ಹೊಸ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ… So cool ಎಂದ ಸಂಗೀತಾ ಶೃಂಗೇರಿ

First Published | Aug 2, 2024, 12:24 PM IST

ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಕಂಟೆಸ್ಟಂಟ್ ಆಗಿ ಮಿಂಚಿದ ಭೂಮಿ ಶೆಟ್ಟಿ ಮತ್ತೊಮ್ಮೆ ಬಾಕ್ಸ್ ಬ್ರೈಡ್ ಮಾಡ್ಕೊಂಡು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಬಿಗ್ ಬಾಸ್ ಸೀಸನ್ 7ರ ಮೂಲಕ ಅಪಾರ ಅಭಿಮಾನಿಗಳನ್ನ ಪಡೆದ ಕಿನ್ನರಿಯ ಸುಂದರಿ ಭೂಮಿ ಶೆಟ್ಟಿ (Bhoomi Shetty), ಯಾವಾಗ್ಲೂ ತಮ್ಮ ವಿಭಿನ್ನ ಫೋಟೋ ಶೂಟ್ ಮೂಲಕ ಸುದ್ದಿಯಲ್ಲಿರ್ತಾರೆ. ಅದೇ ರೀತಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ. 
 

ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಈ ಕುಂದಾಪುರದ ಬೋಲ್ಡ್ ಬ್ಯೂಟಿ ತಮ್ಮ ಬೋಲ್ಡ್ ಲುಕ್, ಮಾತು, ರಾಯಲ್ ಎನ್ ಫಿಲ್ಡ್ ಜೊತೆ ಸೋಲೋ ಜರ್ನಿ ಮಾಡೋ ಮೂಲಕ ಹೆಚ್ಚು ಸದ್ದು ಮಾಡ್ತಾನೇ ಇರ್ತಾನೆ. ಈ ಬಾರಿ ವಿದೇಶಕ್ಕೆ ತೆರಳಿ ಅಲ್ಲಿ ಒಂದಷ್ಟು ಸಮಯದಿಂದ ಜನ, ಜೀವನ ಸಂಸ್ಕೃತಿ ಬಗ್ಗೆ ತಿಳಿಯುತ್ತಾ ಎಂಜಾಯ್ ಮಾಡ್ತಿದ್ದಾರೆ. 
 

Tap to resize

ಇದರ ನಡುವೆ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ (Instagram Account) ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಭೂಮಿ ಶೆಟ್ಟಿ ಡಿಫರೆಂಟ್ ಲುಕ್ ನೋಡಿ ಜನ ತುಂಬಾನೆ ಇಷ್ಟಪಡ್ತಿದ್ದಾರೆ. ನಟಿಯರು ಸಹ ಭೂಮಿ ಸ್ಟೈಲ್‌ಗೆ , ಬಾಕ್ಸ್ ಬ್ರೈಡ್ ಹೇರ್‌ಸ್ಟೈಲ್ ನೋಡಿ ವಾರೆವಾ ಅಂದಿದ್ದಾರೆ. 
 

ಕೂದಲು ಪೂರ್ತಿ ಬಾಕ್ಸ್ ಬ್ರೈಡ್ ಮಾಡ್ಕೊಂಡು, ಕಣ್ಣಿಗೆ ಗಾಗಲ್ಸ್ ಹಾಕಿ, ಕಪ್ಪು ಬಣ್ಣದ ಕ್ರಾಪ್ ಟಾಪ್, ಅದಕ್ಕೊಂದು ಕೋಟ್ ಧರಿಸಿ, ಸಖತ್ ಪೋಸ್ ನೀಡಿದ್ದು ಇದರ ಜೊತೆಗೆ ತಮ್ಮ ಲೈಫ್ ಜರ್ನಿ ಬಗ್ಗೆ ಬರೆದುಕೊಂಡು, ತನ್ನ ಜರ್ನಿ ಬಗ್ಗೆ ತಾವು ಹೆಮ್ಮೆ ಪಡೋದಾಗಿ ತಿಳಿಸಿದ್ದಾರೆ. 
 

ನನ್ನದೇ ಆದ ಹಾದಿಯನ್ನು ಚಾರ್ಟ್ ಮಾಡುತ್ತಿದ್ದೇನೆ, ನಾನು ನಿರ್ಮಿಸುತ್ತಿರುವ ಜೀವನ ಮತ್ತು ನಾನು ಅನ್ವೇಷಿಸುತ್ತಿರುವ ಸ್ಥಳಗಳ ಬಗ್ಗೆ ಹೆಮ್ಮೆಪಡುತ್ತೇನೆ. ಪ್ರತಿ ಹೊಸ ಪ್ರಯಾಣದೊಂದಿಗೆ, ನಾನು ನನ್ನ ಬಗ್ಗೆ ಮತ್ತು ನನ್ನ ಸುತ್ತಲಿನ ಪ್ರಪಂಚದ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದೇನೆ. ದಾರಿಯುದ್ದಕ್ಕೂ ಸಾಹಸಗಳು ಮತ್ತು ಸವಾಲುಗಳನ್ನು ಸ್ವೀಕರಿಸಿ, ಅನನ್ಯವಾದ  ಜೀವನವನ್ನು ನಾನು ರೂಪಿಸುತ್ತಿದ್ದೇನೆ. ಈ ಎಕ್ಸ್’ಟ್ರಾ ಆರ್ಡಿನರಿ ಯಾನದ ಪ್ರತಿಯೊಂದೂ ಹೆಜ್ಜೆಯನ್ನು ನಾನು ಸೆಲೆಬ್ರೇಟ್ ಮಾಡ್ತೀನಿ. ಚಿಯರ್ಸ್ ಟು ಲೈಫ್ (cheers to life)  ಎಂದು ಬರೆದುಕೊಂಡಿದ್ದಾರೆ. 
 

ಭೂಮಿ ಶೆಟ್ಟಿಯ ಪೋಸ್ಟಿಗೆ ಸಿಕ್ಕಾಪಟ್ಟೆ ಲೈಕ್ಸ್, ಕಾಮೆಂಟ್ಸ್ ಬರುತ್ತಿದ್ದು, ಸಂಗೀತಾ ಶೃಂಗೇರಿ (Sangeetha Sringeri) ಸೋ ಕೂಲ್ ಎಂದು ಕಾಮೆಂಟ್ ಮಾಡಿದ್ರೆ, ಚೈತ್ರಾ ರೈ ಮತ್ತು ಕಾವ್ಯಾ ಶಾಸ್ತ್ರಿ ಹಾರ್ಟ್ ಮತ್ತು ಫೈರ್ ಇಮೋಜಿಗಳನ್ನ ಕಾಮೆಂಟ್ ಮಾಡಿದ್ದಾರೆ. 
 

ಫ್ಯಾನ್ಸ್ ಕೂಡ ನಟಿಯ ಫೋಟೋವನ್ನು ಇಷ್ಟಪಟ್ಟಿದ್ದು, ಇದು ಬೆಸ್ಟ್ ಶೂಟ್ ಎಂದರೆ, ಕ್ಲಾಸಿ ಲುಕ್, ಮಾಸ್, ಮೋಸ್ಟ್ ಬ್ಯೂಟಿ ಫುಲ್ ಗರ್ಲ್, ಮೈಕಲ್ ಜಾಕ್ಸನ್ ತರ ಕಾಣಿಸ್ತೀರಿ, ಪೂರ್ತಿ ಚೇಂಜ್ ಆಗಿದ್ದೀರಿ,ಬಾಸ್, ಹೊಸ ಸ್ಟೈಲ್ ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
 

Latest Videos

click me!