ಸೆಟ್ ಬಿಟ್ಟು ಮೈಸೂರು ವಿಮಾನ ನಿಲ್ದಾಣದಲ್ಲಿ ಶೂಟಿಂಗ್ ಮಾಡಿದ ಒಲವಿನ ನಿಲ್ದಾಣ

First Published | Apr 19, 2023, 4:25 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಒಲವಿನ ನಿಲ್ದಾಣ’ ಸೀರಿಯಲ್ ಶೂಟಿಂಗ್ ಮೈಸೂರು ಏರ್ ಪೋರ್ಟ್ ನಲ್ಲಿ ನಡೆದಿದ್ದು, ಲೈವ್ ಲೊಕೇಶನ್ ನಲ್ಲಿ ಸೀರಿಯಲ್ ಶೂಟಿಂಗ್ ಅನುಭವ ಹೇಗಿತ್ತು? ಅನ್ನೋದನ್ನು ಸೀರಿಯಲ್ ತಂಡ ತಿಳಿಸಿದೆ. 
 

ಸಾಮಾನ್ಯವಾಗಿ ಸೀರಿಯಲ್ ಗಳೆಲ್ಲಾ ಶೂಟಿಂಗ್ ಸೆಟ್, ಸ್ಟುಡಿಯೋದಲ್ಲಿ ನಡೆಯುತ್ತವೆ. ಯಾಕಂದ್ರೆ ತುಂಬಾನೆ ಸುಲಭವಾಗಿರುತ್ತವೆ. ಯಾವುದೇ ಜನರ ತಡೆ ಇಲ್ಲದೇ ಸುಲಭವಾಗಿ ಶೂಟ್ ಮಾಡಬಹುದು. ಆದರೆ ಇದೀಗ ಕಲರ್ಸ್ ಕನ್ನಡ ಸೀರಿಯಲ್ ಗೆ ಹೊಸ ಟಚ್ ನೀಡಿದೆ. 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ‘ಒಲವಿನ ನಿಲ್ದಾಣ’ ಶೂಟಿಂಗನ್ನು ಸ್ಟುಡಿಯೋ ಬದಲಾಗಿ ನೇರವಾಗಿ ಮೈಸೂರು ವಿಮಾನ ನಿಲ್ದಾಣದಲ್ಲಿಯೇ ಶೂಟ್ ಮಾಡಿಸಿದ್ದಾರೆ. ಲೈವ್ ಲೊಕೇಶನ್‌ನಲ್ಲಿ ಸಿನಿಮಾ ತರ ಲೈವ್ಲಿ ಶೂಟಿಂಗ್ ಹೇಗಾಯ್ತು ಅನ್ನೋದನ್ನು ತಿಳಿಸಿದ್ದಾರೆ. 

Tap to resize

ರಮೇಶ್ ಇಂದಿರಾ (Ramesh Indira) ನಿರ್ದೇಶನದ ಒಲವಿನ ನಿಲ್ದಾಣ ಸೀರಿಯಲ್, ತುಂಬಾನೆ ಕುತೂಹಲಕಾರಿ ಸಂಚಿಕೆಗಳ ಮೂಲಕ ಜನಮನ ಗೆದ್ದಿದೆ. ಇದೀಗ ಸೀರಿಯಲ್ ನಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ತಾರಿಣಿ ಮತ್ತು ಸಿದ್ಧಾಂತ್ ಒಂದಾಗ್ತಾರ ಅನ್ನೋದನ್ನು ಕಾದು ನೋಡಬೇಕು. 
 

ಮದುವೆ ಮಂಟಪದಿಂದ ತಾರಿಣಿಯನ್ನ ಕರೆದುಕೊಂಡು ರಾಜಶೇಖರ್ ಏರ್‌ಪೋರ್ಟ್‌ ಕಡೆಗೆ ಹೊರಟಿದ್ದಾರೆ. ಸಿದ್ಧಾಂತ್ ವಿದೇಶಕ್ಕೆ ಹೊರಡಲು ಏರ್ ಪೋರ್ಟ್ ನಲ್ಲಿರುತ್ತಾನೆ. ಈ ಸೀನ್ ಶೂಟಿಂಗ್‌ಗಾಗಿ ಚಿತ್ರತಂಡ ಸ್ಟುಡಿಯೋ ಬಿಟ್ಟು ಮೈಸೂರು ವಿಮಾನ ನಿಲ್ದಾಣವನ್ನು (Mysore Airport) ಸೇರಿದ್ದು, ಶೂಟಿಂಗ್ ಜೋರಾಗಿಯೇ ನಡೆದಿದೆ. 

ಕತೆಗೆ ಹೊಸ ತಿರುವು ಸಿಕ್ಕಿರೋದರಿಂದ ಅದನ್ನು ಲೈವ್ ಲೊಕೇಶನ್‌ನಲ್ಲಿ ರಿಯಲ್ ಆಗಿ ಇರಬೇಕೆಂದು ಕಲರ್ಸ್ ಕನ್ನಡ ಚಾನೆಲ್ ಮತ್ತು ಶ್ರುತಿ ನಾಯ್ಡು (Shruthi Naidu) ಅವರ ಜೊತೆ ಮಾತನಾಡಿ ನಿರ್ದೇಶಕ ರಮೇಶ್ ಇಂದಿರಾ ಈ ಶೂಟಿಂಗ್ ಅನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಡಲು ನಿರ್ಧರಿಸಿದ್ದರಂತೆ. 
 

ಲೈವ್ ಲೊಕೇಶನ್‌ನಲ್ಲಿ ಶೂಟಿಂಗ್ ಮಾಡೋದು ಚಾಲೆಂಜಿಂಗ್. ಸೆಟ್‌ನಲ್ಲಿ ಎಲ್ಲವೂ ಕಂಟ್ರೋಲ್ದ್ ಆಗಿರುತ್ತೆ. ನಮಗೆ ಬೇಕಾದ ಹಾಗೆ ಶೂಟಿಂಗ್ ಮಾಡಬಹುದು, ಬದಲಾವಣೆನೂ ಮಾಡಬಹುದು. ಆದ್ರೆ ಲೈವ್ ಲೊಕೇಶನ್‌ನಲ್ಲಿ ಸಣ್ಣ ಸಮಯದಲ್ಲಿ ಸುಂದರವಾಗಿ ದೃಶ್ಯ ಬರೋವಂತೆ ಮಾಡೋದು ತುಂಬಾ ಕಷ್ಟ ಅಂತಾರೆ ರಮೇಶ್. 

ಲೈವ್ ಲೊಕೇಶನ್‌ನಲ್ಲಿ ಶೂಟಿಂಗ್ ಯಶಸ್ವಿಯಾಗಿದ್ದು, ನೀವು ಇಲ್ಲಿವರೆಗೆ ಹೇಗೆ ಒಲವಿನ ನಿಲ್ದಾಣಕ್ಕೆ (Olavina Nildana) ಬೆಂಬಲ, ಪ್ರೀತಿ ಕೊಟ್ಟಿದ್ರೋ, ಇನ್ನು ಮುಂದೆ ಕೂಡ ಹೀಗೆ ಬೆಂಬಲ ಕೊಡಿ ಎಂದು ನಿರ್ಮಾಪಕಿ ಶ್ರುತಿ ನಾಯ್ಡು ಮನವಿ ಮಾಡಿದ್ದಾರೆ. ಸದ್ಯ ಲೈವ್ ಶೂಟಿಂಗ್ ವಿಡಿಯೋ ಕಲರ್ಸ್ ಕನ್ನಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದಾರೆ. 
 

Latest Videos

click me!