ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ಅನನ್ಯ ಮೋಹನ್ ತಾಯಿ ಕೂಡ ನಟಿ!

Published : Apr 02, 2024, 05:56 PM IST

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶಾರ್ವರಿಯ ಮಗಳು ನಿಧಿ ಪಾತ್ರದಲ್ಲಿ ಮಿಂಚುತ್ತಿರುವ ಹುಡುಗಿ ಜನಪ್ರಿಯ ನಟಿ ಮತ್ತು ನಿರ್ದೇಶಕ ದಂಪತಿಗಳ ಮಗಳು. ಇವರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 

PREV
17
ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ಅನನ್ಯ ಮೋಹನ್ ತಾಯಿ ಕೂಡ ನಟಿ!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು (Shreerastu Shubhamastu) ಸೀರಿಯಲ್ ಗೆ ಹೆಚ್ಚಿನ ಅಭಿಮಾನ ಬಳಗವೇ ಇದೆ. ಯಾಕಂದ್ರೆ ಹಿರಿಯ ಜೀವಗಳಿಬ್ಬರ ಕಥೆ ಹೇಳುತ್ತಾ, ಹೊಸ ಹೊಸ ಟ್ವಿಸ್ಟ್ ಗಳನ್ನು ಅನಾವರಣ ಮಾಡುತ್ತಿರುವ ಧಾರಾವಾಹಿ ಇದು. 
 

27

ಶ್ರೀರಸ್ತು ಶುಭಮಸ್ತು ಸೀರಿಯಲ್ ನ ಪ್ರತಿಯೊಂದು ಪಾತ್ರಗಳು ಸಹ ವೀಕ್ಷಕರಿಗೆ ಮೆಚ್ಚುಗೆಯಾಗಿದೆ. ಇನ್ನು ವಿಲನ್ ಶಾರ್ವರಿಯ ಪುತ್ರಿ ನಿಧಿ ಪಾತ್ರವೂ ಕೊಂಚ ವಿಭಿನ್ನವಾಗಿದೆ. ವಿಲ್ಲನ್ ಅಲ್ಲ, ಆದ್ರೂ ಸಣ್ಣ ಕಪಟ ಬುದ್ದಿ ಇರೋ ಹುಡುಗಿ ನಿಧಿ ಪಾತ್ರದಲ್ಲಿ ನಟಿಸ್ತಿರೋ ನಟಿ ಅನನ್ಯ ಮೋಹನ್ (Ananya Mohan). 
 

37

ಈ ಅನನ್ಯ ಮೋಹನ್ ಕನ್ನಡದ ಜನಪ್ರಿಯ ನಟಿಯೊಬ್ಬರ ಮಗಳು, ಅಷ್ಟೇ ಅಲ್ಲ ಇವರ ತಂದೆ ಕೂಡ ಕನ್ನಡದ ನಿರ್ದೇಶಕರಾಗಿದ್ದಾರೆ. ಅನನ್ಯ ಕನ್ನಡದ ಹಿರಿಯ ನಟಿ ವತ್ಸಲಾ ಮೋಹನ್ ಮತ್ತು ನಿರ್ದೇಶಕ ಕೆ. ಎನ್ ಮೋಹನ್ ಕುಮಾರ್ ಅವರ ಮುದ್ದಿನ ಮಗಳು. ನಟನೆ ಇವರಿಗೆ ಹೊಸತೇನಲ್ಲ. 
 

47

ವತ್ಸಲ ಮೋಹನ್ (Vatsala Mohan) ಹಿಂದೆ ಮುಕ್ತ ಸೀರಿಯಲ್ ನಲ್ಲಿ ನಟಿಸಿದ್ದರು, ಅಲ್ಲದೇ ಡೈರೆಕ್ಟರ್ ಸ್ಪೆಷಲ್, ಸಿದ್ಲಿಂಗು, ಕಸ್ತೂರಿ ಮಹಲ್, ಕಟ್ಟಿಂಗ್ ಶಾಪ್ ಮೊದಲಾದ ಸಿನಿಮಾದಲ್ಲಿ ನಟಿಸಿದ್ದಾರೆ. ಅನನ್ಯ ತಂದೆ ಮೋಹನ್ (K N Mohan Kumar) ಬೊಂಬೆಯಾಟ ಎನ್ನುವ ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಮಾಸ್ಕೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. 

57

ನಟನೆಯ ಕುಟುಂಬದಿಂದಲೇ ಬಂದಿರೋ ಅನನ್ಯ ಕೂಡ ರಂಗಭೂಮಿ ಕಲಾವಿದೆಯಾಗಿದ್ದು, ಇವರು ಕೂಡ ಸೀರಿಯಲ್, ಸಿನಿಮಾ, ಶಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ನಿಧಿಯಾಗಿ ಅಭಿನಯಿಸುತ್ತಿದ್ದಾರೆ. 
 

67

ಬಾಲ್ಯದಲ್ಲಿ ಅನನ್ಯ ತನ್ನ ತಾಯಿ ವತ್ಸಲಾ ಮೋಹನ್ ಜೊತೆ ಮುಕ್ತ ಸೀರಿಯಲ್ (Mukta serial) ನಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದರು. ಅಷ್ಟೇ ಅಲ್ಲ ಜನಪ್ರಿಯ ಕನ್ನಡತಿ ಸೀರಿಯಲ್ ನಲ್ಲಿ ಕೆಲವೊಂದಿಷ್ಟು ಎಪಿಸೋಡ್ ಗಳಲ್ಲಿ ಸಿಂಚನಾ ಆಗಿ ಸಹ ಮಿಂಚಿದ್ದರು. 
 

77

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಅನನ್ಯ ಹೆಚ್ಚಾಗಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಸೀರಿಯಲ್ ತಂಡದ ಜೊತೆಗೆ ಡ್ಯಾನ್ಸ್ ಮಾಡುತ್ತಾ, ವಿಡಿಯೋ, ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 
 

Read more Photos on
click me!

Recommended Stories