Published : Feb 23, 2025, 01:16 PM ISTUpdated : Feb 23, 2025, 02:06 PM IST
ಕನ್ನಡ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಚಾರು ಮತ್ತು ರಾಮಾಚಾರಿ ಜೋಡಿಯಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಟ್ರೆಡಿಶನಲ್ ಲುಕ್ ನಲ್ಲಿ ಈ ಜೋಡಿ ಸಖತ್ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ.
ಸೀರಿಯಲ್ ಪ್ರಿಯರಿಗೆ ನಮ್ಮ ರಾಮಾಚಾರಿ ಮತ್ತು ಚಾರು ಜೋಡಿಯ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಯಾಕಂದ್ರೆ ಇವರು ಕನ್ನಡಿಗರ ಫೇವರಿಟ್ ಜೋಡಿಗಳು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ (Ramachari serial) ಧಾರಾವಾಹಿಯ ಈ ನಾಯಕ ಮತ್ತು ನಾಯಕಿ ಅಂದ್ರೆ ವೀಕ್ಷಕರಿಗೆ ಫೇವರಿಟ್. ಇಬ್ಬರ ಮುದ್ದಾಟ, ಚಾರು ತುಂಟಾಟ ಎಲ್ಲವೂ ವೀಕ್ಷಕರಿಗೆ ತುಂಬಾನೆ ಇಷ್ಟ.
26
ಅದೆಷ್ಟೇ ಕಷ್ಟ ಬಂದರೂ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲುತ್ತಾರೆ ಈ ಜೋಡಿ. ಗಂಡ - ಹೆಂಡ್ತಿ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ರಾಮಾಚಾರಿ ಮತ್ತು ಚಾರು (Ramachari and Charu) ಉದಾಹರಣೆಯಾಗಿ ನಿಂತಿದ್ದಾರೆ. ಇದೀಗ ಚಾರು ಖ್ಯಾತಿಯ ಮೌನ ಗುಡ್ಡೆಮನೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂಪ್ರದಾಯಿಕ ಧಿಸಿರಿನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
36
ಮೌನ ಗುಡ್ಡೆಮನೆ (Mouna Guddemane) ಹಸಿರು ಬಣ್ಣದ ಇಳ್ಕಲ್ ಸೀರೆಯುಟ್ಟು, ಕಾಸಿನ ಸರ, ಮೂಗಿನಲ್ಲಿ ನತ್ತು, ಸೊಂಟದಲ್ಲಿ ಸೊಂಟ ಪಟ್ಟಿ ಹಾಕಿ, ಉದ್ದ ಜಡೆ ಹಾಕಿ ಮುದ್ದಾಗಿ ರೆಡಿಯಾಗಿದ್ದಾರೆ. ಇನ್ನು ಅವರಿಗೆ ಸಾಥ್ ಕೊಡಲು ಚಾರು ಜೋಡಿ ರಾಮಾಚಾರಿ ಅಂದರೆ ರಿತ್ವಿಕ್ ಕೃಪಾಕರ್ (Ritvik Krupakar) ಕೂಡ ಪಂಚೆ ಹಾಗೂ ಕೇಸರಿ ಬಣ್ಣದ ಕುರ್ತಾ ಧರಿಸಿ ಮೌನ ಜೊತೆ ಪೋಸ್ ಕೊಟ್ಟಿದ್ದಾರೆ.
46
ಸಾಂಪ್ರದಾಯಿಕ ಉಡುಗೆಯಲ್ಲಿ ತಮ್ಮ ಮೆಚ್ಚಿನ ಜೋಡಿಯನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಈ ಹೊಸ ವೇಷ, ಸೀರಿಯಲ್ ನಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಮಾಡಲಾಗಿತ್ತು. ಚಾರು ಕನಸು ಕಾಣುವಂತಹ ಹಾಡಿನಲ್ಲಿ ಇಬ್ಬರು ತುಂಬಾನೆ ಟ್ರೆಡಿಶನಲ್ ಆಗಿ ಕಾಣಿಸಿಕೊಂಡಿದ್ದರು.
56
ಚಾರು ಮತ್ತು ಚಾರಿ ಜೋಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದು, ಗೊಂಬೆ, ಮುದ್ದಾದ ಜೋಡಿಗಳು, ರಾಜ ರಾಣಿ ತರ ಕಾಣಿಸ್ತಾ ಇದ್ದೀರಾ ಮುದ್ದು ಮುದ್ದಾದ ಗೊಂಬೆ ಮೌನ ಮತ್ತು ಋತ್ವಿಕ್, ಸೂಪರ್ ಜೋಡಿ (best pair) , ಈ ಜೋಡಿಯನ್ನು ಸ್ವರ್ಗದಲ್ಲೇ ನಿಶ್ಚಯ ಮಾಡಲಾಗಿದೆ ಎಂದು ಹಾಡಿ ಹೊಗಳಿದ್ದಾರೆ.
66
ಅಷ್ಟೇ ಅಲ್ಲ, ಈ ಮುದ್ದಾದ ಜೋಡಿಗೆ ಯಾರದೇ ದೃಷ್ಟಿ ಬೀಳದೇ ಇರಲಿ. ಯಾವಾಗಲೂ ಹೀಗೆ ಚೆನ್ನಾಗಿರಿ. ಅಬ್ಬಬ್ಬಾ ನೋಡೋಕೆ ಎರಡು ಕಣ್ಣು ಸಾಲದು, ಅಷ್ಟು ಮುದ್ದು ಮುದ್ದಾದ ಜೋಡಿ ನಮ್ಮ ಚಾರು ಚಾರಿ. ಯಾರ ದೃಷ್ಟಿ ತಾಗದೆ ಇರಲಿ ಎಂದಿದ್ದಾರೆ. ಇನ್ನು ಒಬ್ಬ ಅಭಿಮಾನಿ ಹಾಡನ್ನು ಮೆಚ್ಚಿಕೊಂಡಿದ್ದು ಈ ಹಾಡು ನನಗಂತೂ ಸಕ್ಕತ್ ಖುಷಿಯಾಯಿತು ಎಪಿಸೋಡ್ ನೋಡಿ. ಸೂಪರ್ ಲುಕ್ಕು ಇಬ್ರುದು ಎಂದಿದ್ದಾರೆ. ಈ ಜೋಡಿ ನಿಮಗೆಷ್ಟು ಇಷ್ಟ ಆಯ್ತು ಹೇಳಿ…?