ಹಾಸನ ಜಿಲ್ಲೆಯ ಸಕಲೇಶಪುರದವರಾದ ಶೋಭಿತಾ `ಫಸ್ಟ್ ಡೇ ಫಸ್ಟ್ ಶೋ` ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹೆಚ್ಚು ಜನಪ್ರಿಯವಾಗಲಿಲ್ಲ.
2010ರಲ್ಲಿ ಪ್ರಸಾರ ಆಗಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕ ಶೋಭಿಯಾ ಶಿವಣ್ಣ ಕಿರುತೆರೆ ಪ್ರವೇಶ ಮಾಡಿದ್ದರು. ಅಲ್ಲಿಂದ 'ನಿನ್ನಿಂದಲೇ', 'ಮನಸೆಲ್ಲ ನೀನೇ', ಗಾಳಿಪಟ, ಮಂಗಳಗೌರಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು, ಮನೆದೇವರು ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದರು. ಶೋಭಿತಾ ಶಿವಣ್ಣ 30ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರ ವಿವಾಹದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆ ವೇಳೆ ಅವರು ಪತಿ ಹೆಸರು, ವೃತ್ತಿ ಏನು? ಅನ್ನೋದು ಕೂಡ ಗೊತ್ತಾಗಿರಲಿಲ್ಲ.