ನಾನು ಮತ್ತು ಶ್ರಾವಣಿಯ ಸ್ಕಂದ ಅಶೋಕ್ ಮುದ್ದಾದ ಫ್ಯಾಮಿಲಿ ಇದು!

Published : Aug 30, 2023, 11:53 AM IST

ರಾಧಾ ರಮಣ ಸೀರಿಯಲ್ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟ ಸ್ಕಂದ ಅಶೋಕ್ ಅವರ ಮುದ್ದಾದ ಫ್ಯಾಮಿಲಿ ಹೇಗಿದೆ ಗೊತ್ತಾ? ಹೊಸ ಸೀರಿಯಲ್ ನಾನು ಮತ್ತು ಶ್ರಾವಣಿ ಮೂಲಕ ಮತ್ತೆ ಸಂಚಲನ ಮೂಡಿಸಲು ರೆಡಿಯಾಗಿರುವ ಸ್ಕಂದ ಅಶೋಕ್ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ.   

PREV
17
 ನಾನು ಮತ್ತು ಶ್ರಾವಣಿಯ ಸ್ಕಂದ ಅಶೋಕ್ ಮುದ್ದಾದ ಫ್ಯಾಮಿಲಿ ಇದು!

‘ರಾಧಾ ರಮಣ’ (Radha Ramana) ಸಿರಿಯಲ್‌ನಲ್ಲಿ ರಮಣ್ ಪಾತ್ರದಲ್ಲಿ ಮಿಂಚಿದ ಸ್ಕಂದ ಅಶೋಕ್ (Skanda Ashok) ಆ ಸೀರಿಯಲ್‌ನಲ್ಲಿ ಅಪ್ಪಟ ಬ್ಯುಸಿನೆಸ್ ಮ್ಯಾನ್ ಆಗಿ ಮತ್ತು ರಾಧಾ ಮಿಸ್ ಗಂಡನಾಗಿ ಜನರ ಮನಸೂರೆ ಮಾಡಿದ್ದರು. 
 

27

ಇದೀಗ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನಿಂಗ್ಸ್ (second innings) ಶುರು ಮಾಡಿರುವ ಸ್ಕಂದ ಅಶೋಕ್ ‘ಅವನು ಮತ್ತು ಶ್ರಾವಣಿ’ ಎಂಬ ಸೀರಿಯಲ್‌ನಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಜನರಿಗೂ ಇಷ್ಟವಾಗಿದೆ. 
 

37

ಕಿರುತೆರೆ, ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ನಟ ಸ್ಕಂದ ಅಶೋಕ್ (Skanda Ashok), ತಮಿಳು, ಮಲಯಾಲಂ ಚಿತ್ರಗಳಲ್ಲೂ ಮಿಂಚಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ‘ಸರಸು’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವನು ಮತ್ತು ಶ್ರಾವಣಿ ಸೀರಿಯಲ್ ಮೂಲಕ ಅಭಿಮನ್ಯು ಆಗಿ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ.  
 

47

ಸ್ಕಂದ ಅಶೋಕ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋದಾದ್ರೆ ಇವರು 2018 ರಲ್ಲಿ ಶಿಖಾ ಪ್ರಸಾದ್ ಅವರನ್ನು ಮದ್ವೆಯಾಗಿದ್ದರು. ಈ ಮುದ್ದಾದ ದಂಪತಿಗೆ ಒಂದು ಮುದ್ದಾದ ಮಗು ಕೂಡ ಇದೆ. ತಮ್ಮ ಮಗು ಮತ್ತು ಫ್ಯಾಮಿಲಿ ಫೋಟೋವನ್ನು ಸ್ಕಂದ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ (Social media) ಶೇರ್ ಮಾಡುತ್ತಿರುತ್ತಾರೆ
 

57

ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಶಿಕಾ ಅವರನ್ನು ಸ್ಕಂದ ಮದುವೆಗೂ ಮುನ್ನ ನಾಲ್ಕೂವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದರಂತೆ. ಇದೀಗ ಮದುವೆಯಾಗಿ ಐದು ವರ್ಷ ಕಳೆದಿದ್ದು, ಈ ಮುದ್ದಾದ ಜೋಡಿಯನ್ನು ಜನ ತುಂಬಾನೆ ಇಷ್ಟಪಟ್ಟಿದ್ದಾರೆ. 
 

67

ಮಗಳ ಜೊತೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುವ ಸ್ಕಂದ ಅಶೋಕ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗಳ ಜೊತೆಗೆ ಎಂಜಾಯ್ ಮಾಡುತ್ತಿರುವ ಹಲವಾರು ಫೋಟೊ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

77

ಇನ್ನು ಕಳೆದ ವರ್ಷವಷ್ಟೇ ಸ್ಕಂದ ಅಶೋಕ್, ಭವ್ಯವಾದ ಮನೆ ನಿರ್ಮಿಸಿ, ಅದ್ಧೂರಿಯಾಗಿ ಗೃಹಪ್ರವೇಶ ಮಾಡಿಸಿದ್ದರು. ಇನ್ನು ತಮ್ಮ ಸಂಗಾತಿ ಶಿಖಾ ಜೊತೆಗೆ ಸ್ಕಂದ ಹೆಚ್ಚಾಗಿ ವಲ್ರ್ಡ್ ಟೂರ್ ಮಾಡುತ್ತಿದ್ದು, ಆ ಫೋಟೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
 

Read more Photos on
click me!

Recommended Stories