ದಾಖಲೆ ಬರೆದ ಹಳ್ಳಿ ಪವರ್ ಖ್ಯಾತಿಯ ಬೆಂಕಿ ಬಿಬಿ; ಮಾತುಗಳಿಂದಲೇ ಬಿತ್ತಾ ಆಟಕ್ಕೆ ಬ್ರೇಕ್?

Published : Sep 06, 2026, 11:00 AM IST

ಜೀ ಕನ್ನಡದ 'ಹಳ್ಳಿ ಪವರ್ ರಿಲೋಡೆಡ್' ಸ್ಪರ್ಧಿ ಬೆಂಕಿ ಬಿಬಿ ಅವರ ಎಲಿಮಿನೇಷನ್ ಕುರಿತ ಪ್ರೋಮೋ ವೈರಲ್ ಆಗಿದೆ. ಬಿಬಿ ನಿಜವಾಗಿಯೂ ಶೋನಿಂದ ಹೊರಬಂದಿದ್ದಾರೆಯೇ ಎಂಬ ಕುತೂಹಲವನ್ನು ಇಂದಿನ ಸಂಚಿಕೆ ತಿಳಿಸಲಿದೆ.

PREV
15
ಹಳ್ಳಿ ಪವರ್ ರಿಲೋಡೆಡ್

ಜೀ ಕನ್ನಡದ ಪವರ್‌ಫುಲ್ ರಿಯಾಲಿಟಿ ಶೋ ಆಗಿರುವ ಹಳ್ಳಿ ಪವರ್ ರಿಲೋಡೆಡ್ ಸ್ಪರ್ಧಿಯಾಗಿರೋ ಬಿಬಿ ಹಜರಾ ಉರ್ಫ್ ಬೆಂಕಿ ಬಿಬಿ ದಾಖಲೆಯೊಂದನ್ನು ಬರೆದಿದ್ದಾರೆ. ಆಟದ ಜೊತೆ ತಮ್ಮ ಅಟ್ಯಾಕಿಂಗ್ ಮಾತುಗಳಿಂದಲೇ ಬಿಬಿ ಎಲ್ಲರ ಗಮನ ಸೆಳೆದಿದ್ದಾರೆ. ವಿಷಯ ಯಾವುದೇ ಇರಲಿ? ಅಲ್ಲಿ ಬಿಬಿ ಅವರ ಬೆಂಕಿಯಂಥಾ ಮಾತುಗಳಿರುತ್ತವೆ.

25
ಬೆಂಕಿಯಂಥಾ ಮಾತು

ಈ ಮಾತುಗಳು ಸಹ ಸ್ಪರ್ಧಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತಿರೋದು ಕಂಡು ಬರುತ್ತಿದೆ. ಈ ಹಿನ್ನೆಲೆ ವಾಡಿ ಮನೆಯ ಸ್ಪರ್ಧಿಗಳು ಒಕ್ಕೊಲರಿನಿಂದ ಬಿಬಿ ಹೆಸರು ತೆಗೆದುಕೊಂಡಿದ್ದಾರೆ. ಈ ಹೆಸರು ತೆಗೆದುಕೊಂಡಿದ್ದು ಬಿಬಿ ಈ ರಿಯಾಲಿಟಿ ಶೋನಿಂದ ಹೋಗಲಿ ಎಂಬ ಕಾರಣಕ್ಕೆ. ಇಂದು ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿಯೇ ಬಿಬಿ ಶೋನಿಂದ ಹೊರಗೆ ಹೋಗುತ್ತಿರೋದನ್ನು ತೋರಿಸಲಾಗಿದೆ.

35
1 ಮಿಲಿಯನ್‌ಗೂ ಅಧಿಕ ವ್ಯೂವ್

ಬೆಂಕಿ ಬಿಬಿ ಔಟ್‌ ಆದಂತೆ ತೋರಿಸಲಾಗಿರುವ ಪ್ರೋಮೋ ಬಿಡುಗಡೆಯಾದ 2 ಗಂಟೆಯಲ್ಲಿ 1 ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದೆ. ಆಟಗಳಲ್ಲಿ ತನ್ನನ್ನು ಸಾಬೀತು ಮಾಡಿಕೊಂಡಿರುವ ಬಿಬಿ ನಿಜವಾಗ್ಲೂ ಶೋನಿಂದ ಹೊರಗೆ ಹೋದ್ರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

45
ಸಂತೆಯಲ್ಲಿ ವ್ಯಾಪಾರ

ಶನಿವಾರದ ಎಪಿಸೋಡ್‌ನಲ್ಲಿ ಹಳ್ಳಿ ಪವರ್‌ನ ಎಲ್ಲಾ ಸ್ಪರ್ಧಿಗಳು, ಅಮಿನಗಢದ ಸಂತೆಗೆ ತೆರಳಿ ವ್ಯಾಪಾರ ಮಾಡಿದ್ದರು. ಜಾನುವಾರುಗಳು ಮಾರಾಟಕ್ಕೆ ಫೇಮಸ್ ಅಗಿರೋ ಅಮಿನಗಢದ ಸಂತೆಯಲ್ಲಿ ಬಜ್ಜಿ, ಎಳನೀರು, ಜಾನುವಾರುಗಳನ್ನು ಅಲಂಕರಿಸಲು ಬಳಸುವ ಸಾಮಾಗ್ರಿ, ಟೀ/ಕಾಫಿ, ಊಟ, ಐಸ್‌ಕ್ರೀಂ ಮಾರಾಟ ಮಾಡಿದ್ದರು. ಈ ಹಿಂದಿನ ಸಂಚಿಕೆಯಲ್ಲಿ ರಾಧೆಯರಾಗಿ, ಐಹೊಳೆ ಮಕ್ಕಳೊಂದಿಗೆ ಆಟವಾಡಿದ್ದರು.

55
ವೀಕ್ಷಕರು ಹೇಳಿದ್ದೇನು?

ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ಕಮೆಂಟ್ ಮಾಡಿರುವ ಶೋ ವೀಕ್ಷಕರು, ಹಳ್ಳಿ ಪವರ್‌ನಲ್ಲಿ ಬಿಬಿ ಇದ್ರೆ ಚೆಂದ, ಅಕೆಯನ್ನು ದಯವಿಟ್ಟು ಹೊರಗೆ ಕಳುಹಿಸಬೇಡಿ. ಶೋನಲ್ಲಿ ಬಿಬಿ ಇರೋದಕ್ಕೆ ಒಂದು ಎಪಿಸೋಡ್ ಮಿಸ್ ಮಾಡದೇ ನೋಡಿದ್ದೀವಿ. ಒಂದು ವೇಳೆ ಬಿಬಿ ಹೋದ್ರೆ ಶೋ ನೋಡಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಬರೀ ಮಾತಾಡಿದ್ರೆ ಅಲ್ಲಮ್ಮಾ, ಆಟವೂ ಆಡಬೇಕು ಎಂದು ಬರೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories