ಸೀರೇಲಿ ಮಧುಮಗಳಂತೆ ಮಿಂಚಿದ ಗೌತಮಿ ಜಾಧವ್, ಬಾಹುಬಲಿಯ ದೇವಸೇನೆ ಅಂತಿದ್ದಾರೆ ಫ್ಯಾನ್ಸ್!

First Published | Jan 4, 2024, 5:31 PM IST

ಕಿರುತೆರೆಯ ರಗಡ್ ಲೇಡಿ ಸತ್ಯಾ ಖ್ಯಾತಿಯ ಗೌತಮಿ ಜಾಧವ್ ಕೆಂಪು ಬಣ್ಣದ ಸೀರೆಯುಟ್ಟು ವಧುವಿನಂತೆ ಸಿಂಗಾರಗೊಂಡು ಫೋಟೋ ಶೂಟ್ ಮಾಡಿಸಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
 

ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಪಾತ್ರದ ಮೂಲಕ ಜನಮನ ಗೆದ್ದ ಪಾತ್ರ ಎಂದರೆ ಅದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್ ನಾಯಕಿ ಪಾತ್ರ. ಈ ಪಾತ್ರಕ್ಕೆ ಜೀವ ತುಂಬಿರೋರು ಗೌತಮಿ ಜಾಧವ್ (Gouthami Jadhav). 
 

ಆರಂಭದಲ್ಲಿ ಬಾಯ್ ಕಟ್ ಮಾಡಿಕೊಂಡು, ಜೀನ್ಸ್ ಪ್ಯಾಂಟ್, ಶರ್ಟ್ ಬನಿಯನ್ ಹಾಕ್ಕೊಂಡು, ಹುಡುಗರ ಜೊತೇನೆ ಸುತ್ತಾಡುತ್ತಾ, ಗ್ಯಾರೇಜ್ ನೋಡಿಕೊಳ್ಳುತ್ತಿದ್ದ ಸತ್ಯ ಸದ್ಯ ಮದುವೆಯಾದ ಮೇಲೆ ಸೀರೆಯುಟ್ಟು ಅಪ್ಪಟ ಸೊಸೆಯಾಗಿದ್ದಾರೆ. 
 

Tap to resize

ಇದೀಗ ಹೊಸ ಫೋಟೋ ಶೂಟ್ (Photoshoot) ಮಾಡಿಸಿಕೊಂಡಿರುವ ಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಗೌತಮಿ ಜಾಧವ್ ಶೇರ್ ಮಾಡಿದ್ದಾರೆ. ಕೆಂಪು ಸೀರೆಯುಟ್ಟು ಸಿಂಗರಿಸಿಕೊಂಡಿರುವ ಗೌತಮಿ ಲುಕ್ ಅಭಿಮಾನಿಗಳಿಗೆ ತುಂಬಾನೆ ಇಷ್ಟವಾಗಿದೆ. 

ಕೆಂಪು ಮೈ ಬಣ್ಣ ಹಸಿರು ಝರಿ ಬಾರ್ಡರ್ ಹೊಂದಿರುವ ಜರತಾರಿ ಸೀರೆಗೆ , ಹಸಿರು ಬಣ್ಣದ ರೇಷ್ಮೆ ಬ್ಲೌಸ್ ತೊಟ್ಟಿದ್ದಾರೆ ಗೌತಮಿ. ಜೊತೆಗೆ ಮೈ ಪೂರ್ತಿ ಒಡವೆ ಹಾಕಿ, ಬ್ರೈಡಲ್ ಮೇಕಪ್ ಮಾಡಿಕೊಂಡಿದ್ದು, ವಧುವಿನಂತೆ ಕಂಗೊಳಿಸುತ್ತಿದ್ದಾರೆ. 
 

ಕೂದಲನ್ನು ಲೂಸ್ ಆಗಿ ಬಿಟ್ಟು ತಲೆ ಮೇಲೆ ಮುಂದಾಲೆ ಹಾಕಿ, ಕಿವಿಯಲ್ಲಿ ಲಕ್ಷ್ಮೀ ಓಲೆ, ಮೂಗಲ್ಲಿ ಮುತ್ತಿನ ನತ್ತು ಹಾಕಿಕೊಂಡಿರುವ ಗೌತಮಿಯನ್ನು ನೋಡಿ ಅಭಿಮಾನಿಗಳು ಬಾಹುಬಲಿಯ ದೇವಸೇನನ ಹಾಗೆ ಕಾಣಿಸುತ್ತಿದ್ದೀರಿ ಎಂದು ಹೇಳಿದ್ದಾರೆ. 
 

ಸೀರಿಯಲ್ (Serial) ವಿಷ್ಯಕ್ಕೆ ಬರೋದಾದ್ರೆ ಗೌತಮಿ ಜಾಧವ್ ಇಂದಿಗೂ ಸೀರಿಯಲ್ ಪ್ರಿಯರ ಫೆವರಿಟ್, ಸದ್ಯ ಧಾರಾವಾಹಿಯಲ್ಲಿ ಲಕ್ಷ್ಮಣರ ಎರಡನೇ ಸಂಸಾರದ ಗುಟ್ಟನ್ನು ಮುಚ್ಚಿಡಲೂ ಆಗದೇ, ಎಲ್ಲರೆದುರು ಹೇಳಲೂ ಆಗದೇ ಸಂಸಾರ ಸುಖವಾಗಿರಲು ಕಷ್ಟಪಡ್ತಿದ್ದಾಳೆ ಸತ್ಯ. 
 

ನಾಗಪಂಚಮಿ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಗೌತಮಿ ಜಾಧವ್ ನಂತರ ಲೂಟಿ, ಆದ್ಯಾ, ಕಿನಾರೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ‘ಸತ್ಯ’ ಸೀರಿಯಲ್‌ನಲ್ಲಿ ಸತ್ಯ ಆಗಿ ಗೌತಮಿ ಅಭಿಮಾನಿಗಳ ಮನ ಗೆದ್ದಿದ್ದಾರೆ ಗೌತಮಿ. 
 

ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಸತ್ಯ. ಹೆಚ್ಚಾಗಿ ತಮ್ಮ ಸೀರಿಯಲ್ ತಂಡದ ಜೊತೆಗೆ ರೀಲ್ಸ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ರಿಯಲ್ ಲೈಫಲ್ಲೂ ಈಗಾಗಲೇ ಮದುವೆಯಾಗಿರುವ ಗೌತಮಿ ಇತ್ತೀಚೆಗಷ್ಟೇ ತಮ್ಮ 5ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
 

Latest Videos

click me!