ಕಿರುತೆರೆಯ ಹ್ಯಾಂಡ್ಸಮ್, ಮಲ್ಟಿ ಟ್ಯಾಲೆಂಟೆಡ್ ರಾಮಾಚಾರಿ ನಿರ್ದೇಶನಕ್ಕೂ ಸೈ, ಹಾಡು, ಡ್ಯಾನ್ಸಿಂಗ್‌ಗೂ ಸೈ

Published : Jun 08, 2023, 03:35 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ರಾಮಚಾರಿ ಪಾತ್ರದಲ್ಲಿ ನಟಿಸುತ್ತಿರುವ ನಟ ರಿತ್ವಿಕ್ ಕೃಪಾಕರ್ ಅವರ ರಿಯಲ್ ಲೈಫ್ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. 

PREV
111
ಕಿರುತೆರೆಯ ಹ್ಯಾಂಡ್ಸಮ್, ಮಲ್ಟಿ ಟ್ಯಾಲೆಂಟೆಡ್ ರಾಮಾಚಾರಿ ನಿರ್ದೇಶನಕ್ಕೂ ಸೈ, ಹಾಡು, ಡ್ಯಾನ್ಸಿಂಗ್‌ಗೂ ಸೈ

ರಾಮಾಚಾರಿ ಸೀರಿಯಲ್ ನಲ್ಲಿ ಅಪ್ಪ, ಅಮ್ಮನ ಮಾತನ್ನು ಮೀರದ ಮುದ್ದಿನ ಮಗ, ತಂಗಿಯ ಪ್ರೀತಿಯ ಅಣ್ಣನಾಗಿ, ಸದಾ ನಗು ನಗುತ್ತಿರುವ ರಾಮಾಚಾರಿ ಪಾತ್ರದಲ್ಲಿ ನಟಿಸುತ್ತಿರುವ ನಟ ರಿತ್ವಿಕ್ ಕೃಪಾಕರ್  (Rithvik Krupakar).

211

ಸೀರಿಯಲ್ ನೋಡುವ ಪ್ರೇಕ್ಷಕರಲ್ಲಿ ಹಿರಿಯರಿಗೆ ನಮಗೂ ರಾಮಚಾರಿಯಂತಹ ಮಗ ಬೇಕು ಎನ್ನುವಂತಹ ಉತ್ತಮ ಗುಣದ ಹುಡುಗ ಇವನು, ಜೊತೆಗೆ ಹುಡುಗಿಯರ ಪಾಲಿನ ಸದ್ಯದ ಹಾಟ್ ಫೆವರಿಟ್ ಕಿರುತೆರೆ ನಟ ಅಂದ್ರೆ ಅದು ರಾಮಾಚಾರಿ ಆಲಿಯಾಸ್ ರಿತ್ವಿಕ್. 

311

ಮೈಸೂರಿನಲ್ಲಿ ಹುಟ್ಟಿ ಬೆಳೆದ ರಿತ್ವಿಕ್ ಕೃಪಾಕರ್ ಅವರ ತಂದೆ ಪ್ರವೀಣ್ ಕೃಪಾಕರ್ ಮತ್ತು ತಾಯಿ ಹೇಮಮಾಲಿನಿ ಕೃಪಾಕರ್. ಕಳೆದ ಏಳು ವರ್ಷಗಳಿಂದ ಇವರು ತಮ್ಮನ್ನು ತಾವು ನಟನೆಯಲ್ಲಿ, ಡ್ಯಾನ್ಸ್ ನಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. 

411

ಇವರು ಥಿಯೇಟರ್ ಆರ್ಟಿಸ್ಟ್ ಆಗಿ ಮೈಸೂರಿನ ನಟನಾ ರಂಗಶಾಲೆಯಿಂದ  ತಮ್ಮ ಕರಿಯರ್ ನ್ನು ಆರಂಭಿಸಿದರು. ಇವರು ಇಲ್ಲಿವರೆಗೆ ಸುಮಾರು 200 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರಮಾಡಿದ್ದು, ಅದ್ಭುತವಾಗಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. 

511

ರಿತ್ವಿಕ್ ರಾಯಲ್ ಮಸ್ಟಾಂಗ್ ಪ್ರೊಡಕ್ಷನ್ಸ್ ಎಂಬ ಪ್ರೊಡಕ್ಷನ್ ಹೌಸ್ನ ಮಾಲೀಕರಾಗಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಮೂಲತಃ ಚಲನಚಿತ್ರಗಳು, ಕಲಾತ್ಮಕ ಚಲನಚಿತ್ರಗಳು, ಕಿರು ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಸಂದರ್ಶನಗಳು, ಮುಂತಾದ ಹೊಸ ಮತ್ತು ಸೃಜನಶೀಲ ಸಿನೆಮಾ ಸಂಬಂಧಿತ ವಿಷಯಗಳ ನಿರ್ಮಾಣದ ಗುರಿ ಹೊಂದಿದೆ. 
 

611

ಫಿಟ್ನೆಸ್ (fitness)ಬಗ್ಗೆ ತುಂಬಾನೆ ಕಾಳಜಿ ವಹಿಸುವ ರಿತ್ವಿಕ್ ಕೃಪಾಕರ್ ಜಿಮ್ ಮಾಡೋದನ್ನು ಮಾತ್ರ ಮಿಸ್ ಮಾಡಲ್ಲ. ಹಿಂದೆ 125 ಕೆಜಿ ಇದ್ರಂತೆ, ಫ್ರೆಂಡ್ಸ್ ಎಲ್ಲಾ ಡುಮ್ಮ ಎಂದು ತುಂಬಾನೆ ತಮಾಷೆ ಮಾಡ್ತಿದ್ರಂತೆ, ಹಾಗಾಗಿ ಜಿಮ್, ಆಹಾರದ ಬಗ್ಗೆ ಕಾಳಜಿ ವಹಿಸಿ, ಈಗ 85 ಕೆಜಿ ಗೆ ಇಳಿದಿದ್ದಾರೆ ರಿತ್ವಿಕ್

711

ಸೀರಿಯಲ್ ನಲ್ಲಿ ಪೂಜೆ ಪುರಸ್ಕಾರ ಎಂದು ಅದರಲ್ಲಿ ಮುಳುಗಿರುವ ರಿತ್ವಿಕ್, ಫೈಟಿಂಗ್ ಕೂಡ ಚೆನ್ನಾಗಿಯೇ ಮಾಡುತ್ತಾರೆ. ಯಾಕಂದ್ರೆ ಮಾರ್ಷಲ್ ಆರ್ಟ್ ಕಲಿತುಕೊಂಡಿರುವ ಇವರು ವುಶು, ಬಾಕ್ಸಿಂಗ್, ಕಿಕ್ ಬಾಕ್ಸಿಂಗ್ ನಲ್ಲಿ ತರಭೇತಿಯನ್ನು ಸಹ ಪಡೆದಿರುತ್ತಾರೆ. 

811

ನಟನೆ ಅಲ್ಲದೇ ಡ್ಯಾನ್ಸ್ ಕೂಡ ಕಲಿತಿರುವ ರಿತ್ವಿಕ್, ಸಖತ್ತಾಗಿ ಡ್ಯಾನ್ಸ್ ಮಾಡುತ್ತಾರೆ. ಹಿಪ್ ಹಾಪ್, ಬಿ ಬಾಯಿಂಗ್, ಕಂಟೆಂಪರರಿ, ಲಾಕಿಂಗ್, ಪಾಪಿಂಗ್, ರೊಬೋಟಿಂಗ್, ಇಂಡಿಯನ್ ಸ್ಟೈಲ್ ಬಾಲಿವುಡ್ ಸ್ಟೈಲ್ ಮೊದಲಾದ ಡ್ಯಾನ್ಸ್ ಫಾರ್ಮ್ ಮಾಡುವುದರಲ್ಲಿ ಎತ್ತಿದ ಕೈ.

911

ಇಷ್ಟೇ ಅಲ್ಲ, ಇವರು ಹಾಡು ಕೂಡ ಹಾಡುತ್ತಾರೆ ಅನ್ನೋದು ಗೊತ್ತಾ? ಜೊತೆಗೆ ಮ್ಯೂಸಿಕ್ ಕಂಪೋಸ್ ಕೂಡ ಮಾಡುತ್ತಾರೆ. ಅಷ್ಟೇ ಅಲ್ಲ ಪಿಯಾನೋ, ಗಿಟಾರ್, ಹಾರ್ಮೋನಿಯಂ ಜೊತೆಗೆ ಕೊಳಲನ್ನು ಸಹ ಇವರು ನುಡಿಸುತ್ತಾರೆ. ಒಟ್ಟಲ್ಲಿ ಹೇಳಬೇಕೆಂದರೆ ಇವರೊಬ್ಬ ಮಲ್ಟಿ ಟ್ಯಾಲೆಂಟೆಡ್ ಹುಡುಗ. 

1011

ಇನ್ನು ಪ್ರಾಣಿಗಳೆಂದರೆ ರಿತ್ವಿಕ್ ಗೆ ಎಲ್ಲಿಲ್ಲದ ಪ್ರೀತಿ, ಇವರ ಸೋಶಿಯಲ್ ಮೀಡೀಯಾ ಪ್ರೊಫೈಲ್ ನೋಡಿದ್ರೆ ಅಲ್ಲಿ ಬೆಕ್ಕು, ನಾಯಿ ಜೊತೆಗೆ ತೆಗೆದೆ ವಿವಿಧ ಫೋಟೋಗಳನ್ನು ಸಹ ನೀವು ನೋಡಬಹುದು. 

1111

ಇನ್ನು ರಿತ್ವಿಕ್ ತಂದೆ ಪ್ರವೀಣ್ ಕೃಪಾಕರ್, ಇವರು ಕೂಡ ಚಿತ್ರ ನಿರ್ದೇಶಕರಾಗಿದ್ದು, ಇವರ ನಿರ್ದೇಶನ ಮತ್ತು ನಿರ್ಮಾಣದ ಸಂಚಾರಿ ವಿಜಯ್ ನಟನೆಯ ತಲೆದಂಡ ಚಿತ್ರಕ್ಕೆ ಕಳೆದ ವರ್ಷ ರಾಷ್ಟ್ರಪ್ರಶಸ್ತಿ ಲಭಿಸಿತ್ತು. 

click me!

Recommended Stories