ಚುಮು ಚುಮು ಚಳಿಯಲ್ಲಿ ಫ್ಯಾಮಿಲಿ ಜೊತೆ ಮನಾಲಿ ಟೂರ್ ಮಾಡ್ತಿದ್ದಾರೆ Mokshitha Pai

First Published | Jan 26, 2024, 3:46 PM IST

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಸೀರಿಯಲ್ ನಟಿ ಮೋಕ್ಷಿತಾ ಪೈ ಫ್ಯಾಮಿಲಿ ಜೊತೆ ಉತ್ತರ ಭಾರತ ಟೂರ್ ಮಾಡುತ್ತಿದ್ದು, ಸಖತ್ ಎಂಜಾಯ್ ಮಾಡ್ತಿದ್ದಾರೆ. 
 

ಝೀ ಕನ್ನಡದಲ್ಲಿನ ಜನಪ್ರಿಯ ಪಾರು ಧಾರಾವಾಹಿಯಲ್ಲಿ ಪಾರು ಪಾತ್ರದ ಮೂಲಕ ಜನಮನ ಗೆದ್ದ ನಟಿ ಮೋಕ್ಷಿತಾ ಪೈ (Mokshitha Pai) ತಮ್ಮ ಫ್ಯಾಮಿಲಿ ಜೊತೆ ಉತ್ತರ ಭಾರತದಲ್ಲಿ ಪ್ರವಾಸ ಮಾಡಿ ಎಂಜಾಯ್ ಮಾಡ್ತಿದ್ದಾರೆ. 
 

ಮೋಕ್ಷಿತಾ ತಮ್ಮ ತಾಯಿ ಮತ್ತು ಫ್ಯಾಮಿಲಿ ಫ್ರೆಂಡ್ಸ್ (family friends)  ಜೊತೆ ಛಂಡೀಗಢ, ಮನಾಲಿ ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿ, ಸಖತ್ತಾಗಿ ಎಂಜಾಯ್ ಮಾಡಿದ್ದಾರೆ. 
 

Tap to resize

ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಮೋಕ್ಷಿತಾ ಹೆಚ್ಚಾಗಿ ತನ್ನ ರಿಯಲ್ ಫ್ಯಾಮಿಲಿ ಮತ್ತು ರೀಲ್ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ. 
 

ಇದೀಗ ಹಿಮಾಚಲ ಪ್ರದೇಶ, ಮನಾಲಿ, ಛಂಡೀಗಡದ ಸುಂದರ ಜಲಪಾತ, ಹಿಮ, ಕೋಟೆ, ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿ, ಸ್ನೋನಲ್ಲಿ ಆಟವಾಡ್ತಾ, ಯಾಚ್ ನಲ್ಲಿ ಸವಾರಿ ಮಾಡಿ ಎಂಜಾಯ್ ಮಾಡಿದ್ದಾರೆ. 
 

ಪೀಚ್ ಬಣ್ಣದ ಉಲ್ಲನ್ ಡ್ರೆಸ್ ಮೇಲೆ, ಬ್ಲ್ಯಾಕ್ ಓವರ್ ಕೋಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್, ಕೈಯಲ್ಲಿ ಗ್ಲೌಸ್, ಜೊತೆಗೆ ಕಣ್ಣಲ್ಲಿ ಗಾಗಲ್ಸ್ ಧರಿಸಿ, ತುಂಬಾನೆ ಮುದ್ದು ಮುದ್ದಾಗಿ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ಮೋಕ್ಷಿತಾ. 
 

ಹೆಚ್ಚಾಗಿ ತಮ್ಮ ತಾಯಿ ಜೊತೆಗೆ ಪ್ರವಾಸ ಮಾಡುವ ಮೋಕ್ಷಿತಾ, ಈ ಬಾರಿಯೂ ಉತ್ತರ ಭಾರತಕ್ಕೆ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಅಲ್ಲಿನ ಫ್ಯಾಮಿಲಿ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಪಾರು ಸುಂದರವಾದ ವಿಷಯಗಳಾದ ನೆನಪುಗಳು (Memoreis) ಮತ್ತು ಪ್ರತಿ ಕ್ಷಣಗಳು ಇವುಗಳನ್ನು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ನೀವದನ್ನ ಎಂಜಾಯ್ ಮಾಡದೇ ಇದ್ದರೆ, ಅದು ಕಳೆದು ಹೋಗುತ್ತೆ ಎಂದು ಬರೆದುಕೊಂಡಿದ್ದಾರೆ. 
 

ಇನ್ನು ಪಾರು ಸೀರಿಯಲ್ ವಿಷಯಕ್ಕೆ ಬಂದ್ರೆ ಕಥೆ ತುಂಬಾ ನಿಧಾನವಾಗಿ ಸಾಗುತ್ತಿದೆ ಎಂದು ಪ್ರೇಕ್ಷಕರು ಹೇಳ್ತಿದ್ದಾರೆ, ಮಗುವನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಪಾರು, ಆದಿ ಒದ್ದಾಟ, ಮಗುವನ್ನು ದೂರ ಕರೆದುಕೊಂಡು ಹೋಗಲು ಜನನಿ ಹೋರಾಟ ಇದೆ ಕತೆ ನಡೆಯುತ್ತಲೇ ಇದೆ. 
 

Latest Videos

click me!