ಬಿಗ್ ಬಾಸ್ ಸೀಸನ್ 10ರಲ್ಲಿ ಮೂರನೇ ಸ್ಥಾನ ಪಡೆದಿರುವ ಸಂಗೀತಾ ಶೃಂಗೇರಿ ಅಲ್ಲಿನ ಸಿಬ್ಬಂದಿಗಳು ಮತ್ತು ಕ್ಯಾಮೆರಾಗಳ ಬಗ್ಗೆ ಹೇಳಿದ್ದಾರೆ. ಟಿಆರ್‌ಪಿಗೆ ವಿನಯ್ ಮತ್ತು ಸಂಗೀತಾರನ್ನು ಬಳಸಿಕೊಂಡರು ಅನ್ನೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
210
ಟಿಆರ್‌ಪಿಗಾಗಿ ಬಿಗ್ ಬಾಸ್ ನಮ್ಮನ್ನು ಬಳಸಿಕೊಂಡಿಲ್ಲ. ಅದರಲ್ಲೂ ಬಿಗ್ ಬಾಸ್ ತಂಡದವರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ನಮಗೆ ಸಹಾಯ ಮಾಡಿದ್ದಾರೆ.
310
ನಮ್ಮ ಎದುರಿಗೆ ಕಂಡಿಲ್ಲ ಅವರು ಹೇಗಿರುತ್ತಾರೆ ಏನೋ ಅನ್ನೋ ಐಡಿಯಾ ಇರಲಿಲ್ಲ. ನಮಗೆ ಹುಷಾರಿಲ್ಲ ಅಂದಾಗ ಅಥವಾ ಕಣ್ಣಿನ ಸಮಸ್ಯೆ ಆದಾಗ ಎಷ್ಟು ಕಾಳಜಿ ವಹಿಸಿದ್ದಾರೆ ಅಂದ್ರೆ ಬೆಸ್ಟ್ ಆಫ್ ಬೆಸ್ಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
410
ಒಂದು ಸಣ್ಣ ಸದ್ದು ಕೂಡ ಮಾಡಿಲ್ಲ. ನಮ್ಮ ಜೊತೆ ಒಂದು ಅಕ್ಷರ ಕೂಡ ಮಾತನಾಡಿಲ್ಲ. ತಂಡದವರು ಕಾಳಜಿ ಮಾಡಿದ ರೀತಿ ಅವರ ಮೇಲೆ ದೂರಬೇಕು ಅನಿಸಿಲ್ಲ ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಸಂಗೀತಾ ಮಾತನಾಡಿದ್ದಾರೆ.
510
ಹೆಣ್ಣು ಮಕ್ಕಳು ಪಾರ್ಟಿ ವೇರ್ ರೀತಿ ಬಟ್ಟೆ ಧರಿಸಲು ಇಷ್ಟ ಪಡುತ್ತಿದ್ವಿ. ನೇರ ನೋಡುವಾಗ ಚೆನ್ನಾಗಿ ಕಾಣಿಸುತ್ತದೆ ಆದರೆ ಮೇಲೆ ಸುತ್ತಾ ಇರುವ ಕ್ಯಾಮೆರಾದಲ್ಲಿ ಹೇಗೆ ಕಾಣಿಸುತ್ತದೆ ಗೊತ್ತಾಗುವುದಿಲ್ಲ.
610
ರಿಯಾಲಿಟಿ ಶೋಗೆ ಪ್ರಾಮುಖ್ಯತೆ ನೀಡಿ ಅದರಿಂದ ಟಿಆರ್‌ಪಿ ಮಾಡಬೇಕು ಅನ್ನೋದಾದರೆ ಮಾಡಬಹುದಿತ್ತು ಇಲ್ಲವಾದರೆ ನಿರ್ಲಕ್ಷ್ಯ ಮಾಡಬಹುದಿತ್ತು ಆದರೆ ಹಾಗೆ ಬಿಗ್ ಬಾಸ್ ತಂಡದವರು ಮಾಡಲಿಲ್ಲ.
710
ಕನ್ಫೆಶನ್ ರೂಮ್‌ಗೆ ಕರೆದು ಪತ್ರ ಕೊಡುತ್ತಿದ್ದರು. ಅದರಲ್ಲಿ ಬಟ್ಟೆ ಸರಿಯಾಗಿ ಧರಿಸಬೇಕು, ಕ್ಯಾಮೆರಾಗೆ ಈ ರೀತಿ ಕಾಣಿಸುತ್ತಿದೆ. ಎಕ್ಸ್‌ಪೋಸ್ ಮಾಡುವ ಬಟ್ಟೆಗಳು ಆದಷ್ಟು ಬೇಡ ಎಂದು ತಿಳಿಸುತ್ತಿದ್ದರು.
810
ಇದನ್ನು ಬಿಗ್ ಬಾಸ್ ಟೆಲಿಕಾಸ್ಟ್ ಮಾಡಿಲ್ಲ. ನನ್ನ ಅತ್ತಿಗೆ ಸುಚಿ ಜೊತೆ ಮಾತನಾಡಿದಾಗ ಹೀಗೆಲ್ಲಾ ಹೇಳುತ್ತಾರಾ? ಎಂದು ಆಶ್ಚರ್ಯದಿಂದ ಪ್ರಶ್ನೆ ಮಾಡಿದ್ದರು ಎಂದು ಸಂಗೀತಾ ಹೇಳಿದ್ದಾರೆ.
910
ನಮ್ಮನ್ನು ಸ್ಪರ್ಧಿಗಳಾಗಿ ನೋಡುತ್ತಿರಲಿಲ್ಲ ಮನೆ ಕುಟುಂಬದವರ ರೀತಿ ನೋಡಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ವಿಚಾರಗಳನ್ನು ಗಮನಿಸುತ್ತಿದ್ದೆ ನಾನು ಎಂದಿದ್ದಾರೆ ಸಂಗೀತಾ.
1010
ಮನೆಯಲ್ಲಿದ ಮಿರರ್ ಹಿಂದೆ ಕ್ಯಾಮೆರಾ ಇರುತ್ತಿತ್ತು. ಅಲ್ಲಿ ಕ್ಯಾಮೆರಾ ಮ್ಯಾನ್ ಬಂದು ಇಡುತ್ತಿದ್ದರು. 50ನೇ ದಿನದ ವಿಟಿ ನೋಡಿದ ಮೇಲೆ ಗೊತ್ತಾಗಲು ಶುರುವಾಯ್ತು.