ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿಆರ್‌ಪಿ ಬದಲಾಗುತ್ತದೆ. ಅಂತೆಯೇ ಕನ್ನಡದಲ್ಲಿ ಕೂಡ ಹೊಸ ಧಾರಾವಾಹಿಗಳ ಆಗಮನವಾಗುತ್ತಿದ್ದು, ಸೀರಿಯಲ್‌ನಲ್ಲಿ ಮಾಡಿಕೊಂಡ ಕೆಲ ಬದಲಾವಣೆಗಳಿಂದ ಟಿಆರ್‌ಪಿಯಲ್ಲಿ ಏರಿಳಿತ ಕಾಣಬಹುದು. ಹಾಗಾದರೆ ನಂ 1 ಸೀರಿಯಲ್ ಯಾವುವು? ಟಾಪ್ 10 ಧಾರಾವಾಹಿಗಳು ಯಾವುವು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಗೆ 5.4 ಟಿಆರ್‌ಪಿ ಸಿಕ್ಕಿದೆ. ಸುಷ್ಮಾ ರಾವ್ ಇದರ ನಾಯಕಿ.
414
ರಿತ್ವಿಕ್ ಮಠದ್, ದಿವ್ಯಾ ಉರುಡುಗ ನಟನೆಯ ʼನಿನಗಾಗಿʼ ಧಾರಾವಾಹಿಗೆ 4.3 ಟಿಆರ್‌ಪಿ ಸಿಕ್ಕಿದೆ. ಪುಟ್ಟ ಮಗು ಸಿರಿ ಸಿಂಚನಾ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
514
ನಟ ಧನುಷ್ ಎಸ್ ಗೌಡ ನಟನೆಯ ʼನೂರು ಜನ್ಮಕೂʼ ಧಾರಾವಾಹಿಗೆ 4.1 ಟಿಆರ್‌ಪಿ ಸಿಕ್ಕಿದೆ. ಇದು ಹೊಸ ಸೀರಿಯಲ್. ಸೂಪರ್ ನ್ಯಾಚುಲರ್ ಕಥೆ ಇದರಲ್ಲಿದೆ.
614
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಗೆ 4.6 ಟಿಆರ್‌ಪಿ ಸಿಕ್ಕಿದೆ. ರಿತ್ವಿಕ್ ಕೃಪಾಕರ್, ಮೌನ ಗುಡ್ಡೇಮನೆ ಈ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
714
ದೊಡ್ಡ ತಾರಾಗಣ ಇರುವ, ವಾರಕ್ಕೆ ಐದು ದಿನ ಒಂದು ಗಂಟೆಗಳ ಕಾಲ ಪ್ರಸಾರ ಆಗುವ ಲಕ್ಷ್ಮೀ ನಿವಾಸ ಧಾರಾವಾಹಿಗೆ 7.6 ಟಿಆರ್‌ಪಿ ಸಿಕ್ಕಿದೆ.
814
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಅಮೃತಧಾರೆ ಧಾರಾವಾಹಿಗೆ 6.5 ಟಿಆರ್‌ಪಿ ಸಿಕ್ಕಿದೆ. ಛಾಯಾ ಸಿಂಗ್, ರಾಜೇಶ್ ನಟರಂಗ ಈ ಧಾರಾವಾಹಿ ಕಲಾವಿದರು.
914
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ನಿನ್ನ ಕಥೆ ನನ್ನ ಜೊತೆ ಧಾರಾವಾಹಿಗೆ 4.8 ಟಿಆರ್‌ಪಿ ಸಿಕ್ಕಿದೆ. ಇನ್ನು ಆಸೆ ಧಾರಾವಾಹಿಗೆ 2.3 ಟಿಆರ್‌ಪಿ ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.