ತಂದೆಯಾಗೋ ಸಂಭ್ರಮ ಹಂಚಿಕೊಂಡ ಸತ್ಯ ಸೀರಿಯಲ್ ಅಮೂಲ್ ಬೇಬಿ ಸಾಗರ್

Published : Jan 17, 2024, 04:16 PM IST

ಸತ್ಯ ಸೀರಿಯಲ್ ನ ಅಮೂಲ್ ಬೆಬಿ ಖ್ಯಾತಿಯ ಸಾಗರ್ ಬಿಳಿಗೌಡ ತಂದೆಯಾಗೋ ಸಂಭ್ರಮದಲ್ಲಿದ್ದಾರೆ. ಇದು ರೀಲ್ ನಲ್ಲಿ ಖಂಡಿತಾ ಅಲ್ಲ, ರಿಯಲ್ ಲೈಫಲ್ಲಿ ತಂದೆಯಾಗಲಿದ್ದು, ಆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.   

PREV
17
ತಂದೆಯಾಗೋ ಸಂಭ್ರಮ ಹಂಚಿಕೊಂಡ ಸತ್ಯ ಸೀರಿಯಲ್ ಅಮೂಲ್ ಬೇಬಿ ಸಾಗರ್

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಸತ್ಯ ಗಂಡ ಪಾತ್ರದಲ್ಲಿ ತಮ್ಮ ಮುದ್ದು, ಪೆದ್ದು ನಟನೆಯ ಮೂಲಕ ಅಮೂಲ್ ಬೇಬಿಯಾಗಿ ಖ್ಯಾತಿ ಪಡೆದಿರುವ ಸಾಗರ್ ಬಿಳಿಗೌಡ (Sagar Biligiwda) ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. 
 

27

ರೀಲ್ ಜೀವನದಲ್ಲಿ ಸತ್ಯ ಜೊತೆ ಮಗುವಿನ ಪ್ಲ್ಯಾನ್ ಮಾಡಿದ್ದ ಅಮೂಲ್ ಬೇಬಿ, ಗುರಿಯೇ ಮುಖ್ಯ ಎಂದಿದ್ದ ಹೆಂಡತಿ ಮುಂದೆ ಸುಮ್ಮನಾಗಬೇಕಾಗಿತ್ತು. ಇದೀಗ ರಿಯಲ್ ಲೈಫಲ್ಲಿ ತಂದೆಯಾಗುವ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 
 

37

ಸಾಗರ್ ಬಿಳಿ ಗೌಡ ಪತ್ನಿ ಸಿರಿ ರಾಜು (Siri Raju) ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಈ ಸಂಭ್ರಮದ ವಿಷ್ಯವನ್ನು ಕ್ಯೂಟ್ ಆಗಿರೋ ಫೋಟೋ ಶೇರ್ ಮಾಡೊ ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 
 

47

ಕೆಂಪು ಡ್ರೆಸ್ ನಲ್ಲಿ ಸಿರಿ ಮತ್ತು ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಲುಕ್ ನಲ್ಲಿ ಸಾಗರ್ ಇವರಿಬ್ಬರ ಕೈಗಳು ಮತ್ತು ಅರ್ಧ ದೇಹ ಮಾತ್ರ ಕಾಣಿಸುತ್ತಿರುವ ಫೋಟೋ ಶೇರ್ ಮಾಡಿದ್ದು, ಇಬ್ಬರು ಕೈಗಳಲ್ಲಿ ಒಂದು ಪುಟ್ಟ ಶೂ ಹಿಡಿದುಕೊಂಡಿರುವ ಮುದ್ದಾದ ಫೋಟೋ ಇದಾಗಿದೆ. ಇಬ್ಬರಿಗೂ ಶುಭಾಶಯಗಳ ಮಹಾಪುರ ಹರಿದು ಬಂದಿದೆ. 
 

57

ಕಳೆದ ವರ್ಷ ಜನವರಿ ತಿಂಗಳಲ್ಲಿ ಸಿರಿ ಮತ್ತು ಸಾಗರ್ ಬಿಳಿಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಗರ್ ಮತ್ತು ಸಿರಿ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಇದು ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿತ್ತು.
 

67

ಸಿರಿ ರಾಜು ಕೂಡ ಮಾಡೆಲ್ (model) ಮತ್ತು ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದರು. 
 

77

ಸಾಗರ್ ಬಗ್ಗೆ ನಿಮಗೆ ಗೊತ್ತೆ ಇದೆ ಅಲ್ವಾ? ಇವರು ಸದ್ಯ ಸತ್ಯ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಕಿನ್ನರಿ ಮತ್ತು ಮನಸಾರೆ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ತೆಲುಗು ಕಿರುತೆರೆಯಲ್ಲೂ (telugu telivision) ಸಹ ಇವರು ಮಿಂಚುತ್ತಿದ್ದಾರೆ. 
 

click me!

Recommended Stories