ಇವರೇ ನೋಡಿ ಕಿರುತೆರೆ ನಟಿಯರ ರಿಯಲ್ ಲೈಫ್ ಸಂಗಾತಿ… ಈ ಜೋಡಿಗಳಲ್ಲಿ ನಿಮಗ್ಯಾವ ಜೋಡಿ ಇಷ್ಟ?

Published : Nov 21, 2024, 03:51 PM ISTUpdated : Nov 21, 2024, 04:34 PM IST

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಜನಪ್ರಿಯ ನಟಿಯರ ರಿಯಲ್ ಲೈಫ್ ಸಂಗಾತಿ ಯಾರು ಎನ್ನುವ ಕುತೂಹಲ ನಿಮಗೆ ಇದ್ದೇ ಇರುತ್ತೆ. ಅದಕ್ಕೆ ಉತ್ತರ ಇಲ್ಲಿದೆ. ಇವರೇ ನೋಡಿ, ಸೀರಿಯಲ್ ನಟಿಯರ ರಿಯಲ್ ಸಂಗಾತಿಗಳು.   

PREV
114
ಇವರೇ ನೋಡಿ ಕಿರುತೆರೆ ನಟಿಯರ ರಿಯಲ್ ಲೈಫ್ ಸಂಗಾತಿ… ಈ ಜೋಡಿಗಳಲ್ಲಿ ನಿಮಗ್ಯಾವ ಜೋಡಿ ಇಷ್ಟ?

ಗೌತಮಿ ಜಾಧವ್ -ಅಭಿಷೇಕ್ ಕಾಸರಗೋಡು
ಸತ್ಯಾ ಸೀರಿಯಲ್ ಮೂಲಕ ಜನಮನ ಗೆದ್ದು, ಸದ್ಯ ಬಿಗ್ ಬಾಸ್ ಸ್ಪರ್ಧಿಯಾಗಿರುವ ಗೌತಮಿ ಜಾಧವ್ (Gouthami Jadhav) ಪತಿ ಅಭಿಷೇಕ್ ಕಾಸರಗೋಡು, ಇವರು ಸಿನಿಮಾಟೋಗ್ರಾಫರ್ ಆಗಿದ್ದು, ಇಬ್ಬರದ್ದು ಲವ್ ಮ್ಯಾರೇಜ್. 

214

ಧನ್ಯಾ ದೀಪಿಕಾ - ಆಕರ್ಷ್ 
ಈ ಜೋಡಿ ಕುಲವಧು ಸೀರಿಯಲ್ ನಲ್ಲಿ ಜೊತೆಯಾಗಿ ನಟಿಸಿದ್ದರು, ಅಲ್ಲಿಂದಲೇ ಲವ್ ಶುರುವಾಗಿ, ಇದೀಗ ನಾಲ್ಕನೇ ವರ್ಷದ ದಾಂಪತ್ಯ ಜೀವನದ ಸಂಭ್ರಮದಲ್ಲಿದ್ದಾರೆ.

314

ಶಶಿಧರ್ ಹೆಗ್ಡೆ -ಲಾವಣ್ಯ ಭಾರಧ್ವಜ್ 
ಶಶಿಧರ್ ಹೆಗ್ಡೆ ಹಾಗೂ ಲಾವಣ್ಯ ಭಾರಧ್ವಜ್ (Lavanya Bharadhwaj )ಇಬ್ಬರೂ ಸಹ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಜೋಡಿ ಕೂಡ ರಾಜಾ ರಾಣಿ ಸೀರಿಯಲ್ ಸೆಟ್ ನಲ್ಲೆ ಲವ್ ಮಾಡಿ ಮದ್ವೆ ಆಗಿರೋದು. 

414

ಆರ್ ಜೆ ಪ್ರದೀಪ -ಶ್ವೇತಾ ಪ್ರಸಾದ್ 
ಈ ಜೋಡಿ 10 ವರ್ಷದ ಸುಂದರ ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಶ್ವೇತಾ ಪ್ರಸಾದ್ (Shwetha Prasad)ಸೀರಿಯಲ್, ಸಿನಿಮಾ ಹಾಗೂ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ, ಇನ್ನು ಪ್ರದೀಪ್ ಆರ್ ಜೆ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

514
Disha Madan Lakshmi Nivasa Zee Kannada

ದಿಶಾ ಮದನ್ - ಶಶಾಂಕ್ 
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಜನರ ನೆಚ್ಚಿನ ಭಾವನಾ (Disha Madan )ಅವರ ಪತಿ ಶಶಾಂಕ್, ಈ ಜೋಡಿ, ರಾಜಾ ರಾಣಿ ಕಾರ್ಯಕ್ರಮದಲ್ಲೂ ಭಾಗಿಯಾಗಿತ್ತು. 

614

ಚಂದನಾ ಮಹಾಲಿಂಗಯ್ಯ - ದೀಪಕ್ 
ಸೀತಾ ರಾಮ ಧಾರಾವಾಹಿಯಲ್ಲಿ ಶಾಲಿನಿಯಾಗಿ ನಟಿಸುತ್ತಿರುವ ಚಂದನಾ ಮಹಾಲಿಂಗಯ್ಯ (Chandana Mahalingaiah) ಹಾಗೂ ಹಲವು ಸೀರಿಯಲ್ ಗಳಲ್ಲಿ ನಾಯಕರಾಗಿದ್ದ ದೀಪಕ್ ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

714

ಐಶ್ವರ್ಯಾ - ವಿನಯ್
ಈ ಜೋಡಿ ಕೂಡ ಕನ್ನಡ ಕಿರುತೆರೆಯ ಜನಪ್ರಿಯ ನಟರು. ಇಬ್ಬರೂ ಸಹ ಬೇರೆ ಬೇರೆ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರದು ಸಹ ಹಲವು ವರ್ಷಗಳ ಲವ್ ಸ್ಟೋರಿ, ಸದ್ಯ ದಂಪತಿಗಳಾಗಿದ್ದಾರೆ. 

814

ಕಾವ್ಯ ಗೌಡ -ಸೋಮಶೇಖರ್ 
ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಕನ್ನಡಿಗರ ನೆಚ್ಚಿನ ನಟಿಯಾಗಿ ಚಿರಪರಿಚಿತರಾಗಿರುವ ಕಾವ್ಯಾ ಗೌಡ (Kavya Gowda), 3 ವರ್ಷಗಳ ಹಿಂದ ಬ್ಯುಸಿನೆಸ್ ಮೆನ್ ಸೋಮಶೇಖರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

914

ಕಾವ್ಯಾ ಮಹಾದೇವ್ - ಕುಮಾರ್ 
ನಮ್ಮನೆ ಯುವರಾಣಿ ಧಾರಾವಾಹಿಯ ಅಹಲ್ಯ ಪಾತ್ರದಲ್ಲಿ ನಟಿಸಿದ್ದ ಕಾವ್ಯಾ ಮಹಾದೇವ್ ಮದುವೆಯಾಗಿದ್ದು, ಕುಮಾರ್ ಎನ್ನುವವರನ್ನ. ಈ ಜೋಡಿ ರಾಜಾ ರಾಣಿ ಶೋ ವಿನ್ನರ್ ಕೂಡ ಆಗಿತ್ತು. 
 

1014

ದೀಪಿಕಾ ದಾಸ್ - ದೀಪಕ್ ಗೌಡ 
ಕನ್ನಡ ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ದಾಸ್ (Deepika Das), ಈ ವರ್ಷವಷ್ಟೇ, ಎಲ್ಲೂ ಸುದ್ದಿಯಾಗದಂತೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಾಗಿದ್ದರು. 
 

1114

ರಶ್ಮಿ ಪ್ರಭಾಕರ್ - ನಿಖಿಲ್ 
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ರಶ್ಮಿ ಪ್ರಭಾಕರ್ (Rashmi Prabhakar) ನಿಖಿಲ್ ಅವರ ಜೊತೆ 2022 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ರಿಯಾಲಿಟಿ ಶೋದಲ್ಲೂ ಭಾಗವಹಿಸಿತ್ತು. 

1214

ದೀಪಾ ಕಟ್ಟೆ - ರಕ್ಷಿತ್ ಯಡಪಡಿತ್ತಾಯ
ಮಿಥುನ ರಾಶಿ, ಶ್ರೀರಸ್ತು ಶುಭಮಸ್ತು ಸೀರಿಯಲ್ ಚೆಲುವೆ ದೀಪಾ ಕಟ್ಟೆ, ತಮ್ಮ ಬಹುದಿನಗಳ ಸ್ನೇಹಿತಾ ರಕ್ಷಿತ್ ಜೊತೆ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 

1314

ಐಶ್ವರ್ಯ ಪಿಸ್ಸೆ - ಹರಿವಿನಯ್ 
ಸರ್ವಮಂಗಳ ಮಾಂಗಲ್ಯೆ ಸೀರಿಯಲ್ ಸೇರಿ, ಕನ್ನಡದಲ್ಲಿ ಹಲವು ಹಿಟ್ ಸೀರಿಯಲ್ ಕೊಟ್ಟು ಸದ್ಯ ತೆಲುಗಿನಲ್ಲಿ ಬ್ಯುಸಿಯಾಗಿರುವ ನಟಿ ಐಶ್ವರ್ಯ ಪಿಸ್ಸೆ ಹರಿವಿನಯ್ ಜೊತೆ ಸಪ್ತಪದಿ ತುಳಿದಿದ್ದಾರೆ. 

1414

ಕೌಸ್ತುಭಮಣಿ - ಸಿದ್ಧಾಂತ್ 
ನನ್ನರಸಿ ರಾಧೆ ಸೀರಿಯಲ್ ನಲ್ಲಿ ಮುದ್ದು ಮುದ್ದಾಗಿ ನಟಿಸಿ ಜನಮನ ಗೆದ್ದ ಕೌಸ್ತುಭ ಮಣಿ, ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದಿದೆ. ಇವರು ಈ ವರ್ಷದ ಆರಂಭದಲ್ಲಿ ಸಿದ್ಧಾಂತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 
 

Read more Photos on
click me!

Recommended Stories