Published : Feb 22, 2025, 01:07 PM ISTUpdated : Feb 22, 2025, 01:33 PM IST
ʼಬಿಗ್ ಬಾಸ್ 13ʼ ಶೋನಲ್ಲಿ ತನ್ನ ಮುಗ್ಧತೆ, ಪ್ರಾಮಾಣಿಕತೆ ಮೂಲಕ ಜನರ ಮನಸ್ಸು ಗೆದ್ದಿದ್ದ ಶೆಹನಾಜ್ ಗಿಲ್‌ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೇ ಸಿದ್ದಾರ್ಥ್ ಶುಕ್ಲ ಹಾಗೂ ಶೆಹನಾಜ್ ಗಿಲ್ ಅವರ ಫ್ಯಾನ್ಸ್ ಪೇಜ್‌ಗಳು ಕ್ರಿಯೇಟ್ ಆಗಿತ್ತು. ಇಷ್ಟೆಲ್ಲ ಖ್ಯಾತಿ ಪಡೆದ ಶೆಹನಾಜ್ ಈಗ ಟ್ರೋಲ್ ಆಗಿದ್ದಾರೆ.
ಸಿದ್ದಾರ್ಥ್ ಶುಕ್ಲ ಹಾಗೂ ಶೆಹನಾಜ್ ಗಿಲ್ ನೋಡಲು ಪ್ರೇಕ್ಷಕರು ಹಂಬಲಿಸುತ್ತಿದ್ರು
ಬದುಕಿನುದ್ದಕ್ಕೂ ಶೆಹನಾಜ್‌ಗೆ ಪಾಸಿಟಿವ್ ಪ್ರತಿಕ್ರಿಯೆಗಳೇ ಜಾಸ್ತಿ ಸಿಕ್ಕಿತ್ತು. ಬಿಗ್ ಬಾಸ್ ಶೋನಿಂದ ಹೊರಗಡೆ ಬಂದ್ಮೇಲೆ ಸನಾ ಸಣ್ಣಗಾದರು. ಪಕ್ಕಾ ಬೇಬಿ ಡಾಲ್ ಥರ ಅವರು ಕಾಣತೊಡಗಿದರು. ಸಿದ್ದಾರ್ಥ್-ಸನಾ ಜೋಡಿ ನೋಡಲು ವೀಕ್ಷಕರು ಕಾಯುತ್ತಲಿದ್ದರು. ಅದೇ ಸಮಯಕ್ಕೆ ಒಂದು ದುರಂತ ನಡೆದು ಹೋಯ್ತು.
27
ಹೃದಯಾಘಾತದಿಂದ ನಿಧನರಾದ ಸಿದ್ದಾರ್ಥ್ ಶುಕ್ಲ
ನಟ ಸಿದ್ದಾರ್ಥ್ ಶುಕ್ಲ ಹೃದಯಾಘಾತದಿಂದ ನಿಧನರಾದರು. ಪ್ರಿಯತಮನಿಂದ ದೂರಾದ ಸನಾ ಸಿನಿಮಾಗಳತ್ತ ಮುಖ ಮಾಡಿದರು. ನೋವನ್ನು ತನ್ನಲ್ಲೇ ಇಟ್ಕೊಂಡು, ಮುಖದಲ್ಲಿ ನಗು ಬೀರುತ್ತ ಆಲ್ಬಮ್ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳತೊಡಗಿದರು.
37
ಐಟಮ್ ಸಾಂಗ್ ಭಾರೀ ಟ್ರೋಲ್ ಆಯ್ತು!
ಹಿಂದಿ, ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ಶೆಹನಾಜ್ ಗಿಲ್ ಕಾಣಿಸಿಕೊಂಡರು. ಇನ್ನು ಐಟಮ್ ಸಾಂಗ್‌ನಲ್ಲಿಯೂ ಹೆಜ್ಜೆ ಹಾಕಿದರು. ಇತ್ತೀಚೆಗೆ ಸನಾ ಕಾಣಿಸಿಕೊಂಡ ಅಪ್ಸರಾ ಹಾಡಿನ ಸ್ಟೆಪ್ ಭಾರೀ ಟ್ರೋಲ್ ಆಗಿತ್ತು.
47
ಹಾಫ್ ಬಿಕಿನಿ ಹಾಕಿದ್ರು, ಶಾರ್ಟ್ಸ್ ಬಟನ್ ಬಿಚ್ಚಿದ್ರು
ಈಗ ಸನಾ ಬೀಚ್‌ನಲ್ಲಿ ಹಾಫ್ ಬಿಕಿನಿ ಹಾಕಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ಸ್‌ನ ಬಟನ್ ಬಿಚ್ಚಿ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ಬಾಯಿಗೆ ಬಂದಹಾಗೆ ಬೈದಿದ್ದಾರೆ.
57
ಚಿತ್ರರಂಗದಲ್ಲಿ ಫುಲ್ ಆಕ್ಟಿವ್
ಗಾಯಕಿ, ನಟಿಯಾಗಿರುವ ಶೆಹನಾಜ್ ಗಿಲ್ ಅವರು ಚಿತ್ರರಂಗದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಹೀಗಾಗಿ ಇವರು ಬೇರೆ ವಿಚಾರದ ಕಡೆ ತಲೆ ಕೆಡಿಸಿಕೊಳ್ತಿಲ್ವಂತೆ.
ಶೆಹನಾಜ್ ಗಿಲ್ ಅವರು ಬಿಗ್ ಬಾಸ್ ಶೋನಲ್ಲಿದ್ದಾಗ ದಪ್ಪಗಿದ್ದರು. ಆ ನಂತರ ಅವರು ಸಣ್ಣಗಾದರು. ಡಯೆಟ್ ಮಾಡಿ ಸಣ್ಣಗಾದೆ ಎಂದು ಅವರು ಹೇಳಿಕೊಂಡಿದ್ದಾರೆ.
77
ಶೆಹನಾಜ್ ಗಿಲ್ ಅವ್ರಿಗೆ ದೊಡ್ಡ ಯಶಸ್ಸು ಸಿಗತ್ತಾ ?
ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವ ಶೆಹನಾಜ್ ಗಿಲ್‌ಗೆ ದೊಡ್ಡ ಯಶಸ್ಸು ಸಿಗತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಸಣ್ಣಗಾದ ಮೇಲೆ ಸನಾ ಚೆನ್ನಾಗಿ ಕಾಣ್ತಿಲ್ಲ ಎಂದು ಕೆಲವರು ಹೇಳಿದ್ದಾರೆ.