ಪುಟ್ಟ ಗೌರಿ ಮದುವೆಯಲ್ಲಿ ಗೌರಿಯಾಗಿ, ಕನ್ನಡತಿ ಸೀರಿಯಲ್ ನಲ್ಲಿ ಭುವಿಯಾಗಿ ಕನ್ನಡಿಗರನ್ನು ರಂಜಿಸಿದ ನಟಿ ರಂಜನಿ ರಾಘವನ್ (Ranjani Raghavan) ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕಿರುತೆರೆಯ ಫೇವರಿಟ್ ನಟಿ ರಂಜನಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ ಯಾಕಂದ್ರೆ, ಅವರ ಸಹೋದರಿಯರ ಜೊತೆಗಿನ ಅವರ ಫೋಟೋ ಇದೀಗ ವೈರಲ್ ಆಗುತ್ತಿದೆ. ಇದೇ ವಿಷ್ಯಕ್ಕೆ ಅವರು ಸುದ್ದಿಯಲ್ಲಿದ್ದಾರೆ.
ಹೌದು, ನಟಿ ರಂಜನಿ ರಾಘವನ್ ಅವರಿಗೆ ಇಬ್ಬರು ಸಹೋದರಿಯರಿದ್ದು, ಒಬ್ಬರು ವೈಷ್ಣವಿ ರಾಘವನ್ (Vaishnavi Raghavan) ಮತ್ತು ಇನ್ನೊಬ್ಬರು ಸೌಧಾಮಿನಿ ರಾಘವನ್ (Saudhamini Raghavan). ಇಬ್ಬರೂ ಸಹ ಸದ್ಯ ನಟನೆಯಿಂದ ದೂರ ಇದ್ದು ವರ್ಕ್ ಮಾಡ್ತಿದ್ದಾರೆ.
ರಂಜನಿ ರಾಘವನ್ ಅವರ ಎರಡನೇ ತಂಗಿ ವೈಷ್ಣವಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ, ಇವರು ತಮ್ಮ ಇನ್ ಸ್ಟಾದಲ್ಲಿ ಇಬ್ಬರು ಸಹೋದರಿಯರ ಜೊತೆ ಫೋಟೊ ಶೇರ್ ಮಾಡಿ, ಸಹೋದರಿಯರು ಬೆಸ್ಟ್ ಫ್ರೆಂಡ್ಸ್ ಎಂದು ಬರೆದಿದ್ದಾರೆ.
ರಂಜನಿಯಂತೆ ವೈಷ್ಣವಿ ರಾಘವನ್ ಸಹ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್, ಇವರಿಗೆ ಇನ್ ಸ್ಟಾಗ್ರಾಂನಲ್ಲಿ (Instagram) 10 ಸಾವಿರದಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೋ, ತಮ್ಮ ಫೋಟೊವನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಇನ್ನು ರಂಜನಿಯ ಇನ್ನೊಬ್ಬರು ತಂಗಿ ಸೌಧಾಮಿನಿ ರಾಘವನ್. ಇವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಅಲ್ಲ. ಆದರೆ ಇಬ್ಬರೂ ಸಹ ಅಕ್ಕನ ಜೊತೆಗೆ ಎಲ್ಲಾ ಕೆಲಸಗಳಲ್ಲಿ ಜೊತೆಯಾಗಿರುತ್ತಾರೆ. ಅಕ್ಕನ ಪ್ರತಿ ಹೆಜ್ಜೆಗೂ ಬೆಂಬಲ ನೀಡುತ್ತಾರೆ.
ರಂಜನಿ ರಾಘವನ್ ಸದ್ಯ ಬರಗೂರು ರಾಮಚಂದ್ರಪ್ಪನವರ ಹೊಸ ಸಿನಿಮಾಗೆ ನಾಯಕಿಯಾಗಿ ವಿಜಯ್ ರಾಘವೇಂದ್ರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇವರು ಈಗಾಗಲೇ ಕನ್ನಡದಲ್ಲಿ ರಾಜಹಂಸ, ಟಕ್ಕರ್, ಸತ್ಯಂ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಹಕೂನಾಮ ಟಾಟ ಸಿನಿಮಾದಲ್ಲಿ ನಟಿಸಿದ್ದಾರೆ.