ಹೊಸ ಲುಕ್‌ನಲ್ಲಿ ಸಾನ್ಯಾ ಅಯ್ಯರ್ : ಬೇಜಾರ್ ಮಾಡ್ಕೊಂಡ ಹುಡುಗ್ರು

First Published | Apr 19, 2023, 5:13 PM IST

ಸದಾ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಸಾನ್ಯಾ ಐಯ್ಯರ್ ಇದೀಗ ಹೊಸ ವಿಡೀಯೋ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಸಾನಿಯಾ ಹೊಸ ಲುಕ್ ನೋಡಿದ ಅಭಿಮಾನಿಗಳು ಬೇಜಾರ್ ಮಾಡ್ಕೊಂಡಿದ್ದಾರೆ. 

ಬಿಗ್ ಬಾಸ್ 9 ಸೀಸನ್ (Bigg Boss Season 9)ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ನಟಿ ಸಾನ್ಯಾ ಐಯ್ಯರ್ ಇದೀಗ ಹೊಸ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದು, ಸದ್ಯ ವಿಡೀಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಯಾಕಂದ್ರೆ ಅದರಲ್ಲಿರೋ ಸಾನ್ಯಾ ಹೊಸ ಲುಕ್ ನಿಂದಾಗಿ. 

ಹೌದು, ಸಾನ್ಯಾ (Sanya Iyer) ತಮ್ಮ ಉದ್ದನೆಯ ಕೆಂಪು ಕೂದಲನ್ನು ಕತ್ತರಿಸಿ ಶಾರ್ಟ್ ಹೇರ್ ನಲ್ಲಿ ತುಂಬಾನೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಈ ವಿಡೀಯೋವನ್ನು ಸಾನ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದನ್ನ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಜೊತೆಗೆ ಬೇಜಾರು ಮಾಡ್ಕೊಂಡಿದ್ದಾರೆ. 

Tap to resize

ಲ್ಯಾವೆಂಡರ್ ಕಲರ್ ಕ್ರಾಪ್​ಟಾಪ್ , ಜೊತೆಗೆ ಬ್ಲೂ ಜೀನ್ಸ್ ಧರಿಸಿರುವ ಸಾನ್ಯಾ ಐಯ್ಯರ್ ನ್ಯಾಚುರಲ್ ಮೇಕಪ್ ಮೂಲಕ ಹೊಸ ಹೇರ್ ಸ್ಟೈಲ್ ನಲ್ಲಿ ಸುಂದರವಾಗಿ ಕಾಣ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಯಾಕೆ ಅಷ್ಟುದ್ದ ಕೂದ್ಲು ಕಟ್ ಮಾಡಿ, ಇಷ್ಟು ಸಣ್ಣ ಮಾಡಿದ್ರಿ ಎಂದು ಬೇಜಾರ್ ಮಾಡ್ಕೊಂಡಿದ್ದಾರೆ. 
 

ತಮ್ಮ ಹೇರ್ ಕಟ್ಟಿಂಗ್ (Hair cutting) ವಿಡಿಯೋ ಶೇರ್ ಮಾಡಿರುವ ಸಾನ್ಯಾ, ಅದಕ್ಕೆ Surprise surprise ಎಂದು ಕ್ಯಾಪ್ಶನ್ ನೀಡಿದ್ದು, ಕೊನೆಗೆ ಯಾಕೆ ಅಂತ ಕೇಳ್ಬೇಡಿ ಆಯ್ತಾ ?. ಎಂದು ಬರೆದುಕೊಂಡಿದ್ದಾರೆ. ರಿರಾಯಲ್ ಕೋರ್ಟ್ ಸೆಲೆಬ್ರಿಟಿ ಸಲೂನ್ ನಲ್ಲಿ ಸಾನ್ಯಾ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. 

ಇನ್ನು ಸಾನ್ಯಾ ಹೊಸ ಲುಕ್ ಗೆ ತರಹೇವಾರಿ ಕಾಮೆಂಟ್‌ಗಳು ಬಂದಿದ್ದು, ಹಲವು ಜನರು ಕ್ಯೂಟ್ ಆಗಿ ಕಾಣಿಸ್ತಿದ್ದೀರಾ, ಬದಲಾವಣೆ ಬೇಕೇ ಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಆದ್ರೆ ಅಭಿಮಾನಿಗಳಲ್ಲಿ ಹೆಚ್ಚಿನವ್ರು, ಅದರಲ್ಲೂ ಮೇಲ್ ಫ್ಯಾನ್ ಫಾಲೋವರ್ಸ್ (male fan followers) ಹೆಚ್ಚು ಹೊಂದಿರುವ ಸಾನ್ಯಾ ಅವ್ರ ಹೊಸ ಲುಕ್ ನ್ನು ಕಂಡು ಹುಡುಗ್ರು ಬೇಜಾರ್ ಮಾಡ್ಕೊಂಡಿದ್ದಾರೆ. 

ಇದು ಸರ್ಪ್ರೈಸ್ ಅಲ್ಲ, ಶಾಕ್ ಎಂದು ಕೆಲವರು ಬರೆದ್ರೆ, ಮತ್ತೊಬ್ಬ ಸಾನ್ಯಾ ಪಕ್ಕಾ ಅಭಿಮಾನಿಯೊಬ್ಬ Noo way ನಾನ್ ಈ ಶಾರ್ಟ್ ಹೇರ್ ಇಷ್ಟ ಪಡಲ್ಲ , ಪ್ಲೀಸ್ ಸಾನು don't do this next time, ಹುಡುಗ್ರು ನೋಡಿದ್ರೆ ಪಕ್ಕ ಕಣ್ ಹಾಕ್ತಾರೆ.. ನಿಂಗೆ ಲಾಂಗ್ ಹೇರ್ ಇತ್ತಲ್ಲ ಅದ್ರಿಂದ ಎಷ್ಟೋ ಜನ ಕಣ್ ಹಾಕಿದ್ರು ನಿನ್ ಲಾಂಗ್ ಹೇರ್ ಇಂದ ದೃಷ್ಟಿ ಹೋಗ್ತಿತ್ತು , but ಈಗ ಲಾಂಗ್ ಹೇರ್ ಇಲ್ಲ ದೃಷ್ಟಿ ನಿನ್ ಮೇಲೆ ಇರತ್ತೆ .. ಪ್ಲೀಸ್ ನಿನ್ನ ಶಾರ್ಟ್ ಹೇರ್ ಅಲ್ಲಿ ನೋಡೊಕ್ ಇಷ್ಟ ಪಡಲ್ಲ ನಾನು ಎಂದು ಬರೆದುಕೊಂಡಿದ್ದಾರೆ. 

ಮತ್ತೊಬ್ರು I like your look, Long hair bcz ಸೀರೆ ಸಲ್ವಾರ್ ಶೋರ್ಟ್ಸ್ ಯಾವ್ ಡ್ರೆಸ್ ಹಾಕೊಂಡ್ರು ಮ್ಯಾಚ್ ಆಗತ್ತೆ ಆದ್ರೆ ಈ ಶಾರ್ಟ್ ಹೇರ್ ಗೆ ಸೀರೆ ಚನಾಗ್ ಕಾಣ್ಸಲ್ಲ ಎಂದು ಬೇಜಾರ್ ಮಾಡ್ಕೊಂಡಿದ್ದಾರೆ. ಇನ್ನೂ ಕೆಲವರು ಹೈ ಸ್ಕೂಲ್ ಗರ್ಲ್ ತರ ಕಾಣಿಸ್ತೀರಾ, ಬಾರ್ಬಿ ಡಾಲ್ ತರ ಕಾಣಿಸ್ತೀರಾ, ಹೊಸ ಲುಕ್ ಇಂದ ಕ್ರಶ್ ಜಾಸ್ತಿ ಆಯ್ತು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. 

Latest Videos

click me!