ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ರಾಧಿಕಾ ರಾವ್

First Published | Jul 12, 2023, 9:39 PM IST

ಮಂಗಳೂರು (ಜು.12): ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ ಮತ್ತು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ರೇಟೆಡ್‌ ಧಾರಾವಾಹಿ 'ರಾಧಾ ಕಲ್ಯಾಣ' ಮುಖ್ಯ ಪಾತ್ರಧಾರಿ ಕಾಣಿಸಿಕೊಂಡಿದ್ದ ಕರಾವಳಿ ನಟಿ ರಾಧಿಕಾ ರಾವ್ ಅವರಿಗೆ ಮಗು ಜನಿಸಿದೆ.

ರಾಧಿಕಾ ಅವರು ಜುಲೈ 5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು  ಮಗುವಿಗೆ ಜನ್ಮ ನೀಡಿದ್ದಾರೆ.   ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಇವರು 2020, ಮಾರ್ಚ್‌ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಬಣ್ಣದ ಪ್ರಪಂಚದಿಂದ ಬ್ರೇಕ್ ತೆಗೆದುಕೊಂಡಿದ್ದರು. 

Tap to resize

 2019ರ ಮಾರ್ಚ್‌ನಲ್ಲಿ ಕಾಮನ್ ಫ್ರೆಂಡ್ ಮೂಲಕ ಇವರ ಗಂಡನ ಪರಿಚಯವಾಗಿತ್ತು. ಪರಿಚಯವಾದ 6 ತಿಂಗಳಿಗೆ ಆಕರ್ಷ್‌ ಡಿಫರೆಂಟ್ ಆಗಿ ಪ್ರಪೋಸ್ ಮಾಡಿದ್ದರು. ಓಕೆ ಹೇಳಿದ ರಾಧಿಕಾ ಅಕ್ಟೋಬರ್‌ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. 

ಧಾರವಾಹಿ ಮೂಲಕ ಕನ್ನಡದ ಜನಮನ ಗೆದ್ದ ನಟಿ ರಾಧಿಕಾ ರಾವ್  ಅವರ ಬದುಕನ್ನು ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ ಧಾರವಾಹಿ  ಬದಲಾಯಿಸಿತ್ತು. 

Latest Videos

click me!