ಸೃಜನ್ ಲೋಕೇಶ್ (Srujan Lokesh)
ಜನಪ್ರಿಯ ನಾಯಕ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಪುತ್ರ ಸೃಜನ್ ಕನ್ನಡ ಕಿರುತೆರೆಯ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದಾರೆ. 'ಆನೆ ಪಟಾಕಿ', 'ಸಪ್ನೋ ಕಿ ರಾನಿ', ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರೂ, ರಾಜಾ ರಾಣಿ, ನನ್ನಮ್ಮ ಸೂಪರ್ಸ್ಟಾರ್ ಮುಂತಾದ ವಿವಿಧ ಕಾರ್ಯಕ್ರಮಗಳ ಜಡ್ಜ್ ಆಗಿದ್ರೂ ಸಹ, ಇವರು ತಮ್ಮ ನಿರೂಪಣೆಯಿಂದಾನೇ ಫೇಮಸ್ ಆದ್ರು.
ಅಕುಲ್ ಬಾಲಾಜಿ (Akul Balaji)
ತಮ್ಮ ಕರಿಯರ್ ನ ಆರಂಭಿಕ ದಿನಗಳಲ್ಲಿ, ಅಕುಲ್ 'ಆತ್ಮಿಯಾ' ಎಂಬ ಚಲನಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಮಿಲನಾ, ಕ್ರೇಜಿಸ್ಟಾರ್ ಇನ್ನೂ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ರೂ ಸಹ ಅವರು ಹೆಚ್ಚು ಜನಪ್ರಿಯತೆ ಪಡೆದದ್ದು ಮಾತ್ರ ನಿರೂಪಕರಾಗಿ. ಕನ್ನಡ ಮತ್ತು ತೆಲುಗು ಕಿರುತೆರೆಯ ಬಹುಬೇಡೀಕೆಯ ನಿರೂಪಕ ಇವರು.
ಅನುಶ್ರೀ (Anushree)
ಕನ್ನಡದ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಒಬ್ಬರು ಅನುಶ್ರೀ ಎನ್ನಲಾಗುತ್ತೆ. ಅದು ಈವೆಂಟ್ ಆಗಿರಲಿ ಅಥವಾ ರಿಯಾಲಿಟಿ ಶೋ ಆಗಿರಲಿ, ಅನುಶ್ರೀ ಇದ್ರೆ, ಆ ಕಾರ್ಯಕ್ರಮಗಳಿಗೊಂದು ಕಳೆ ಎಂದೇ ಹೇಳಬಹುದು. ಆದರೆ ಅವರು 'ರಿಂಗ್ ಮಾಸ್ಟರ್', ಮತ್ತು 'ಉಪ್ಪು ಹುಳಿ ಖಾರ' ಚಿತ್ರಗಳಲ್ಲಿ ನಟಿಸಿ ಸೋತಿದ್ದರು.
ಅನುಪಮಾ ಗೌಡ (Anupama Gowda )
ಅನುಪಮಾ ಅವರು ತಮ್ಮ ನಟನಾ ಕೌಶಲ್ಯದ ಹೊರತಾಗಿ, ಕನ್ನಡ ಟೆಲಿವಿಶನ್ ನಲ್ಲಿ ನಿರೂಪಕರಾಗಿಯೂ ಯಶಸ್ವಿಯಾಗಿದ್ದಾರೆ. ರಿಯಾಲಿಟಿ ಶೋ ಜೊತೆಗೆ ನಟನೆಯಲ್ಲೂ ಸಹ ಇವರು ಸೈ ಎನಿಸಿಕೊಂಡಿದ್ದಾರೆ.
ಮಾಸ್ಟರ್ ಆನಂದ್ (Master Anand)
ಆನಂದ್ ಒಂದು ಕಾಲದಲ್ಲಿ ಬಾಲ ಕಲಾವಿದನಾಗಿ ಕನ್ನಡ ಚಿತ್ರರಂಗವನ್ನು ಆಳಿದರು. ಅವರು ಅತ್ಯಂತ ಜನಪ್ರಿಯ ಬಾಲ ಕಲಾವಿದರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ನಿರ್ದೇಶಕ ಮತ್ತು ನಿರೂಪಕರಾಗಿ ಇವರು ಯಶಸ್ವಿಯಾಗಿದ್ದಾರೆ. ಇವರು ಜನಪ್ರಿಯ ರಿಯಾಲಿಟಿ ಶೋಗಳಾದ 'ಕಾಮಿಡಿ ಕಿಲಾಡಿಗಳು' ಮತ್ತು 'ಡ್ರಾಮಾ ಜೂನಿಯರ್ಸ್' ನಿರೂಪಕರಾಗಿದ್ದಾರೆ.
ಜಾಹ್ನವಿ ರಾಯಲ (Janvi Rayala)
ವೃತ್ತಿಯಲ್ಲಿ ದಂತವೈದ್ಯರಾಗಿದ್ದ ಜಾಹ್ನವಿ ನಟನೆಯ ಬಗ್ಗೆ ಒಲವು ಹೊಂದಿದ್ದರು. ಹಾಗಾಗಿಯೇ ಕಾನೂರಾಯಣ, 6ನೆ ಮೈಲ್, ಉರ್ವಿ ಮತ್ತು ಇತರ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ದಂಪತಿ ಆಧಾರಿತ ರಿಯಾಲಿಟಿ ಶೋ ರಾಜಾ ರಾಣಿಯ ಎರಡನೇ ಸೀಸನ್ ಅನ್ನು ಹೋಸ್ಟ್ ಮಾಡಿದಾಗಲೇ ಇವರು ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದ್ದು.
ಶಾಲಿನಿ (Shalini Sathyanarayan)
ಚಲನಚಿತ್ರದಲ್ಲಿ ಪೋಷಕ ಪಾತ್ರವಾಗಲಿ ಅಥವಾ ಪಾಪಾ ಪಾಂಡು ಐಕಾನಿಕ್ ಶೋನಲ್ಲಿ ಪ್ರಮುಖ ಪಾತ್ರದಲ್ಲಿರಲಿ ಅಥವಾ ರಿಯಾಲಿಟಿ ಶೋ ನಡೆಸಿಕೊಡುವುದಿರಲಿ, ಶಾಲಿನಿ ಕನ್ನಡ ಮನರಂಜನಾ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಿಯಾಲಿಟಿ ಗೇಮ್ ಶೋ ಸುವರ್ಣ ಸೂಪರ್ಸ್ಟಾರ್ ಅನ್ನು ಹೋಸ್ಟ್ ಮಾಡೋ ಮೂಲಕ ಇವರು ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.