ಶೋಭಿತಾ ಶಿವಣ್ಣ ಸಾವಿನ ಸುತ್ತ ಅನುಮಾನ, ಪತಿ ಫೋಟೋ ಇನ್‌ಸ್ಟಾದಿಂದ ಡಿಲೀಟ್ ಮಾಡಿದ್ದ ನಟಿ!

First Published | Dec 1, 2024, 11:38 PM IST

ನಟಿ ಶೋಭಿತಾ ಶಿವಣ್ಣ ಸಾವು ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಪೈಕಿ ಮದುವೆ ವಿಚಾರ ಇದೀಗ ಭಾರಿ ಚರ್ಚೆಯಾಗುತ್ತಿದೆ. ಶೋಭಿತಾ ಮದುವೆಯಾದ ಕೆಲ ದಿನಗಳಲ್ಲಿ ಪೋಸ್ಟ್ ಮಾಡಿದ್ದ ಮದುವೆ ಫೋಟೋ ಹಾಗೂ ಗಂಡನ ಫೋಟೋ ಡಿಲೀಟ್ ಮಾಡಿದ್ದರು.

ಕನ್ನಡ ಸೀರಿಯಲ್ ನಟಿ ಶೋಭಿತಾ ಶಿವಣ್ಣ ದಿಢೀರ್ ಸಾವು ಪ್ರಕರಣ ಇದೀಗ ಆಘಾತ ಸೃಷ್ಟಿಸಿದೆ. 12ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಡೆಸಿದ್ದ ಶೋಭಿತಾ ಸಾವು ಕಿರುತೆರೆ ಪ್ರೇಕ್ಷಕರು ಮಾತ್ರವಲ್ಲ ಕನ್ನಡಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಟಿ ಶೋಭಿತಾ ಸಾವಿಗೆ ಕಾರಣಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಇದರ ನಡುವೆ ಕೆಲ ಅನುಮಾನಗಳು ಬಲಗೊಳ್ಳುತ್ತಿದೆ.

ಶೋಭಿತಾ ಶಿವಣ್ಣ ಸಾವಿ ಅನುಮಾನಗಳು ಬೆಳೆಯುತ್ತಿದೆ. ಈ ಪೈಕಿ ಶೋಭಿತಾ ಶಿವಣ್ಣ ದಾಂಪತ್ಯ ಜೀವನ ಸರಿಯಾಗಿರಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವ ಕೆಲ ಘಟನೆಗಳು ನಡೆದಿದೆ. ಈ ಪೈಕಿ ಶೋಭಿತಾ ಶಿವಣ್ಣ ಇನ್‌ಸ್ಟಾಗ್ರಾಂನಲ್ಲಿ ಪತಿಯ ಒಂದೇ ಒಂದು ಫೋಟೋ ಇಲ್ಲ.

Tap to resize

ಶೋಭಿತಾ ಶಿವಣ್ಣ ದಿಢೀರ್ ಮದುವೆಯಾಗಿ ಅಭಿಮಾನಿಗಳಿಗೆ, ಸಹ ನಟ ನಟಿಯರಿಗೆ ಶಾಕ್ ನೀಡಿದ್ದರು. ಮದುವೆ ಬಳಿಕ ಶೋಭಿತ ಶಿವಣ್ಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆ ಫೋಟೋ, ಪತಿ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆದರೆ ಮದುವೆಯಾದ ಕೆಲ ದಿನಗಳ ನಂತರ ಈ ಫೋಟೋಗಳನ್ನು ಡಿಲೀಟ್ ಮಾಡಿದ್ದರು.

ಪತಿ ಜೊತೆಗಿನ ಯಾವುದೇ ಫೋಟೋಗಳು ಶೋಭಿತಾ ಶಿವಣ್ಣ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಲ್ಲ. ಮದುವೆಯ ಫೋಟೋ ಸೇರಿದಂತೆ ಎಲ್ಲವನ್ನೂ ಡಿಲೀಟ್ ಮಾಡಿದ್ದರು. ಇದು ಶೋಭಿತ ದಾಂಪತ್ಯ ಜೀವನ ಸರಿಯಾಗಿರಲಿಲ್ಲ ಅನ್ನೋದಕ್ಕೆ ಹಲವು ಕಾರಣಗಳನ್ನು ನೀಡುತ್ತಿದೆ. ಶೋಭಿತಾ ವೈಯುಕ್ತಿಕ ಜೀವನವೇ ಅವರ ಜೀವನಕ್ಕೆ ಮುಳ್ಳಾಗಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ.

ಮದುವೆ ಬಳಿಕ ಶೋಭಿತ ಶಿವಣ್ಣ ಬಣ್ಣದ ಬದುಕಿನಿಂದ ಮಾತ್ರವಲ್ಲ, ತಮ್ಮ ಆಪ್ತರು, ಗೆಳೆಯರು, ಸಹ ನಟ ನಟಿಯರು ಸೇರಿದಂತೆ ಎಲ್ಲರಿಂದಲೂ ಅಂತರ ಕಾಯ್ದುಕೊಂಡಿದ್ದರು. ಪೋಷಕರನ್ನು ಹೊರತುಪಡಿಸಿದರೆ ಇನ್ಯಾರ ಜೊತೆಗೂ ಶೋಭಿತ ಶಿವಣ್ಣ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಎಲ್ಲರಿಂದಲೂ ದೂರ ಉಳಿದಿದ್ದರು. ಇದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಹೈದರಾಬಾದ್ ಮೂಲದ ಸುದೀರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2023ರಲ್ಲಿ ಶೋಭಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಶೋಭಿತಾ ಹೈದರಾಬಾದ್‌ನಲ್ಲೇ ನೆಲೆಸಿದ್ದರು. ಶೋಭಿತಾ ಮೃತದೇಹದ ಬಳಿಕ ಯಾವುದೇ ನೋಟ್ ಪತ್ತೆಯಾಗಿಲ್ಲ. ಆದರೆ ಶೋಭಿತಾ ಫೋನ್ ಪೊಲೀಸರು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Latest Videos

click me!