Oscar Awards 2026: ಪ್ರತಿಷ್ಠಿತ ಆಸ್ಕರ್‌ ಅಂಗಳಕ್ಕಿಳಿದ ಭಾರತದ ಐದು ಸಿನಿಮಾಗಳು; ಕನ್ನಡದ್ದೆಷ್ಟು?

Published : Jan 09, 2026, 11:18 AM IST

Oscar Awards: ಆಸ್ಕರ್ ಅಂಗಳದಲ್ಲಿ ಹೊಂಬಾಳೆ ಫಿಲ್ಮ್ಸ್‌ ಅಬ್ಬರ: 'ಅತ್ಯುತ್ತಮ ಚಿತ್ರ' ವಿಭಾಗದ ಪಟ್ಟಿಯಲ್ಲಿ 'ಕಾಂತಾರ-1' ಮತ್ತು 'ಮಹಾವತಾರ ನರಸಿಂಹ' ಸಿನಿಮಾಗಳಿವೆ. ಹೌದು, ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
16
ಹೊಂಬಾಳೆ ಫಿಲ್ಮ್ಸ್ ಸಾಧನೆ

ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಜಾಗತಿಕ ವೇದಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 2025ರ ಸಾಲಿನ ಜಾಗತಿಕ ಹಿಟ್ ಚಿತ್ರಗಳಾದ 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ', ವಿಶ್ವದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್‌ನ 'ಅತ್ಯುತ್ತಮ ಚಿತ್ರ' (Best Picture) ಸೇರಿದಂತೆ ಪ್ರಮುಖ ವಿಭಾಗಗಳ ಸಾಮಾನ್ಯ ಪ್ರವೇಶ ಪಟ್ಟಿಯಲ್ಲಿ (General Entry List) ಅಧಿಕೃತವಾಗಿ ಸ್ಥಾನ ಪಡೆದಿವೆ.

26
ಅತ್ಯುತ್ತಮ ಚಿತ್ರ ವಿಭಾಗ

ಈ ಎರಡೂ ಚಿತ್ರಗಳು ಆಸ್ಕರ್‌ನ ಅತ್ಯಂತ ಪ್ರತಿಷ್ಠಿತ ವಿಭಾಗವಾದ 'ಅತ್ಯುತ್ತಮ ಚಿತ್ರ' (Best Picture) ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹತೆ ಪಡೆದಿವೆ. ಇದು ಹೊಂಬಾಳೆ ಫಿಲ್ಮ್ಸ್‌ ಕಥೆಗಳ ಶಕ್ತಿ ಮತ್ತು ಜಾಗತಿಕ ಗುಣಮಟ್ಟಕ್ಕೆ ಸಂದ ಗೌರವವಾಗಿದೆ.

36
ಅನಿಮೇಷನ್ ಲೋಕದ ಕ್ರಾಂತಿ

 'ಮಹಾವತಾರ ನರಸಿಂಹ' ಚಿತ್ರವು 'ಅತ್ಯುತ್ತಮ ಚಿತ್ರ' ಮಾತ್ರವಲ್ಲದೆ, 'ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್' ವಿಭಾಗದಲ್ಲೂ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಆ ಮೂಲಕ ಈ ವಿಭಾಗದಲ್ಲಿ ಆಯ್ಕೆಯಾದ ಭಾರತದ ಮೊದಲ ಅನಿಮೇಷನ್ ಚಿತ್ರ ಎಂಬ ಇತಿಹಾಸ ಬರೆದಿದೆ.

46
ಹೊಂಬಾಳೆ ಫಿಲ್ಮ್ಸ್‌ ಸಾಧನೆ

ಈ ವರ್ಷ ಆಸ್ಕರ್‌ನ ಸಾಮಾನ್ಯ ಪಟ್ಟಿಯಲ್ಲಿರುವ ಭಾರತದ ಕೇವಲ ಐದು ಚಿತ್ರಗಳ ಪೈಕಿ ಎರಡು ಚಿತ್ರಗಳು ಹೊಂಬಾಳೆ ಸಂಸ್ಥೆಯದ್ದಾಗಿರುವುದು ಗಮನಾರ್ಹ.

56
ಸಂಚಲನ ಮೂಡಿಸಿದ ಸಿನಿಮಾ

ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ತನ್ನ ಸಾಂಸ್ಕೃತಿಕ ಬೇರುಗಳ ಮೂಲಕ ಜಗತ್ತನ್ನು ಸೆಳೆದಿದ್ದರೆ, ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ ನರಸಿಂಹ' ತನ್ನ ದೃಶ್ಯ ವೈಭವದ ಮೂಲಕ ಹೊಸ ಸಂಚಲನ ಮೂಡಿಸಿದೆ. ಈ ಎರಡೂ ಚಿತ್ರಗಳು ಈಗ ಆಸ್ಕರ್‌ನ ಪ್ರಮುಖ ವಿಭಾಗಗಳಾದ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಛಾಯಾಗ್ರಹಣ ಮತ್ತು ಚಿತ್ರಕಥೆ ವಿಭಾಗಗಳಲ್ಲೂ ಸ್ಪರ್ಧೆಗೆ ಇಳಿಯಲಿವೆ.

ಭಾರತೀಯ ಕಥೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಗರಿಷ್ಠ ಗುಣಮಟ್ಟದೊಂದಿಗೆ ಕೊಂಡೊಯ್ಯುತ್ತಿರುವ ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ಗೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.

66
ಭಾರತದಿಂದ ಆಯ್ಕೆಯಾದ ಸಿನಿಮಾಗಳು

1. ಕಾಂತಾರ: ಎ ಲೆಜೆಂಡ್ - ಅಧ್ಯಾಯ 1

2. ಮಹಾವತಾರ ನರಸಿಂಹ

3. ತನ್ವಿ ದಿ ಗ್ರೇಟ್

4. ಸಿಸ್ಟರ್ ಮಿಡ್‌ನೈಟ್ (ಭಾರತೀಯ ನೇತೃತ್ವದ ಅಂತರರಾಷ್ಟ್ರೀಯ ನಿರ್ಮಾಣ)

5. ಪ್ರವಾಸಿ ಕುಟುಂಬ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories