ಕನ್ನಡ ಕಿರುತೆರೆಯ ನಾಗಿಣಿ ಎಂದೆ ಜನಪ್ರಿಯತೆ ಪಡೆದಿರುವ ದೀಪಿಕಾ ದಾಸ್ (Deepika Das), ಜನರಿಗೆ ಹೆಚ್ಚು ಹತ್ತಿರವಾಗಿದ್ದು ಬಿಗ್ ಬಾಸ್ ಸೀಸನ್ 7 ರಲ್ಲಿ ಕಂಟೆಸ್ಟಂಟ್ ಆಗಿ ಸ್ಪರ್ಧಿಸಿದಾಗ.
ಸದ್ಯ ನಟನೆಯಿಂದ ದೂರವಿರುವ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾ ಮೂಲಕವೇ ಜನರೊಂದಿಗೆ ಕನೆಕ್ಟ್ ಆಗಿರುತ್ತಾರೆ. ಇದೀಗ ಹೊಸ ವರ್ಷದ ಸಂಭ್ರಮದಲ್ಲಿ ಫೋಟೋ ಶೇರ್ ಮಾಡಿದ್ದು ಸಖತ್ ವೈರಲ್ ಆಗ್ತಿವೆ.
ಟ್ರಾವೆಲ್ ಪ್ರಿಯೆಯಾಗಿರುವ ದೀಪಿಕಾ ದಾಸ್ ಕಳೆದ ಕೆಲವು ದಿನಗಳಿಂದ ಲಂಡನ್ ನಲ್ಲಿ ತುಂಬಾನೆ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿಕೊಳ್ಳುತ್ತಿದ್ದರು.
ಇದೀಗ ದೀಪಿಕಾ ನ್ಯೂ ಇಯರ್ (New Year) ಸಂಭ್ರಮದಲ್ಲಿ ಸೆಲೆಬ್ರೇಶನ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ದೀಪಿಕಾ ತುಂಬಾನೆ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ದೀಪಿಕಾ ಮಾದಕ ನೋಡಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮರೂನ್ ಬಣ್ಣದ ಮೇಲೆ ಕಪ್ಪು ಬಣ್ಣದ ಚಿತ್ತಾರ ಹೊಂದಿರುವ ಸ್ಲೀವ್ ಲೆಸ್ ಬಾಡಿಕಾನ್ ಗೌನ್ ಧರಿಸುವ ದೀಪಿಕಾ, ಕಿವಿಗೆ 2024 ಎಂದು ಬರೆದಿರುವ ಹ್ಯಾಂಗಿಂಗ್ ಇಯರಿಂಗ್ಸ್ ಹಾಕಿದ್ದಾರೆ. ಸ್ಮೋಕಿ ಐ ಮೇಕಪ್ ಮೂಲಕ ದೀಪಿಕಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನೆಚ್ಚಿನ ನಟಿಯ ಬೋಲ್ಡ್ ಲುಕ್ (bold look) ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ದೀಪಿಕಾ ಕರ್ವ್ ಬಾಡಿ ನೋಡಿ, ಅವರ ಲುಕ್, ಸ್ಟೈಲ್ ನೋಡಿ ತುಂಬಾನೆ ಸೆಕ್ಸಿಯಾಗಿ ಕಾಣಿಸುತ್ತಿದ್ದೀರಿ, ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ನದಿಯ ಹಿನ್ನೆಯನ್ನು ಹೊಂದಿರುವ ಸುಂದರವಾದ ಪ್ರದೇಶದಲ್ಲಿ ಅದ್ಭುತವಾದ ಸಿಡಿಮದ್ದು ಆಕಾಶದಲ್ಲಿ ಸಿಡಿಯುತ್ತಿರಲು ಮುಂದೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡಿರುವ ದೀಪಿಕಾ ಅಭಿಮಾನಿಗಳಿಗೆ ಹೊಸ ವರ್ಷದ ಶುಭ ಕೋರಿದ್ದಾರೆ.