ಬೆಂಗಳೂರು: ರಸ್ತೆಗಳಲ್ಲಿ ಅರಳಿ ನಿಂತ ಪಿಂಕ್ ಹೂ ನಡುವೆ ನಟಿ ಸುಶ್ಮಿತಾ ಭಟ್ ಫೋಟೋ ಶೂಟ್

First Published | Feb 21, 2024, 12:28 PM IST

ಕಾವ್ಯಾಂಜಲಿ ಸೀರಿಯಲ್ ಮೂಲಕ ಗಮನ ಸೆಳೆದು, ಹಲವು ಕಿರು ಚಿತ್ರ, ವಿಡಿಯೋ ಹಾಡುಗಳು, ಚೌ ಚೌ ಬಾತ್ ಎನ್ನುವ ಸಿನಿಮಾ ಮೂಲಕ ಗಮನ ಸೆಳೆದ ಸುಶ್ಮಿತಾ ಭಟ್ ಅವರ ಸುಂದರ ಫೋಟೋಗಳು.
 

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ (Kavyanjali) ಸೀರಿಯಲ್ ನಲ್ಲಿ ಅಂಜಲಿಯಾಗಿ ನಟಿಸುವ ಮೂಲಕ ನಟನಾ ಜರ್ನಿಗೆ ಕಾಲಿಟ್ಟ ನಟಿ ಸುಶ್ಮಿತಾ ಭಟ್, ಆ ಪಾತ್ರ ಮತ್ತು ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದರು. 
 

ಕಾರಣಾಂತರಗಳಿಂದ ಸೀರಿಯಲ್ ಅರ್ಧದಲ್ಲಿ ಬಿಟ್ಟು ಹೊರ ನಡೆದಿದ್ದ ಸುಶ್ಮಿತಾ (Sushmitha Bhat) ಇಂದಿಗೂ ಅಂಜಲಿಯಾಗಿಯೇ ಜನಪ್ರಿಯತೆ ಪಡೆದಿದ್ದಾರೆ. ಸದ್ಯಕ್ಕೆ ಸಿನಿಮಾ, ಸೀರೀಸ್, ಶಾರ್ಟ್ ಫಿಲಂ (Short Movies) ಎಂದು ಬ್ಯುಸಿಯಾಗಿದ್ದಾರೆ. 
 

Tap to resize

ಸೋಶಿಯಲ್ ಮಿಡಿಯಾದಲ್ಲಿ (Social Media) ತುಂಬಾ ಆಕ್ಟಿವ್ ಆಗಿರುವ ಸುಶ್ಮಿತಾ ಹೆಚ್ಚಾಗಿ ಫೋಟೊ ಶೂಟ್ (PhotoShoot), ಕ್ಯೂಟ್ ಆಗಿರೋ ವಿಡಿಯೋಗಳನ್ನು ಮಾಡುತ್ತಾ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಭಾವ ಭಂಗಿಯಿಂದಲೇ ಸುಶ್ಮಿತಾ ಜನಪ್ರಿಯತೆ ಪಡೆದಿದ್ದಾರೆ. 
 

ಇದೀಗ ನಟಿ, ಮಾಡೆಲ್ (model) ಆಗಿ ಗುರುತಿಸಿಕೊಂಡಿರುವ ಸುಶ್ಮಿತಾ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಅರಳಿ ನಿಂತಿರುವ ಪಿಂಕ್ ಹೂವುಗಳ ಮಧ್ಯೆ ನಿಂತು ಫೊಟೋ ಶೂಟ್ ಮಾಡಿಸಿದ್ದಾರೆ. ಇವರ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. 
 

ಸೀರೆಯ ಬಣ್ಣ, ಜೊತೆಗೆ  ಬೆಂಗಳೂರಿನ ಬೀದಿಗಳಲ್ಲಿ ಅರಳಿ ನಿಂತಿರುವ ಗುಲಾಬಿ ಹೂವಿನ (pink blossoms) ರಂಗು, ಅದರ ಜೊತೆಗೆ ನಿಮ್ಮ ಎಲಿಗೆಂಟ್ ಲುಕ್ (Elegant Look), ಎಲ್ಲವೂ ಸೇರಿ ತುಂಬಾನೆ ಸುಂದರವಾಗಿ ಕಾಣಿಸುತ್ತೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 
 

ಇಂಜಿನಿಯರಿಂಗ್ (engineering) ಪದವಿ ಪಡೆದಿರುವ ಸುಶ್ಮಿತಾ ಭಟ್, ವಿದ್ಯಾಭ್ಯಾಸದ ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಅಚಾನಕ್ ಆಗಿ ಸಿಕ್ಕ ಅವಕಾಶದಿಂದ ಕಿರುತೆರೆಯಲ್ಲಿ ಅಭಿನಯಿಸೋ ಅವಕಾಶ ಪಡೆದುಕೊಂಡರು ಸುಶ್ಮಿತಾ. 
 

ನಟಿಸಿದ ಮೊದಲ ಹಾಗೂ ಒಂದೇ ಸೀರಿಯಲ್ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು. ಅಂಜಲಿ ಪಾತ್ರವು ಎಷ್ಟೊಂದು ಆಪ್ತವಾಗಿತ್ತೆಂದರೆ ಜನರಿಗೆ ಆಕೆ ನಮ್ಮ ಮನೆ ಮಗಳು ಎನ್ನುವಷ್ಟು ಇಷ್ಟವಾಗಿದ್ದರು. ಅದಕ್ಕಾಗಿ ಸೀರಿಯಲ್ ಮುಗಿದು ವರ್ಷಗಳು ಕಳೆದರೂ ಜನರು ಸುಶ್ಮಿತಾರನ್ನು ಅಂಜಲಿ ಅಂತಾನೆ ಗುರುತಿಸುತ್ತಾರೆ. 
 

ಸದ್ಯ ಕಿರುತೆರೆಯಿಂದ ದೂರ ಇರುವ ಸುಶ್ಮಿತಾ ಎಕೋಸ್ ಆಫ್ ಲವ್ (ecos of love) ಎನ್ನುವ ಕಿರು ಚಿತ್ರ, ಚೌ ಚೌ ಬಾತ್ ಎನ್ನುವ ಕನ್ನಡದ ಮೊದಲ ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ (Romantic Comedy) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿದೆ. 
 

Latest Videos

click me!