ಆದರೆ ವೀಕ್ಷಕರು ಇದನ್ನು ನೋಡಿ ಬೇಸರಗೊಂಡಿದ್ದು, ತರಹೇವಾರಿ ಕಾಮೆಂಟ್ ಗಳ ಮೂಲಕ ಅಶೋಕ್ ಗೆ ಸಿಹಿಯ ಅಸ್ಥಿ ವಿಸರ್ಜನೆ ಮಾಡದಂತೆ ಬೇಡಿಕೊಳ್ಳುತ್ತಿದ್ದಾರೆ. ಕಾಮೆಂಟ್ ಗಳನ್ನು ನೋಡುವುದಾದರೆ ಸಿಹಿ ಸುಬ್ಬಿ ನಾ ಬಿಟ್ಟು ಹೋಗಬಾರದು, ಸಿಹಿ ನೀನು ಯಾವಾಗಲೂ ಜೊತೆಯಲ್ಲೇ ಇರಬೇಕು,, ವಿಸರ್ಜನೆ ಆಗದಿದ್ರು ಪರವಾಗಿಲ್ಲ, ಅಸ್ತಿ ನಾ ವಿಸರ್ಜನೆ ಮಾಡಬೇಡ ಮೋಕ್ಷ ಸಿಗದಿದ್ದರೂ ಪರವಾಗಿಲ್ಲ ಸುಬ್ಬಿಗೆ ಸಹಾಯ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.