ಲಂಡನ್‌ನಲ್ಲಿ ನಟಿ ನಾಗಿಣಿ: ಏನಮ್ಮಾ ದೀಪಿಕಾ ನಿನ್ ಫಾರಿನ್​​ ಜಾಲಿಟ್ರಿಪ್ ಮುಗಿದಿಲ್ವಾ ಎಂದ ಫ್ಯಾನ್ಸ್‌!

First Published | Jan 17, 2024, 8:50 AM IST

ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಇತ್ತೀಚೆಗೆ ವಿದೇಶಕ್ಕೆ ಪ್ರಯಾಣ ಮಾಡಿದ್ದು, ಅಲ್ಲಿಯ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತಿದ್ದು, ಸದ್ಯ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದಾರೆ.   

ದೀಪಿಕಾ ದಾಸ್ ಆಗಾಗ ಟ್ರಕ್ಕಿಂಗ್ ಹಾಗೆಯೇ ವಿದೇಶ ಪ್ರಯಾಣದಲ್ಲಿ ಕಾಲ ಕಳೆಯುತ್ತಿದ್ದು, ಸಿನಿಮಾ ಹಾಗೂ ಧಾರಾವಾಹಿಗಳಿಂದ ಕೊಂಚ ದೂರ ಆಗಿರುವ ನಟಿ ಆಗಾಗ ಉತ್ತಮ ಜಾಗಗಳಿಗೆ ಟ್ರಿಪ್ ಹೋಗುತ್ತಾರೆ.

Tap to resize

ನಟಿ ದೀಪಿಕಾ ದಾಸ್‌ ಇತ್ತೀಚೆಗೆ ಲಂಡನ್‌ಗೆ ತೆರೆಳಿದ್ದು, ಬೀದಿ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೀಪಿಕಾ ಹಂಚಿಕೊಂಡಿರುವ ಫೋಟೋಗಳಲ್ಲಿ, ಈಕೆ ಪಿಂಕ್‌ ಕ್ರಾಪ್‌ ಟಾಪ್‌ ಮೇಲೆ ಲಾಂಗ್‌ ಸ್ವೆಟರ್‌ ಕ್ಲಾಟ್‌ ಬ್ಲೇಜರ್‌ ಹಾಗೂ ಸ್ವೆಟರ್‌ ಪ್ಯಾಂಟ್‌ ಧರಿಸಿ ಕ್ಯೂಟ್‌ ಆಗಿ ಕಾಣಿಸುತ್ತಿದ್ದು, ತಲೆಗೆ ಕ್ಯಾಪ್‌ ಹಾಗೂ ಪಿಂಕ್‌ ಸ್ಪೋರ್ಟ್‌ ಶೂಸ್‌ ಧರಿಸಿ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.

ದೀಪಿಕಾ ಹಂಚಿಕೊಂಡೊರುವ ಫೋಟೋಸ್‌ಗೆ ಈಗಾಗಲೇ ಸಾಕಷ್ಟು ಲೈಕ್ಸ್‌ ಬಂದಿದ್ದು, ಫ್ಯಾನ್ಸ್‌ ಕಮೆಂಟ್‌ ವಿಭಾಗದಲ್ಲಿ ನೆಟ್ಟಿಗರು ಲೇಡಿ ಬಾಸ್, ರಾಯಲ್ ಕ್ವೀನ್, ಸುಂದರವಾಗಿದೆ, ದೇವತೆ, ಏನಮ್ಮಾ ನಿನ್ ಫಾರಿನ್​​ ಜಾಲಿಟ್ರಿಪ್ ಮುಗಿದಿಲ್ವಾ, ಬಾರ್ಬಿ ಅಂತೆಲ್ಲಾ ಬರೆದಿದ್ದಾರೆ.

ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫ್ಯಾನ್ಸ್‌ಗಳಿಗಾಗಿಯೇ ಹಲವು ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚಿಕೊಳ್ತಾರೆ. 

ನಾಗಿಣಿ ಧಾರಾವಾಹಿಯ ಮೂಲಕ ದೀಪಿಕಾ ದಾಸ್ ಕಿರುತೆರೆಯಲ್ಲಿ ಬಹಳ ಖ್ಯಾತಿ ಪಡೆದಿದ್ದರು. ಧಾರಾವಾಹಿ ಬಳಿಕ ಬಿಗ್‌ಬಾಸ್‌ ಸೀಸನ್‌ 7ರಲ್ಲಿ ಸ್ಪರ್ಧಿಯಾಗಿ ದೊಡ್ಮೆನೆಯಲ್ಲಿಯೂ ಮಿಂಚಿದ್ದರು. ಶೋನಲ್ಲಿ ಉತ್ತಮ ಪ್ರದರ್ಶನ ತೋರಿ ಮನರಂಜನೆ ನೀಡಿದ್ದರು. ಜೊತೆಗೆ ಶೈನ್ ಶೆಟ್ಟಿ ಜೊತೆ ಇವರ ಹೆಸರು ತಗಲಾಕಿಕೊಂಡಿತ್ತು.

Latest Videos

click me!