ಬಿಗ್ ಬಾಸ್ ಸೀಸನ್ 8 ರಲ್ಲಿ (Bigg Boss Season 8) ಸ್ಪರ್ಧಿಯಾಗಿದ್ದ ಕನ್ನಡದ ಇನ್’ಫ್ಲ್ಯೂಯೆನ್ಸರ್ ಹಾಗೂ ಟಿಕ್ ಟಾಕರ್ ಆಗಿದ್ದ ಧನುಶ್ರೀ ಈವಾಗಂತೂ ಸಿಕ್ಕಾಪಟ್ಟೆ ಸ್ಲಿಮ್ ಆಗಿ, ಸ್ಟೈಲಿಶ್ ಆಗಿದ್ದಾರೆ. ಬಿಗ್ ಬಾಸ್ ನಲ್ಲಿ ನೋಡಿದ ಧನುಶ್ರೀಗೂ ಈವಾಗಿನ ಧನುಶ್ರೀಗೂ ಸಿಕ್ಕಾಪಟ್ಟೆ ವ್ಯತ್ಯಾಸ ಕಾಣಿಸ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಧನುಶ್ರೀ (Dhanushree) ಹೆಚ್ಚಾಗಿ ತಮ್ಮ ಫೋಟೊ, ರೀಲ್ಸ್ ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕಳೆದ ಕೆಲವು ಸಮಯದಿಂದ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಕೊಡುತ್ತಿರುವ ಧನುಶ್ರೀ ಇದೀಗ ಕೆಲವೊಂದು ಫೋಟೊಗಳನ್ನು ಪೋಸ್ಟ್ ಮಾಡಿದ್ದು ನಟಿಯ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಧನುಶ್ರೀ ತಿಳಿ ಪಿಂಕ್ ಬಣ್ಣದ ಲಾಂಗ್ ಗೌನ್ ಧರಿಸಿದ್ದು, ಥೇಟ್ ಬಾರ್ಬಿ ಡಾಲ್ ನಂತೆ ಮಿಂಚುತ್ತಿದ್ದಾರೆ. ಅಭಿಮಾನಿಗಳು ಆಕೆಯ ಲುಕ್ ನೋಡಿ ಫಿದಾ ಆಗಿದ್ದು, ಬಾರ್ಬಿ ಥರನೇ ಕಾಣಿಸ್ತಿದ್ದೀರಿ. ತುಂಬಾನೆ ಚೆನ್ನಾಗಿ ಕಾಣಿಸ್ತಿದ್ದೀರಿ, ತುಂಬಾನೆ ಸ್ಲಿಮ್ ಆಗಿದ್ದೀರಿ, ಇಷ್ಟೊಂದು ಸ್ಲಿಮ್ ಆಗಿದ್ದಾದ್ರೂ ಹೇಗೆ ಎಂದೆಲ್ಲಾ ಪ್ರಶ್ನಿಸಿದ್ದಾರೆ.
ಧನುಶ್ರೀ ಫಿಟ್ನೆಸ್ ಬಗ್ಗೆಯೇ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ನಲ್ಲಿ ಚರ್ಚೆ ನಡೆಯುತ್ತಿದೆ. ಗುಂಡು ಗುಂಡಾಗಿ ಮುದ್ದು ಮುದ್ದಾಗಿದ್ದ ಹುಡುಗಿ ನೋಡ್ತಾ ನೋಡ್ತಾ ಇಷ್ಟೊಂದು ಸ್ಲಿಮ್ ಆಗಿದ್ದು ಹೇಗೆ ಅನ್ನೋದು ಹೆಚ್ಚಿನ ಜನರ ಪ್ರಶ್ನೆ. ಅಷ್ಟೇ ಅಲ್ಲ ಏನಾದ್ರೂ ಆರೋಗ್ಯ ಸಮಸ್ಯೆ ಇದ್ಯಾ? ಅದಕ್ಕಾಗಿ ತೂಕ ಇಳಿತಾ ಇದ್ಯಾ ಅಂತಾನೂ ಕೇಳ್ತಿದ್ದಾರೆ ಜನ.
ಇನ್ನು ಧನುಶ್ರೀ ಬಗ್ಗೆ ಹೇಳೋದಾದ್ರೆ ಟಿಕ್ ಟಾಕ್ ನಲ್ಲಿ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದರು. ಇವರಿಗೆ ಇನ್’ಸ್ಟಾಗ್ರಾಂನಲ್ಲಿ ಸುಮಾರು 494K ಫಾಲೋವರ್ಸ್ ಇದ್ದಾರೆ. ರೀಲ್ಸ್ ಮಾಡುವುದರ ಜೊತೆಗೆ ಚರ್ಮ, ಕೂದಲು, ಸೌಂದರ್ಯದ ಟಿಪ್ಸ್‌ಗಳನ್ನು ಕೂಡ ನೀಡುತ್ತಾರೆ ಇವರು.
ಮೊದಲಿನಿಂದಲೂ ಫಿಟ್ನೆಸ್ ಕಡೆಗೆ ಗಮನ ಹರಿಸುವ ಧನುಶ್ರೀ ಕೆಲ ಸಮಯದ ಹಿಂದೆ ತೂಕ ಹೆಚ್ಚಿಸಿಕೊಂಡಿದ್ದರು. ಇದಕ್ಕೆ ಮಾನಸಿಕ ಮತ್ತು ಶಾರೀರಿಕವಾಗಿ ಕೆಲವು ಸಮಸ್ಯೆಗಳು ಕಾರಣ ಅನ್ನೋದನ್ನು ಅವರು ತಿಳಿಸಿದ್ದರು. ಈಗ ಸಿಕ್ಕಾಪಟ್ಟೆ ಸ್ಲಿಮ್ ಆಗಿ ನೋಡುಗರು ಬೆರಗಾಗುವಂತೆ ಮಾಡಿದ್ದಾರೆ.
ಇನ್ನು ಮೊದಲಿಗೆ ಸೋಶಿಯಲ್ ಮೀಡೀಯಾದಲ್ಲಿ ಇನ್ನೊಬ್ಬ ಹುಡುಗನ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಜನರು ಇವರಿಬ್ಬರು ಕಪಲ್ಸ್ ಅಂತಾನೆ ತಿಳ್ಕೊಂಡಿದ್ರು, ಆದ್ರೆ ಕಳೆದ ಹಲವು ತಿಂಗಳುಗಳಿಂದ ಧನುಶ್ರೀ ರೀಲ್ಸ್ ಗಳಲ್ಲಿ ಅವರು ಕಾಣಿಸಲೇ ಇಲ್ಲ. ಹಾಗಾಗಿ ಜನ ಇಬ್ಬರದ್ದು ಬ್ರೇಕ್ ಅಪ್ ಆಗಿದೆ ಅಂತಾನೂ ಮಾತನಾಡಿಕೊಳ್ತಿದ್ದಾರೆ.