್ತಾಳೆ. 
 

ತನ್ನ ಗಂಡ ಗ್ರಾಜ್ಯುವೇಟ್ ಆಗಿರಬೇಕೆಂದು ಬಯಸಿದ್ದ ವರಲಕ್ಷ್ಮಿಗೆ ಸ್ಕಂದ ಕೇವಲ ಶಾಲಾ ವಿದ್ಯಾಭ್ಯಾಸ ಮಾಡಿದ್ದು ಎಂದು ತಿಳಿದು ಬೇಸರದಲ್ಲಿದ್ದಾಳೆ. ಇದೆಲ್ಲವನ್ನು ಎದುರಿಸಿ, ವರಲಕ್ಷ್ಮೀ ಐಎಎಸ್ ಓದುತ್ತಾಳೆಯೇ? ಎನ್ನುವ ಕುತೂಹಲ ಎಲ್ಲಾ ವೀಕ್ಷಕರಲ್ಲಿತ್ತು, ಆದರೆ ಇನ್ನು ಒಂದು ವಾರದಲ್ಲಿ ಸೀರಿಯಲ್ ಮುಗಿಯುತ್ತಿದೆ ಎನ್ನಲಾಗುತ್ತಿದೆ. 
 

ಕಥೆಯನ್ನು ಒಂದು ವಾರದಲ್ಲಿ ಉತ್ತಮ ಹಂತಕ್ಕೆ ತಂದು, ಹ್ಯಾಪಿ ಎಂಡಿಂಗ್ ಕೊಡಲಿದ್ದಾರೆ ಅನಿಸುತ್ತೆ. ಅಜ್ಜಯ್ಯನ ಸ್ವಭಾವ ಬದಲಾಗಿ, ವರಲಕ್ಷ್ಮೀ ಐಎಎಸ್ ಓದೋದಕ್ಕೆ ಒಪ್ಪಿಗೆ ಕೊಡುವ ಮೂಲಕ ಸೀರಿಯಲ್ ಮುಕ್ತಾಯವಾಗುವ ಸಾಧ್ಯತೆ ಇದೆ. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 
 

Latest Videos

click me!