ವೈವಾಹಿಕ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ನಟಿ ಸಿರಿ… ಮದ್ವೆಲಿ ಆಂಕರ್ ಜಾನ್ವಿ ಕೈ ಎಳೆದೋರು ಯಾರು?

First Published | Aug 29, 2024, 6:32 PM IST

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಹೆಂಡತಿ ಹಾಗೂ ತುಳಸಿಯ ಮುದ್ದಿನ ಸೊಸೆಯಾಗಿ ನಟಿಸುತ್ತಿರೋ ಚಂದನ ರಾಘವೇಂದ್ರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ಝೀ ಕನ್ನಡದ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತುವಿನಲ್ಲಿ (Srirastu Shubhamastu) ತುಳಸಿ ಫಸ್ಟ್ ಫ್ರೆಂಡ್, ಬೆಸ್ಟ್ ಸೊಸೆಯಾಗಿ ಅದಕ್ಕಿಂತ ಹೆಚ್ಚಾಗಿ ಮಗಳಾಗಿ ಹಾಗೂ ಸಮರ್ಥ್ ಪ್ರೀತಿಯ ಮಡದಿ ಸಿರಿಯಾಗಿ  ನಟಿಸುತ್ತಿರೋ ನಟಿ ಚಂದನ ರಾಘವೇಂದ್ರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ಹೌದು, ಸಿರಿ ಪಾತ್ರಕ್ಕೆ ಜೀವ ತುಂಬಿ ನಟಿಸುವ ಸೊಸೆ ಅಂದ್ರೆ ಹೀಗಿರಬೇಕು ಎಂದು ಎಲ್ಲರಿಗೂ ಅನಿಸುವಂತೆ ಮಾಡಿದ ನಟಿ ಚಂದನ ರಾಘವೇಂದ್ರ (Chandana Raghavendra). ಇವರು ಸಪ್ತಪದಿ ತುಳಿದಿದ್ದು. ಯಾವಾಗ? ಎಲ್ಲಿ ಮದ್ವೆ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. 
 

Tap to resize

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ ಅವರ ಹೊಟೇಲ್ ನಲ್ಲಿ ಪಿಎ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುಷ್ಮಿತಾ ಜಗ್ಗಪ್ಪ (Sushmitha Jaggappa), ಚಂದನಾ ಮದುವೆಗೆ ತೆರಳಿದ್ದು, ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡು ಚಂದನಾಗೆ ಕಂಗ್ರಾಜುಲೇಶನ್ ಎಂದಿದ್ದಾರೆ. 
 

ಸುಷ್ಮಿತಾ ಪೋಸ್ಟ್ ನೋಡಿದ್ರೆ ನಿನ್ನೆ ದೇವಸ್ಥಾನವೊಂದರಲ್ಲಿ ಚಂದನಾ ವಿವಾಹ ಸರಳವಾಗಿ ಹಾಗೂ ಸಾಂಪ್ರದಾಯಬದ್ಧವಾಗಿ ನಡೆದಂತೆ ಕಾಣುತ್ತಿದೆ. ಮದುವೆ ಸಮಾರಂಭದಲ್ಲಿ ನಟಿ ಸುಧಾರಾಣಿ (Sudharani) ಸಹ ಹಾಜರಿದ್ದರು. 
 

ಇನ್ನು ಕನ್ನಡದ ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾನ್ವಿ ರಾಯಲ (Janvi Rayala) ಅವರು ಚಂದನ ಗೆಳತಿಯಾಗಿದ್ದು, ಅವರು ಸಹ ಮದ್ವೆ ಸಮಾರಂಭದಲ್ಲಿ ಮಿಂಚಿದ್ದರು, ಚಂದನಾ ಬಳಿ ಜಾನ್ವಿ ತೆರಳುತ್ತಿದ್ದಾರೆ, ಯಾರೋ ಕೈಹಿಡಿದು ಎಳೆಯುವ ದೃಶ್ಯ ಸಹ ಸುಷ್ಮಿತಾ ವಿಡಿಯೋದಲ್ಲಿ ಸೆರೆಯಾಗಿದ್ದು, ಕೈ ಎಳೆದವರು ಯಾರು ಹಾಗೂ ಯಾಕೆ ಹಾಗೆ ಮಾಡಿದ್ರು ಅನ್ನೋದು ತಿಳಿದು ಬಂದಿಲ್ಲ. 
 

ಜಾನ್ವಿ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಚಂದನ ರಾಘವೇಂದ್ರ ಅರಶಿನ ಶಾಸ್ತ್ರದ ಸುಂದರವಾದ ವಿವಿಧ ಫೋಟೊಗಳನ್ನು ಶೇರ್ ಮಾಡಿದ್ದು, ಇಬ್ಬರಿಗೂ ಜಾನ್ವಿ ಶುಭ ಕೋರಿದ್ದಾರೆ. ಚಂದನ ಹಳದಿ ಬಣ್ಣದ ಪ್ಲೋರಲ್ ಪ್ರಿಂಟ್ ಇರುವ ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. 
 

ಚಂದನ ಮದುವೆಯಾಗಿರುವ ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಜಾನ್ವಿ ಹಂಚಿಕೊಂಡ ಮಾಹಿತಿ ಪ್ರಕಾರ ಹುಡುಗನ ಹೆಸರು ಸಂಕೇತ್ ಕಂಪ್ಲಿ. ಇವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಇವರು ಲೈಸೆನ್ಸ್ಡ್ ಕಾಂಟ್ರಾಕ್ಟರ್. ಚಂದನಾ ಮತ್ತು ಸಂಕೇತ್ ಇಬ್ಬರಿಗೂ ಹ್ಯಾಪಿ ಮ್ಯಾರೀಡ್ ಲೈಫ್. 
 

Latest Videos

click me!