ಅಂತರಪಟ ಸೀರಿಯಲ್ ಸಾವಿತ್ರಿ ಬಾಲಿವುಡ್ ಸ್ಟಾರ್ ಕಿಡ್ಸ್, ತೆಂಡೂಲ್ಕರ್ ಮಗಳಿಗೂ ಟೀಚರ್!

First Published Jun 19, 2024, 5:42 PM IST

ಅಂತರಪಟ ಧಾರಾವಾಹಿಯಲ್ಲಿ ಆರಾಧನಾ ಅತ್ತೆ ಮತ್ತು ಸುಶಾಂತ್ ಅಮ್ಮನಾಗಿರುವ ಸಾವಿತ್ರಿ ರಿಯಲ್ ಲೈಫಲ್ಲಿ ಸಖತ್ ಮಾಡರ್ನ್, ಅಷ್ಟೇ ಅಲ್ಲ ಈ ನಟಿ ಬಾಲಿವುಡ್ ಸ್ಟಾರ್ ಕಿಡ್ಸ್ ಗೆ ಟೀಚರ್ ಆಗಿದ್ರು ಗೊತ್ತಾ? 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಸೀರಿಯಲ್ (Antarapata Serial) ನೋಡೋರು ನೀವಾಗಿದ್ರೆ ಸಾವಿತ್ರಿ ಅಂದ್ರೆ ಯಾರು ಅಂತ ನಿಮಗೆ ಗೊತ್ತೇ ಇರುತ್ತೆ. ಯಾವಾಗ್ಲೂ ಸೀರೆಯುಟ್ಟು, ತಲೆ ತುಂಬe ಹೂವು ಮುಡಿದು, ಅಪ್ಪಟ ಗೃಹಿಣಿಯಾಗಿರುವ ಸಾವಿತ್ರಿ ರಿಯಲ್ ಲೈಫಲ್ಲಿ ಸಖತ್ ಮಾಡರ್ನ್. 
 

ಅಂತರಪಟ ಧಾರಾವಾಹಿಯಲ್ಲಿ ಧರ್ಮೇಂದ್ರ ಪ್ರಧಾನ್ ಪತ್ನಿಯಾಗಿ ಆರಾಧನಾ ಅತ್ತೆ ಮತ್ತು ಸುಶಾಂತ್ ಅಮ್ಮ ಸಾವಿತ್ರಿಯಾಗಿ ಅಮೋಘವಾಗಿ ಅಭಿನಯಿಸುತ್ತಿರುವ ನಟಿಯ ರಿಯಲ್ ಹೆಸರು ಅಕ್ಷತಾ ಗಣೇಶ್ (Akshatha Ganesh). ಸೀರಿಯಲ್ಲಲ್ಲಿ ಕಾಣುವಂತೆ ಇವರೇನೂ ಸಿಂಪಲ್ ಅಲ್ವೇ ಅಲ್ಲ, ಸಖತ್ ಮಾಡರ್ನ್ ಬೆಡಗಿ. ಜೊತೆಗೆ ಎರಡೂವರೆ ವರ್ಷದ ಪುಟ್ಟಮಗುವಿನ ತಾಯಿ. 
 

ಇವರ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಹೇಳ್ತೀವಿ ಕೇಳಿ. ಕಳೆದ 20 ವರ್ಷಗಳಿಂದ ಅಕ್ಷತಾ ಶಿಕ್ಷಣ ವಲಯದಲ್ಲಿ ಕೆಲಸ ಮಾಡ್ತಿದ್ದಾರೆ. ಇವರೊಬ್ಬ ಟೀಚರ್ ಮತ್ತು ಸ್ಕಾಲರ್ ಕೂಡ ಹೌದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿ (MA in English) ಪಡೆದಿರುವ ಅಕ್ಷತಾ ಯುರೋಪಿಯನ್ ಕ್ಲಾಸಿಕ್ ಡ್ಯಾನ್ಸ್ ಕೂಡ ಕಲಿತಿದ್ದಾರೆ. 
 

ಅಕ್ಷತಾ ನವದೆಹಲಿಯ ಪಾಥ್ ವೇಸ್ ವರ್ಲ್ಡ್ ಸ್ಕೂಲ್, ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು DASB (ದಿ ಜರ್ಮನ್ ಸ್ಕೂಲ್ ಆಫ್ ಬಾಂಬೆ) ಸೇರಿ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಇಂಗ್ಲೀಷ್ ಅನ್ನು ಫಾರಿನ್ ಲಾಂಗ್ವೇಜ್ ಆಗಿ ಕಲಿಸುವುದರಿಂದ ಹಿಡಿದು ವಿಶ್ವ ಸಾಹಿತ್ಯ ಮತ್ತು ನಾಟಕದಲ್ಲೂ ಇಂಗ್ಲೀಷ್ ಭಾಷಾ ಪ್ರಯೋಗ ಮಾಡೋದ್ರಲ್ಲಿ ಪರಿಣತಿ ಪಡೆದಿದ್ದಾರೆ.

ಸಿಲ್ಲಿಲಲ್ಲಿ ಸೀಸನ್ 2 ನಲ್ಲಿ ಲಲಿತಾಂಬ ಪಾತ್ರಕ್ಕೆ ಜೀವ ತುಂಬಿದ್ದ ಈ ನಟಿ, ಬಾಲಿವುಡ್ ಸ್ಟಾರ್ ಕಿಡ್‌ಗಳಿಗೂ (Bollywood star kids) ಸಹ ಪಾಠ ಮಾಡಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಬಾಲಿವುಡ್ ನ ಹಲವು ನಟ-ನಟಿಯರ ಮಕ್ಕಳು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಕ್ಕಳಿಗೂ ಇವರು ಇಂಗ್ಲೀಷ್ ಪಾಠ ಮಾಡಿದ್ದಾರೆ. 
 

ಬಾಲಿವುಡ್‌ ಸೂಪರ್ ಸ್ಟಾರ್ ಆಗಿರುವ ಶಾರುಖ್ ಖಾನ್ (Sharukh Khan), ನಟ ಸೈಫ್ ಅಲಿ ಖಾನ್, ನಟಿ ಜೂಹಿ ಚಾವ್ಲಾ, ಕ್ರಿಕೆಟ್ ದಿಗ್ಗಜರಾಗಿರುವ  ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ತಾರೆಯರ ಮಕ್ಕಳಿಗೆ ಅಕ್ಷತಾ ಗಣೇಶ್ ಇಂಗ್ಲೀಷ್ ಕಲಿಸಿದ್ದಾರೆ.
 

ದೇಶದ ಪ್ರತಿಷ್ಟಿತ ವಿದ್ಯಾ ಸಂಸ್ಥೆಯಾಗಿರುವ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ (Dheerubhai International School) ಇಂಗ್ಲೀಷ್ ಟೀಚರ್ ಆಗಿ ಸುಮಾರು 10 ವರ್ಷಗಳ ಕಾಲ ಇವರು ಕೆಲಸ ಮಾಡಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳು ಇದೇ ಸ್ಕೂಲಲ್ಲಿ ಕಲಿಯೋದ್ರಿಂದ ಶಾರೂಖ್, ಹೃತಿಕ್, ಸಚಿನ್ ತೆಂಡೂಲ್ಕರ್ ಅಷ್ಟೇ ಯಾಕೆ ಮುಕೇಶ್ ಅಂಬಾನಿ, ನೀತಾ ಅಂಬಾನಿ ಜೊತೆಗೂ ಇವರು ಮಾತುಕತೆ ನಡೆಸಿದ್ದಾರೆ, ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡಿರೋದು ನೋಡಬಹುದು. 
 

ಇನ್ನು ಹಲವು ವರ್ಷಗಳಿಂದ ನಟಿಸುತ್ತಿರುವ ಅಕ್ಷತಾ ಸಿಲ್ಲಿಲಲ್ಲಿ, ಅಂತರಪಟ ಮಾತ್ರವಲ್ಲ, ಶ್ರೀನಿ ಪದ್ದು, ಸೇರಿ ಹಲವು ಸೀರಿಯಲ್‌ಗಳಲ್ಲಿ ನಾಯಕಿ ಪಾತ್ರ, ಸಿನಿಮಾ ಸಿರಿಯಲ್‌ಗಳಲ್ಲಿ ಪೋಷಕ ಪಾತ್ರ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೂ ಇದೆ, ಹಲವು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿಯೂ ಜನಪ್ರಿಯತೆ ಗಳಿಸಿದ್ದಾರೆ. 
 

Latest Videos

click me!