ದೇವರು ಒಂದು ಕೇಳಿದ್ರೆ, ಎರಡು ಕೊಟ್ಟು ಆಶೀರ್ವದಿಸಿದ: Ramachari Serial ನಟಿ ಐಶ್ವರ್ಯಾ ಮನೆಯಲ್ಲಿ ಡಬಲ್‌ ಸಂಭ್ರಮ

Published : Dec 14, 2025, 02:17 PM IST

ಕನ್ನಡ ಕಿರುತೆರೆ ನಟಿ ಐಶ್ವರ್ಯಾ ಸಾಲೀಮಠ ಕೂಡ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ತಿಳಿಸಿದ್ದರು. ಈಗ ಇವರ ಖುಷಿ ಡಬಲ್‌ ಆಗಿದೆ. ಈ ವಿಷಯವನ್ನು ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಶುಭಾಶಯವನ್ನು ತಿಳಿಸಿದ್ದಾರೆ. ಹಾಗಾದರೆ ಏನದು?

PREV
15
ಪಾಲಕರಾಗಿದ್ದಾರೆ

ನಟಿ ಐಶ್ವರ್ಯಾ ಸಾಲೀಮಠ ಅವರು ಕೊನೆಯದಾಗಿ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಆಮೇಲೆ ಈ ಸೀರಿಯಲ್‌ನಿಂದ ಹೊರಗಡೆ ಬಂದಿದ್ದರು. ಐಶ್ವರ್ಯಾ ಸಾಲೀಮಠ ಹಾಗೂ ವಿನಯ್‌ ಯುಜೆ ಅವರು ಪಾಲಕರಾಗಿ ಬಡ್ತಿ ಪಡೆದಿದ್ದಾರೆ.

25
ದೃಷ್ಟಿ ಹಾಕಬೇಡಿ

ಐಶ್ವರ್ಯಾ ಅವರು ಸೋಶಿಯಲ್‌ ಮೀಡಿಯಾದಲ್ಲಿ, ನಾವು ಪಾಲಕರಾಗುತ್ತಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ಕೊಟ್ಟು ಆಶೀರ್ವದಿಸಿದ್ದಾನೆ. ನಮ್ಮ ಕುಟುಂಬವು ಬೆಳೆಯುತ್ತಿದೆ. ದೃಷ್ಟಿ ಹಾಕಬೇಡಿ” ಎಂದು ಹೇಳಿದ್ದರು.

35
ಒಂದು ಮಾಡಿದ 'ಮಹಾಸತಿ'

ಉದಯ ಟಿವಿಯಲ್ಲಿ ಹೊಸದಾಗಿ ಸೀರಿಯಲ್‌ ಶುರುವಾಗಿತ್ತು. ಇವರಿಬ್ಬರು ಹುಬ್ಬಳ್ಳಿಯವರು. 2016 ರಂದು ‘ಮಹಾಸತಿ’ ಧಾರಾವಾಹಿ ಸೆಟ್‌ನಲ್ಲಿ ಇವರಿಬ್ಬರ ಭೇಟಿಯಾಗಿತ್ತು. ಆ ಧಾರಾವಾಹಿಯಲ್ಲಿ ವಿನಯ್‌ ಹೀರೋ ಆದರೆ, ಐಶ್ವರ್ಯಾ ಪೋಷಕ ಪಾತ್ರ ಮಾಡಿದರು. ಅಲ್ಲಿಂದ ಸ್ನೇಹ ಶುರುವಾಗಿತ್ತು.

45
ಕಿರುತೆರೆಯಲ್ಲಿ ಆಕ್ಟಿವ್

ಇಷ್ಟು ವರ್ಷಗಳಲ್ಲಿ ವಿನಯ್‌ ಯುಜೆ ಹಾಗೂ ಐಶ್ವರ್ಯಾ ಸಾಲೀಮಠ ಅವರು ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ಅವರು ಕಲರ್ಸ್‌ ಕನ್ನಡದ ‘ಅಗ್ನಿಸಾಕ್ಷಿ’, ಉದಯ ವಾಹಿನಿಯ ‘ಸೇವಂತಿ’, ‘ಸರಯೂ’, ಕಲರ್ಸ್‌ ಕನ್ನಡದ ‘ರಾಮಾಚಾರಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

55
‘ರಾಜಾ ರಾಣಿ’ ‌ಶೋ

ವಿನಯ್‌ ಯುಜೆ ಹಾಗೂ ಐಶ್ವರ್ಯಾ ಸಾಲೀಮಠ ಅವರು ‘ರಾಜಾ ರಾಣಿ’ ಎನ್ನುವ ಕಪಲ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಈಗ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗಂಡೋ? ಹೆಣ್ಣೋ ಅಥವಾ ಎರಡು ಗಂಡೋ? ಹೆಣ್ಣೋ ಎಂದು ಮಾಹಿತಿ ನೀಡಿಲ್ಲ.

Read more Photos on
click me!

Recommended Stories