ನಿಮ್ಮ ನೆಚ್ಚಿನ ನಟಿಯರ ಸಹೋದರಿಯರು ಎಷ್ಟೊಂದು ಸ್ಟೈಲಿಶ್ ನೋಡಿ?

Published : Feb 24, 2023, 02:50 PM IST

ಕನ್ನಡ ಕಿರುತೆರೆಯ ನಟಿಯರು, ಯಾವುದೇ ಫಿಲಂ ಸ್ಟಾರ್ಸ್‌ಗೇನೂ ಕಡಿಮೆ ಇಲ್ಲ ಅನ್ನೋತರ, ತುಂಬಾ ಸುಂದರಿಯರಾಗಿದ್ದಾರೆ ಅನ್ನೋದು ನಿಮಗೆ ಗೊತ್ತು. ಆದರೆ ಹೆಚ್ಚಿನ ನಟಿಯರಿಗೆ ಸಹೋದರಿಯರಿದ್ದು, ಅವರು ಇನ್ನಷ್ಟು ಸ್ಟೈಲಿಶ್, ಸುಂದರಿಯರಾಗಿದ್ದಾರೆ ಗೊತ್ತಾ? ನಿಮ್ಮ ನೆಚ್ಚಿನ ತಾರೆಯರ ಸಹೋದರಿಯರು ಹೇಗಿದ್ದಾರೆ ನೀವೇ ನೋಡಿ : 

PREV
110
ನಿಮ್ಮ ನೆಚ್ಚಿನ ನಟಿಯರ ಸಹೋದರಿಯರು ಎಷ್ಟೊಂದು ಸ್ಟೈಲಿಶ್ ನೋಡಿ?

ಅಂಕಿತಾ ಅಮರ್ -ಅನನ್ಯಾ ಅಮರ್ (Ankita Amar - Ananya Amar)
ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಜನಮನ ಗೆದ್ದ ನಟಿ ಎಂದರೆ ಅದು ಅಂಕಿತಾ ಅಮರ್. ಸದ್ಯ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಿಮಗೊತ್ತಾ ಇವರ ತಂಗಿ ಯಾರೆಂದು. ಅವರು ಅನನ್ಯಾ ಅಮರ್. ಸದ್ಯ ಗಿಚ್ಚಿ ಗಿಲಿಗಿಲಿಯಲ್ಲಿ ತಮ್ಮ ಹಾಸ್ಯ ನಟನೆ ಮೂಲಕ ಇವರು ಸದ್ದು ಮಾಡ್ತಾ ಇದ್ದಾರೆ. 

210

ರಶ್ಮಿ ಪ್ರಭಾಕರ್ -ರಮ್ಯಾ ಪ್ರಭಾಕರ್ (Rashmi Prabhakar -Ramya Prabhakar)
ಕನ್ನಡ, ತಮಿಳು, ತೆಲುಗು ಕಿರುತೆರೆಗಳಲ್ಲಿ ಸಖತ್ ಬಿಜಿಯಾಗಿರುವ ನಟಿ ರಶ್ಮಿ ಪ್ರಭಾಕರ್. ಇವರ ಅಂದ ಮತ್ತು ನಟನಾ ಕೌಶಲ್ಯಕ್ಕೆ ಮಾರು ಹೋಗದವರಿಲ್ಲ. ಇವರು ಡ್ಯಾನ್ಸರ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಇವರ ಸಹೋದರಿ ರಮ್ಯಾ ಪ್ರಭಾಕರ್. ಸಹೋದರಿ ಜೊತೆಗಿನ ಫೋಟೋ ಶೂಟ್ ಸಖತ್ ವೈರಲ್ ಆಗಿತ್ತು, ಅವರು ಕೂಡ ರಶ್ಮಿಯವರಂತೆ ತುಂಬಾನೆ ಸ್ಟೈಲಿಶ್ ಆಗಿದ್ದಾರೆ. 

310

ನೇಹಾ ಗೌಡ - ಸೋನು ಗೌಡ (Neha Gowda -Sonu Gowda)
ಕಿರುತೆರೆಯ ನೆಚ್ಚಿನ ಗೊಂಬೆ ಅಂದ್ರೆ ಅದು ನೇಹಾ ಗೌಡ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಗಿದು ಎಷ್ಟೊ ಸಮಯ ಆದ್ರೂ ಇನ್ನೂ ಅವರು ಪ್ರೇಕ್ಷಕರಿಗೆ ಗೊಂಬೆಯಾಗಿ ಉಳಿದಿದ್ದಾರೆ. ಇವರ ಅಕ್ಕನ ಬಗ್ಗೆ ನಿಮಗೆ ಹೇಳಬೇಕಾಗಿಲ್ಲ ಬಿಡಿ, ಅವರು ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿರುವ ಸೋನು ಗೌಡ. ಈ ಅಕ್ಕಾ - ತಂಗಿ ಬಾಂಡಿಂಗ್ ತುಂಬಾ ಚೆನ್ನಾಗಿದ್ದು, ಇಬ್ಬರು ಜೊತೆಯಾಗಿ ಟ್ರಾವೆಲ್ ಕೂಡ ಮಾಡ್ತಾರೆ. ಇತ್ತೀಚೆಗೆ ಪಟ್ಟಾಯಂಗೂ ಜೊತೆಯಾಗಿ ಹೋಗಿ ಬಂದಿದ್ದಾರೆ. 

410

ಕಾವ್ಯ ಗೌಡ - ಭವ್ಯಾ ಗೌಡ (Kavya Gowda - Bhavya Gowda)
ಕನ್ನಡದ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿಯರಲ್ಲಿ ಕಾವ್ಯ ಗೌಡ ಕೂಡ ಒಬ್ಬರು. ಸದ್ಯ ಮದುವೆಯಾದ ಬಳಿಕ ಅವರು ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸುಂದರಿಯ ಸಹೋದರಿ ಭವ್ಯಾ ಗೌಡ ಸಹ ತುಂಬಾನೆ ಸ್ಟೈಲಿಶ್ ಆಗಿದ್ದಾರೆ, ಇವರು ಫ್ಯಾಷನ್ ಡಿಸೈನರ್ ಕೂಡ ಆಗಿದ್ದಾರೆ.

510

ಮೇಘಾ ಶೆಟ್ಟಿ - ಹಾರ್ಧಿಕಾ ಶೆಟ್ಟಿ - ಸುಶ್ಮಾ ಶೆಟ್ಟಿ (Megha Shetty, Hardhika Shetty and Sushma Shetty)
ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಈ ನಟಿ ಸ್ವಲ್ಪ ಸಮಯದಲ್ಲೇ ಸಖತ್ ಜನಪ್ರಿಯತೆ ಗಳಿಸಿದರು. ಅಷ್ಟೇ ಅಲ್ಲ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೂ ನಟಿಸುವ ಚಾನ್ಸ್ ಇವರಿಗೆ ಸಿಕ್ಕಿದೆ. ಇದೀಗ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸೋ ಹಾದಿಯಲ್ಲಿರುವ ಈ ನಟಿಗೆ ಸುಂದರಿಯರಾದ ಹಾರ್ಧಿಕಾ ಶೆಟ್ಟಿ, ಸುಶ್ಮಾ ಶೆಟ್ಟಿ ಎಂಬ ಇಬ್ಬರು ಸಹೋದರಿಯರಿದ್ದಾರೆ. 

610

ಕವಿತಾ ಗೌಡ - ಮೊನಿಷಾ ಗೌಡ (Kavitha Gowda -Monisha Gowda)
ಲಕ್ಷ್ಮೀ ಬಾರಾಮ್ಮ ಖ್ಯಾತಿಯ ಚಿನ್ನು ಆಲಿಯಾಸ್ ಕವಿತಾ ಗೌಡ, ಸೀರಿಯಲ್ ನಲ್ಲಿ ಮುಗ್ಧ ಪಾತ್ರದ ಮೂಲಕ ಜನಮನ ಗೆದ್ದಿದ್ದರು. ಮದುವೆಯಾದ ಬಳಿಕ ಇವರು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು ಕಡಿಮೆಯೇ. ಆದ್ರೂ ಇಂದಿಗೂ ಜನರು ಇವರ ಚಿನ್ನು ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇವರಿಗೂ ಒಬ್ಬ ಮುದ್ದಾದ ತಂಗಿ ಇದ್ದಾರೆ. ಅವರ ಹೆಸರು ಮೊನಿಷಾ ಗೌಡ. 

710

ಭವ್ಯಾ ಗೌಡ - ದಿವ್ಯಾ ಗೌಡ (Bhavya Gowda - Divya Gowda)
ಗೀತಾ ಸೀರಿಯಲ್ ಪಾತ್ರದಲ್ಲಿ ಭವ್ಯಾ ಗೌಡ ಸೋಶಿಯಲ್ ಮೀಡಿಯಾ ಖಾತೆಯನ್ನು ನೋಡಿದರೆ ನಿಮಗೆ ಅಲ್ಲಿ ಇವರ ಸಹೋದರಿಯ ಸಾಕಷ್ಟು ಫೋಟೋಗಳು ಕಾಣಸಿಗೋದು ಖಚಿತ. ಇವರು ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದು, ಹೆಚ್ಚಾಗಿ ತಮ್ಮ ಸಹೋದರಿ ದಿವ್ಯಾ ಗೌಡರ ಜೊತೆಗಿನ ಫೋಟೋ ಶೇರ್ ಮಾಡುತ್ತಿರುತ್ತಾರೆ. 
 

810

ಮಾನಸಿ ಜೋಶಿ -ಇಂಚರಾ ಜೋಶಿ (Mansi Joshi - Inchara Joshi)
ಪಾರು ಸೀರಿಯಲ್ ನ ವಿಲನ್ ರೀ ಎಂಟ್ರಿಯಾಗಿದೆ. ಅಂದ್ರೆ ಮಾನಸಿ ಜೋಶಿ ಮತ್ತೆ ಪಾರು ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕೂಡ ತಮಿಳು ಸೀರಿಯಲ್ ನಲ್ಲೂ ಕೂಡ ನಟಿಸಿದ್ದರು. ಇವರ ತಂಗಿ ಕೂಡ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರೇ. ಅವರು ಇಂಚರಾ ಜೋಶಿ. ಅಕ್ಕ -ತಂಗಿ ಜೊತೆಯಾಗಿ ಸಾಕಷ್ಟು ಫೋಟೋ ಶೂಟ್ ಮಾಡಿಸಿದ್ದಾರೆ.ಇವರು ರಂಗನಾಯಕಿ ಸೀರಿಯಲ್ ನಲ್ಲಿ ನಟಿಸಿದ್ದರು.ಸದ್ಯ ಕಥೆಯೊಂದು ಶುರುವಾಗಿದೆ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. 

910

ಅನುಪಮಾ ಗೌಡ - ತೇಜಸ್ವಿನಿ ಗೌಡ (Anupama Gowda - Tejaswini Gowda)
ಕನ್ನಡ ಸೀರಿಯಲ್, ಸಿನಿಮಾ, ಬಿಗ್ ಬಾಸ್, ಕಿರುತೆರೆಯಲ್ಲಿ ನಿರೂಪಕಿಯಾಗಿ ಎಲ್ಲಾ ಕಡೆಯಲ್ಲೂ ಸೈ ಎನಿಸಿಕೊಂಡಿದ್ದ ನಟಿ- ನಿರೂಪಕಿ ಅನುಪಮಾ ಗೌಡ ಅವರಿಗೆ ಅಷ್ಟೇ ಕ್ಯೂಟ್ ಆಗಿರುವ ತಂಗಿ ಇದ್ದಾರೆ, ಅವರು ತೇಜಸ್ವಿನಿ ಗೌಡ.  ಇವರು ಕೂಡ ನಟಿ. 

1010

ಚಂದನಾ ಅನಂತಕೃಷ್ಣ -ಚಿನ್ಮಯಿ ಅನಂತಕೃಷ್ಣ (Chandana Anantakrishna - Chinmayee Ananthakrishna)
ಚಂದನಾ ಅನಂತಕೃಷ್ಣ ರಾಜಾ -ರಾಣಿ ಸೀರಿಯಲ್ ನಲ್ಲಿ ಚುಕ್ಕಿ ಪಾತ್ರದ ಮೂಲಕ ತುಂಬಾ ಖ್ಯಾತಿ ಪಡೆದಿದ್ದರು, ಬಳಿಕ ಇವರು ಬಿಗ್ ಬಾಸ್ ನಲ್ಲೂ ಜನಪ್ರಿಯತೆ ಗಳಿಸಿದ್ದರು. ಸದ್ಯ ಈ ನಟಿ ಆಲ್ಬಂ ಸಾಂಗ್, ಚಿತ್ರ, ಕಿರುಚಿತ್ರ, ಭರತನಾಟ್ಯ, ಸಂಗೀತದಲ್ಲಿ ಬ್ಯುಸಿಯಾಗಿದ್ದಾರೆ. ಇವರಿಗೆ ಚಿನ್ಮಯಿ ಅನಂತಕೃಷ್ಣ ಎನ್ನುವ ಹಿರಿಯ ಸಹೋದರಿ ಕೂಡ ಇದ್ದಾರೆ. 

click me!

Recommended Stories