ತರುಣ್ ಸುಧೀರ್ ಹೊಸ ಸಿನಿಮಾ ಹೀರೋಯಿನ್ ಸಖತ್ ಕ್ಯೂಟ್... ಏನಂತೀರಾ?

Published : Feb 19, 2025, 11:05 AM ISTUpdated : Feb 19, 2025, 11:35 AM IST

ತರುಣ್ ಸುಧೀರ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಏಳುಮಲೆ ಮಡಿಲಲ್ಲಿ ಎದೆನಡುಗಿಸಿದ ಪ್ರೇಮಕಥೆಗೆ ನಾಯಕಿಯಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಆಚಾರ್ ಸಖತ್ ಕ್ಯೂಟ್ ಆಗಿದ್ದಾರೆ.   

PREV
19
ತರುಣ್ ಸುಧೀರ್ ಹೊಸ ಸಿನಿಮಾ ಹೀರೋಯಿನ್ ಸಖತ್ ಕ್ಯೂಟ್... ಏನಂತೀರಾ?

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದ ಶೋ ಮಹಾನಟಿ. ಮೊದಲ ಸೀಸನ್ ಗೆ ಜನರಿಂದಾ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. 
 

29

ಮೊದಲ ಸೀಸನ್ ನಲ್ಲಿ ತನ್ನ ಅದ್ಭುತ ಅಭಿನಯ, ಸೌಂದರ್ಯ, ಮಾತು, ನಗು, ನೃತ್ಯದ ಮೂಲಕ ಮೋಡಿ ಮಾಡಿ ಮಹಾನಟಿ ಕಿರೀಟ ಮುಡಿಗೇರಿಸಿಕೊಂಡ ಸ್ಪರ್ಧಿ ಪ್ರಿಯಾಂಕಾ ಆಚಾರ್. 
 

39

ಇದೀಗ ಪ್ರಿಯಾಂಕಾ ಆಚಾರ್ ( Priyanka Achar) ತಮ್ಮ ಚೊಚ್ಚಲ ಸಿನಿಮಾದಲ್ಲಿ ನಟಿಸುವ ತಯಾರಿಯಲ್ಲಿದ್ದಾರೆ. ಆ ಮೂಲಕ ಚಂದನವನಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. 
 

49

ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ತರುಣ್ ಸುಧೀರ್ ನಿರ್ಮಾಣ ಮಾಡುತ್ತಿರುವ ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮ ಕಥೆ ಎನ್ನುವ ಸಬ್ ಟೈಟಲ್ ಹೊಂದಿರುವ ಪ್ರೊಡಕ್ಷನ್ ನಂ 2 ಸಿನಿಮಾಗೆ ನಾಯಕಿಯಾಗಿ ಮಹಾನಟಿ ಪ್ರಿಯಾಂಕ ಆಚಾರ್ (Priyanka Achar) ಆಯ್ಕೆಯಾಗಿದ್ದಾರೆ. 
 

59

ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮ ಕಥೆ ಸಿನಿಮಾಕ್ಕೆ ನಾಯಕನಾಗಿ ಕನ್ನಡ ಚಿತ್ರರಂಗದ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಆಯ್ಕೆಯಾಗಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. 
 

69

ಪುನೀತ್ ರಂಗಸ್ವಾಮಿ (Punith Rangaswamy) ನಿರ್ದೇಶನದ ಈ ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮ ಕಥೆ ಕನ್ನಡ, ತಮಿಳು ಮತ್ತು ತೆಲುಗಿನಲ್ಲೂ ಸಹ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದು, ತರುಣ್ ಸುಧೀರ್ ಹಾಗೂ ಅಟ್ಲಾಂಟ ನಾಗರಾಜ್ ನಿರ್ಮಾಣದ ಮಾಡ್ತಿದ್ದಾರೆ. 
 

79

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರಿಯಾಂಕಾ ಆಚಾರ್ ತಮ್ಮ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ನಟಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. 
 

89

ತಿಳಿ ಹಸಿರು ಬಣ್ಣದ ಫ್ಲೋರಲ್ ಸೀರೆಯುಟ್ಟಿರುವ ಪ್ರಿಯಾಂಕ, ಅದಕ್ಕೆ ಕಪ್ಪು ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ರು, ಜೊತೆಗೆ ಓಪನ್ ಹೇರ್ ಬಿಟ್ಕೊಂಡು, ಕೈಯಲ್ಲಿ ಹೂವು ಹಿಡಿದು ಪೋಸ್ ಕೊಟ್ಟಿದ್ದಾರೆ. 
 

99

ಪ್ರಿಯಾಂಕ ಅಂದವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಮುದ್ದು ಚೆಲುವೆ, ಬ್ಯೂಟಿ. ಕ್ಯೂಟಿ, ಎಂದು ಕಾಮೆಂಟ್ ಮಾಡುವ ಮೂಲಕ ಪ್ರಿಯಾಂಕ ಅಂದವನ್ನು ಹೊಗಳಿದ್ದಾರೆ. 
 

click me!

Recommended Stories