ನಟಿ ಶರ್ಮಿತಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನೆಗೆಟಿವ್ ಪಾತ್ರಗಳ ಮೂಲಕವೇ ಖ್ಯಾತಿಗಳಿಸಿರುವ ಶರ್ಮಿತಾ 'ಮನೆಯೇ ಮಂತ್ರಾಲಯ', 'ನೀಲಾ', 'ಯಾರಿವಳು' ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸದ್ಯ ಕನ್ನಡದ 'ಗೀತಾ' ಧಾರಾವಾಹಿ ಜೊತೆಗೆ ತೆಲುಗಿನ 'ಬ್ರಹ್ಮ ಮುಡಿ' ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.