ಮೈಮಾಟ ಪ್ರದರ್ಶಿಸುತ್ತಾ ಕಿಲ್ಲರ್ ಲುಕ್ ಕೊಟ್ಟ ಜ್ಯೋತಿ ರೈ, ಬೆಂಕಿ ಕಿಡಿ ಎಂದ ನೆಟ್ಟಿಗರು

First Published | Aug 22, 2024, 5:26 PM IST

ತಮ್ಮ ಬೋಲ್ಡ್ ಫೋಟೊಗಳಿಂದಲೇ ಸುದ್ದಿಯಲ್ಲಿರೋ ನಟಿ ಜ್ಯೋತಿ ರೈ ಇದೀಗ ಮತ್ತೊಮ್ಮೆ ತಮ್ಮ ಮೈಮಾಟ ಪ್ರದರ್ಶಿಸುತ್ತಾ, ಪೋಸ್ ಕೊಟ್ಟಿದ್ದಾರೆ. 
 

ಮೊನ್ನೆಯಷ್ಟೆ ವರಮಹಾಲಕ್ಷ್ಮೀ ಹಬ್ಬದ ದಿನ ಲಕ್ಷಣವಾಗಿ ಸೀರೆಯುಟ್ಟು ಪೋಸ್ ನೀಡಿ, ಜ್ಯೋತಿ ರೈ (Jyothi Rai) ಹೀಗಿದ್ರೇನೆ ನೋಡೋಕೆ ಚೆಂದ ಕಾಣೋದು ಎಂದಿದ್ರು ಜನ, ಇದೀಗ ನಾಲ್ಕು ದಿನಗಳಲ್ಲಿ ಮತ್ತೆ ತಮ್ಮ ಹಾಟ್ ಲುಕ್ ತೋರಿಸಿದ್ದಾರೆ ನಟಿ. 
 

ಹೌದು, ತಮ್ಮ ಬೋಲ್ಡ್ ಫೋಟೊಗಳಿಂದಲೇ (Bold Photo) ಸದಾ ಸುದ್ದಿಯಲ್ಲಿರುವ ನಟಿ ಜ್ಯೋತಿ ಪೂರ್ವಜ್, ಇದೀಗ ಮತ್ತೊಂದು ತುಂಬಾನೆ ಬೋಲ್ಡ್ ಆಗಿರುವ ಡ್ರೆಸ್ ಧರಿಸಿ, ತಮ್ಮ ಮೈಮಾಟ ಪ್ರದರ್ಶಿಸುತ್ತಾ, ಕಣ್ಣಲ್ಲೇ ಕೊಲ್ಲುವಂತೆ ಪೋಸ್ ಕೊಟ್ಟಿದ್ದು, ಪಡ್ಡೆಗಳ ಹೃದಯ ಝಲ್ ಎಂದಿದೆ. 
 

Tap to resize

ಕನ್ನಡ ಕಿರುತೆರೆಯಲ್ಲಿ ಮಿಂಚಿದ ಜ್ಯೋತಿ, ಸ್ಯಾಂಡಲ್ ವುಡ್ ನಲ್ಲೂ(Sandalwood) ನಟಿಸಿದರು. ಯಾವಾಗ ಟಾಲಿವುಡ್ ಗೆ ಎಂಟ್ರಿ ಕೊಟ್ರೋ, ಅವತ್ತಿಂದ ನಟಿಯ ಲುಕ್ ಪೂರ್ತಿಯಾಗಿ ಬದಲಾಗಿದೆ. ಇತ್ತೀಚೆಗಂತೂ ತಮ್ಮ ಸಿನಿಮಾಗಳಿಗಿಂತ ಖಾಸಗಿ ವಿಚಾರಗಳಿಂದಲೇ ಸುದ್ದಿಯಲ್ಲಿರ್ತಾರೆ ನಟಿ. 
 

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಜ್ಯೋತಿ, ತಮ್ಮ ಬೋಲ್ಡ್ ಫೋಟೊಗಳನ್ನ ಹಂಚಿಕೊಳ್ಳುತ್ತಲೇ ಇರ್ತಾರೆ. ಇದೀಗ ತಮ್ಮ ಹೊಸ ಬೋಲ್ಡ್, ಹಾಟ್ ಫೋಟೊ ಗಳನ್ನ ಹಂಚಿಕೊಂಡಿದ್ದು Shimmers of grace ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. 
 

ಗೋಲ್ಡನ್ ಬಣ್ಣದ, ಬ್ಯಾಕ್ ಲೆಸ್ ಶಿಮ್ಮರ್ ಮಿನಿ ಡ್ರೆಸ್ ಧರಿಸಿರುವ ಜ್ಯೋತಿ ರೈ, ತಮ್ಮ ಎದೆ ಮೇಲಿನ ಟ್ಯಾಟೂ ಕಾಣುವಂತೆ ಸಖತ್ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಮಾದಕ ಕಣ್ಣುಗಳಿಂದ ಕೊಲ್ಲುವಂತಹ ಲುಕ್ ನೀಡಿದ್ದು, ಅಭಿಮಾನಿಗಳು ಇದನ್ನ ಮೆಚ್ಚಿಕೊಂಡಿದ್ದಾರೆ. 
 

ನಟಿಯ ಫೋಟೊಗಳಿಗೆ ಅಪಾರ ಮೆಚ್ಚುಗೆ ಹರಿದು ಬಂದಿದ್ದು, ಮುಖ ತುಂಬಾನೆ ಕ್ಯೂಟ್, ಬಾಡಿ ತುಂಬಾನೆ ಹಾಟ್, ಬ್ಯೂಟಿಯ ಇನ್ನೊಂದು ಅರ್ಥ ನೀವು, ಅಂದದ ರಾಕ್ಷಸಿ, ಬ್ಯೂಟಿ, ಸೆಕ್ಸಿ, ಕಣ್ಣಲ್ಲೆ ಕೊಲ್ಲುತ್ತಿದ್ದೀರಿ, ಬೆಂಕಿ ಕಿಡಿ ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. 
 

Latest Videos

click me!