ಭಾಷಣಗಾರ್ತಿ, ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಮೇಕಪ್ ಮಾಡಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
26
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಮೇಕಪ್ ಧರಿಸದೆ, ಯಾವ ಹೇರ್ ಸ್ಟೈಲ್ ಮಾಡಿಕೊಳ್ಳದ ಚೈತ್ರಾ ಕುಂದಾಪುರ ಫಿನಾಲೆ ವಾರಕ್ಕೆ ಪಳಪಳ ಅಂತ ಹೊಳೆಯುತ್ತಿದ್ದು.
36
ಒಂದು ದಿನ ಹಸಿರು ಮತ್ತು ಕ್ರೀಮ್ ಬಣ್ಣದ ಸೀರೆಯಲ್ಲಿ ಮತ್ತೊಂದು ದಿನ ಬಾಲಿವುಡ್ ನಟಿಯರ ರೀತಿಯಲ್ಲಿ ಕೆಂಪು ಬಣ್ಣದ ಸೀರೆ ಧರಿಸಿದ್ದರು. ಈ ಎರಡೂ ಲುಕ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
46
ಮೇಕ್‌ಓವರ್ ಬೈ ಆಶಾ ಕಿರಣ್ ಎಂಬುವವರು ಚೈತ್ರಾ ಕುಂದಾಪುರ ಅವರಿಗೆ ಹೊಸ ಲುಕ್ ನೀಡಿದ್ದಾರೆ. ಅವರ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಮೇಕಪ್ ವಿಡಿಯೋ ಮತ್ತು ಫೋಟೋ ಅಪ್ಲೋಡ್ ಮಾಡಿದ್ದಾರೆ.
56
'ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ. ಧನ್ಯವಾದಗಳು ಮೇಡಂ ನಿಮ್ಮ ಜೊತೆ ಕಳೆದ ಸಮಯ ಸ್ಮರಣಿಯ' ಎಂದು ಮೇಕಪ್ ಮಾಡಿರುವ ಆಶಾ ಕಿರಣ್ ಬರೆದುಕೊಂಡಿದ್ದಾರೆ.
66
'ಆಗಲೇ ಮಧುಮಗಳ ಕಳೆ ಬಂದಿದೆ. ನಮ್ದೇ ದೃಷ್ಟಿ ಆಗಿದೆ ಅಷ್ಟು ಮುದ್ದಾಗಿ ಕಾಣಿಸುತ್ತ ಇದ್ದೀರಿ, ಸುಳ್ಳು ಹೇಳಬಾರದು ಚೈತ್ರಾ ದೇವತೆ ತರ ಕಾಣಿಸುತ್ತಿದ್ದಾರೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.