'ಸ್ನೇಹದ ಕಡಲಲ್ಲಿ' ಶಿವರಾಜ್-ಪಲ್ಲವಿ ಸಂಭ್ರಮದಲ್ಲಿ 'ನಿನ್ನ ಜೊತೆ ನನ್ನ ಕಥೆ' ಅಜಿತ್-ಭೂಮಿ! ಇದು ಮಹಾಸಂಗಮ!

Published : Jul 18, 2025, 04:33 PM ISTUpdated : Jul 18, 2025, 04:38 PM IST

'ಸ್ನೇಹದ ಕಡಲಲ್ಲಿ' ಧಾರಾವಾಹಿ ಶಿವರಾಜ್‌ ತಂಗಿ ಮದುವೆ ಆಗಲಿದೆಯಾ? ಹೀಗೊಂದು ಸಂಭ್ರಮದ ವಿಡಿಯೋ ರಿಲೀಸ್‌ ಆಗಿದ್ದು, 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ ಅಜಿತ್‌, ಭೂಮಿ ಎಂಟ್ರಿಯಾಗಿದೆ. 

PREV
15

ಇಂದ್ರಜಿತ್‌, ಪಲ್ಲವಿ ಮದುವೆಯಾಗಿದೆ. ಆದರೆ ಮೊದಲ ರಾತ್ರಿಯ ದಿನವೇ ಇಂದ್ರಜಿತ್‌ ಎಂಥ ನೀಚ, ದುಷ್ಟ ಎನ್ನೋದು ಪಲ್ಲವಿಗೆ ಗೊತ್ತಾಗಿತ್ತು. ಹೀಗಾಗಿ ಅವಳು ಗಂಡನ ಮನೆ ಬಿಟ್ಟು ಹೊರಗಡೆ ಬಂದಳು.

25

ಗಂಡನ ಮನೆಯಿಂದ ಹೊರಗಡೆ ಬಂದ ಪಲ್ಲವಿಗೆ ಶಿವರಾಜ್‌ ಎನ್ನುವ ಅದ್ಭುತವಾದ ವ್ಯಕ್ತಿಯ ಸಹಾಯ ಸಿಕ್ಕಿತ್ತು. ಇವರಿಬ್ಬರ ನಿರ್ಮಲ ಸ್ನೇಹಕ್ಕೆ ಇಂದ್ರಜಿತ್‌ ಕಪ್ಪುಚುಕ್ಕೆ ಬರುವ ಹಾಗೆ ಮಾತನಾಡುತ್ತಿದ್ದನು.

35

ಇಂದ್ರಜಿತ್‌ ಜೊತೆ ಸಂಬಂಧ ಇದೆ ಎಂದು ಅವನು ಪಲ್ಲವಿಗೆ ನಿತ್ಯವೂ ಕೊಂಕು ನುಡಿಯುತ್ತಿದ್ದನು. ಇದರಿಂದ ಶಿವರಾಜ್‌ಗಾಗಲೀ, ಪಲ್ಲವಿಗಾಗಲೀ ನೆಮ್ಮದಿಯಿಂದ ಬದುಕಲು ಆಗುತ್ತಿರಲಿಲ್ಲ. ಈಗ ಪಲ್ಲವಿ ಚಾರಿತ್ರ್ಯದ ಮೇಲೆ ಅಪಕೀರ್ತಿ ಬರುವ ಹಾಗೆ ಮಾಡಿದ್ದಾನೆ.

45

ಆ ದುಷ್ಟ ಇಂದ್ರಜಿತ್ ಒಂದೇ ಕಾಲೇಜಿನಲ್ಲಿ, ಒಂದೇ ರೂಮ್‌ನಲ್ಲಿ ಶಿವರಾಜ್‌, ಪಲ್ಲವಿ ಲಾಕ್‌ ಆಗುವಂತೆ ಮಾಡಿದ್ದನು. ಅಷ್ಟೇ ಅಲ್ಲದೆ ಪಲ್ಲವಿ ಚಳಿಯಿಂದ ನಡುಗುತ್ತಿದ್ದಳು. ಆಗ ಶಿವರಾಜ್‌ ತನ್ನ ಶರ್ಟ್‌ ಬಿಚ್ಚಿ ಪಲ್ಲವಿಗೆ ಕೊಟ್ಟನು. ಅಲ್ಲಿಗೆ ಪೊಲೀಸರು, ಪಲ್ಲವಿ ಮನೆಯವರು ಬರುವಂತೆ ಮಾಡಿದ ಇಂದ್ರಜಿತ್‌ ಎಲ್ಲರ ಮುಂದೆ ಪಲ್ಲವಿ-ಶಿವು ಸಂಬಂಧಕ್ಕೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದನು.

55

ಪ್ರತಿಸಲ ಕಾಪಾಡುವ ಶಿವರಾಜ್‌ನನ್ನು ಈ ಬಾರಿ ಕಾಪಾಡಬೇಕು ಎಂದು ಪಲ್ಲವಿ, “ನಾನು ಇಷ್ಟಪಟ್ಟು ಶಿವರಾಜ್‌ ಜೊತೆ ಇದ್ದೆ” ಎಂದು ಹೇಳಿದ್ದಾಳೆ. ಇದನ್ನು ಕೇಳಿ ಅವಳ ಮನೆಯವರು ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದಾರೆ. ಶಿವರಾಜ್‌ ತಂಗಿ ಮದುವೆ ನಡೆಯಲಿದೆ. ಇದೇ ಸೋಮವಾರದಿಂದ ರಾತ್ರಿ 8-9 ಗಂಟೆಗೆ ʼನಿನ್ನ ಜೊತೆ ನನ್ನ ಕಥೆʼ - ಸ್ನೇಹದ ಕಡಲಲ್ಲಿ "ಮಹಾಸಂಗಮ" ಪ್ರಸಾರ ಆಗಲಿದೆ. ʼನಿನ್ನ ಜೊತೆ ನನ್ನ ಕಥೆʼ ಧಾರಾವಾಹಿಯ ಅಜಿತ್‌, ಭೂಮಿ, ಶಿವರಾಜ್‌-ಪಲ್ಲವಿ ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

Read more Photos on
click me!

Recommended Stories