ಲೀಲಾ..ನೀನು ನನ್ನ ಫ್ಲೇವರ್‌ ಕಣೇ.. ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್‌ ಅಸ್ತ್ರವಾಯ್ತು: ಹಣ ಮಾಡ್ತಿರೋ ಮಂಜು!

Published : Feb 08, 2026, 12:07 PM IST

Leela And Manju Video: ಮಾಧ್ಯಮಕ್ಕೆ ಬಂದು ಸಂಸಾರದ ವಿಷಯವನ್ನು ಹೇಳಿಕೊಂಡು ಅತ್ತಿದ್ದ ಲೀಲಾ, ಮಂಜು ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ವಿಡಿಯೋ ಮಾಡಿ ಬಂದ್ಬಿಡು ಲೀಲಾ, ನನ್ನ ಬಂಗಾರಿ, ಚಿನ್ನಿ ಬಂದ್ಬಿಡೇ, ನೀನು ನನ್ನ ಫ್ಲೇವರ್‌ ಕಣೇ ಎಂದು ಹೇಳಿದ್ದ ಮಂಜು ದುಡಿಮೆಗೆ ಹೊಸ ದಾರಿ ಕಂಡುಕೊಂಡಿದ್ದರು. 

PREV
16
ಕ್ಯಾಬ್‌ ಡ್ರೈವರ್‌ ಆಗಿ ಕೆಲಸ

ಮಂಜು ಅವರು ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಹೆಂಡತಿ ಬೇರೆ ವ್ಯಕ್ತಿ ಜೊತೆ ಓಡಿ ಹೋದಳು ಎಂದು ಮಂಜು ಗೋಳಿಟ್ಟಿದ್ದರು. ಇಬ್ಬರು ಮಕ್ಕಳನ್ನು ಬಿಟ್ಟು ಹೆಂಡತಿ ಓಡಿ ಹೋದಳು ಎಂದು ಮಂಜು ಕಣ್ಣೀರು ಹಾಕಿದ್ದರು.

26
ಮಂಜು ಜೊತೆ ಬದುಕೋಕೆ ಇಷ್ಟ ಇಲ್ಲ

ನನಗೆ ಮಂಜು ಹಿಂಸೆ ಕೊಡ್ತಾನೆ, ನನಗೆ ಅವನು ಇಷ್ಟ ಇಲ್ಲ, ನನಗೆ ಬೇರೆ ಪ್ರೀತಿ ಸಿಕ್ಕಿದೆ, ನಾನು ಮಂಜು ಜೊತೆ ಜೀವನ ಮಾಡೋಕೆ ಆಗೋದಿಲ್ಲ ಎಂದು ಲೀಲಾ ಹೇಳಿದ್ದರು.

36
ಮಂಜು ಜೊತೆ ಲೀಲಾ ಬದುಕಲು ಒಪ್ಪಿದ್ರು

ಆಮೇಲೆ ಒಂದಿಷ್ಟು ಚರ್ಚೆಗಳ ಬಳಿಕ ಲೀಲಾ ಅವರು ಮಕ್ಕಳಿಗೋಸ್ಕರ ಮಂಜು ಜೊತೆ ವಾಸ ಮಾಡಲು ಒಪ್ಪಿದ್ದರು. ಇದಾದ ಬಳಿಕ ಇವರು ನಾನು, ನೀನು ಇಬ್ಬರು ಒಂದೇ ಎನ್ನೋ ಥರ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು.

46
ಫಾಲೋವರ್ಸ್‌ ಜಾಸ್ತಿ ಆದರು

ಇವರ ಬಗ್ಗೆ ಎಷ್ಟು ಟ್ರೋಲ್‌ ಆಯ್ತೋ, ಎಷ್ಟು ಜನರು ನೆಗೆಟಿವ್‌ ಕಾಮೆಂಟ್‌ ಮಾಡಿದರೋ ಅಷ್ಟೇ ಇವರ ಸೋಶಿಯಲ್‌ ಮೀಡಿಯಾ ವೀಕ್ಷಣೆ, ಫಾಲೋವರ್ಸ್‌ ಕೂಡ ಹೆಚ್ಚುತ್ತ ಹೋಯಿತು. ಇದನ್ನೇ ಅವರು ಬಳಸಿಕೊಂಡರು.

56
ಜಾಹೀರಾತು ಪ್ರಚಾರ

ಅಂದಹಾಗೆ ಇವರಿಬ್ಬರ ಸೋಶಿಯಲ್‌ ಮೀಡಿಯಾ ಅಕೌಂಟ್‌ಗೆ ಸಾವಿರಾರು ಜನರು ಫಾಲೋವರ್ಸ್‌ ಇದ್ದಾರೆ. ಅನೇಕರು ಬ್ರ್ಯಾಂಡ್‌ಗಳ ಪ್ರಮೋಶನ್‌ಗೋಸ್ಕರ ಲೀಲಾ, ಮಂಜು ಅವರನ್ನು ಕಾಂಟ್ಯಾಕ್ಟ್‌ ಮಾಡಿದ್ದಾರೆ. ಇವರಿಬ್ಬರು ಸೇರಿಕೊಂಡು ಒಂದಿಷ್ಟು ಜಾಹೀರಾತುಗಳ ಪ್ರಚಾರ ಮಾಡಿ ಹಣ ಗಳಿಸಿದ್ದಾರೆ.

66
ಇದೇ ಜೀವನ, ಇದೇ ಬಂಡವಾಳ

ಇಂದು ಸೋಶಿಯಲ್‌ ಮೀಡಿಯಾದಲ್ಲಿ ಫಾಲೋವರ್ಸ್‌ ಇದ್ದರೆ ಸಾಕು, ಪ್ರೊಡಕ್ಟ್‌ಗಳು ತಮ್ಮ ಪ್ರಚಾರಕ್ಕೆ ಇವರನ್ನು ಫಾಲೋ ಮಾಡುತ್ತಾರೆ. ಇದೇ ಮಾದರಿಯನ್ನು ಬಳಸಿಕೊಂಡು ಅನೇಕರು ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಗಳಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories