ಒಲವಿನ ನಿಲ್ದಾಣದ ತಾರಿಣಿ ಮಾಡೆಲ್, ಸಿಕ್ಕಾಪಟ್ಟೆ ಪಾಶ್ ಕೂಡ ಹೌದು!

Published : Sep 08, 2023, 05:27 PM IST

ಒಲವಿನ ನಿಲ್ದಾಣ ಸೀರಿಯಲ್ ಮೂಲಕ ಕನ್ನಡಿಗರ ಮನೆಮಗಳಾಗಿ ಮನಗೆದ್ದ ನಟಿ ತಾರಿಣಿ ಆಲಿಯಾಸ್ ಅಮಿತಾ ಎಸ್ ಕುಲಾಲ್, ಸಿನಿಮಾ ರಂಗದಿಂದ ಸೀರಿಯಲ್ ಹೇಗೆ ಬಂದರು ಅನ್ನೋದರ ಬಗ್ಗೆ ತಿಳಿಯೋಣ.   

PREV
110
ಒಲವಿನ ನಿಲ್ದಾಣದ ತಾರಿಣಿ ಮಾಡೆಲ್, ಸಿಕ್ಕಾಪಟ್ಟೆ ಪಾಶ್ ಕೂಡ ಹೌದು!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಒಲವಿನ ನಿಲ್ದಾಣ ಸೀರಿಯಲ್ (Olavina Nildana) ನಾಯಕಿ ತಾರಿಣಿ ನಿಮಗೆ ಗೊತ್ತೇ ಇದೆ. ತಾರಿಣಿಯ ಮುಗ್ಧ ಮುಖ ಮತ್ತು ಮಾತಿಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಇವರ ನಿಜವಾದ ಹೆಸರೇನು? ಇವರಿಗೆ ತಿಳಿಯಲು ಇಂಟ್ರೆಸ್ಟ್ ಇದ್ರೆ ಇದನ್ನ ನೀವು ಓದಲೇಬೇಕು. 
 

210

ತಾರಿಣಿಯ ನಿಜವಾದ ಹೆಸರು ಅಮಿತಾ ಕುಲಾಲ್ (Amitha Kulal). ಸೀರಿಯಲ್‌ನಲ್ಲಿ ಮಲೆನಾಡ ಹುಡುಗಿಯಾಗಿ ಮಿಂಚುತ್ತಿರುವ ಈ ಚೆಲುವೆ ನಿಜವಾಗಿ ಮಂಗಳೂರಿನ ಹುಡುಗಿ. ಸೀರಿಯಲ್ ಮೂಲಕವೇ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟವರಲ್ಲ ಇವರು. ಸಿನಿಮಾದಿಂದ ಸೀರಿಯಲ್‌ಗೆ ಬಂದವರು. 
 

310

ಅಮಿತಾಗೆ ಸಣ್ಣ ವಯಸ್ಸಿನಿಂದಲೂ ಮಾಡೆಲಿಂಗ್ (Modeling) ಅಂದ್ರೆ ತುಂಬಾ ಇಷ್ಟವಂತೆ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಅಮಿತಾ, ಮುಂಬೈ, ಬೆಂಗಳೂರು, ಗುಜರಾತ್‌ನಲ್ಲಿ ಹಲವು ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ.  
 

410

ಅಮಿತಾ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಇವರು ನಟ ಸೃಜನ್ ಲೋಕೇಶ್ ಅವರ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ನಂತರ ಗಿಫ್ಟ್ ಬಾಕ್ಸ್ (Gift Box) , ಆ ಎರಡು ವರ್ಷಗಳು ಮೊದಲಾದ ಚಿತ್ರದಲ್ಲೂ ಅಮಿತಾ ನಟಿಸಿದ್ದಾರೆ.
 

510

ಮೂರು ಚಿತ್ರಗಳು ಸಹ ಅಷ್ಟಾಗಿ ಯಶಸ್ಸು ಕಂಡಿರಲಿಲ್ಲ. ನಂತರ ಅಮಿತಾ ಕಿರುತೆರೆಯಲ್ಲಿ ನಟಿಸಲು ಅವಕಾಶ ಪಡೆದುಕೊಂಡರು. ಮೊದಲ ಬಾರಿ ಅವರು ತೆಲುಗು ಸೀರಿಯಲ್ ನಲ್ಲಿ (Telugu Serial) ಅವಕಾಶ ಪಡೆದುಕೊಂಡಿದ್ದರು. ರೌಡಿ ಗಾರಿ ಪೆಲ್ಲಂ ಸೀರಿಯಲ್ ನಲ್ಲಿ ಇವರು ನಟಿಸಿದ್ದರು. ಇದಾದ ನಂತರ ಅಮಿತಾ ಒಲವಿನ ನಿಲ್ದಾಣದಲ್ಲಿ ಅವಕಾಶ ಪಡೆದರು.
 

610

ಒಲವಿನ ನಿಲ್ದಾಣ ಸೀರಿಯಲ್ ನಲ್ಲಿ ತಾರಿಣಿಯ ಮುಗ್ಧತೆ, ಹಿರಿಯರಿಗೆ ಗೌರವ ಕೊಡುವ ರೀತಿ, ಇವರ ಪ್ರೀತಿ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಹಾಗಾಗಿಯೇ ಕಳೆದ ವರ್ಷದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮನಮೆಚ್ಚಿದ ಮಗಳು ಪ್ರಶಸ್ತಿ ಸಹ ಪಡೆದಿದ್ದರು. ಈ ಬಾರಿಯೂ ಅವಾರ್ಡ್ ಪಡೆಯುವ ಎಲ್ಲಾ ಸೂಚನೆ ಇದೆ. 
 

710

ಅಮಿತಾ ಕೇವಲ ನಟಿ ಮಾತ್ರ ಅಲ್ಲ, ಯೋಗಪಟು ಸಹ ಹೌದು. ಲೀಲಾಜಾಲವಾಗಿ ಯೋಗ ಮಾಡ್ತಾರೆ. ಪ್ರತಿದಿನ ಯೋಗ, ವರ್ಕೌಟ್ ಮಾಡೋದನ್ನು ಮಾತ್ರ ಇವರು ಮಿಸ್ ಮಾಡೋದೆ ಇಲ್ಲ. ಅಷ್ಟೇ ಅಲ್ಲ ಅಮಿತಾ ಚೆನ್ನಾಗಿ ಸ್ವಿಮ್ ಕೂಡ ಮಾಡುತ್ತಾರೆ. ಇವರು ಉತ್ತಮ ಡ್ಯಾನ್ಸರ್ ಕೂಡ ಹೌದು. 
 

810

ಕನ್ನಡ ತೆಲುಗು ಮಾತ್ರವಲ್ಲದೇ ಹಿಂದಿಯಲ್ಲೂ ಅಮಿತಾ ಮಿಂಚಿದ್ದಾರೆ. ಮುಂಬೈನಲ್ಲಿ ಗಣೇಶ್ ಆಚಾರ್ ನಿರ್ದೇಶನದ ಝನ್ ಕರ್ ಎನ್ನುವ ಕಿರುಚಿತ್ರದಲ್ಲಿ ಇವರು ನಟಿಸಿದ್ದಾರಂತೆ. ಜೊತೆಗೆ ಹಿಂದಿ ಕಿರುತೆರೆಯ (Hindi smallscreen) ಜನಪ್ರಿಯ ಕಾರ್ಯಕ್ರಮಗಳಾದ ಕ್ರೈ ಪೆಟ್ರೋಲ್, ಸಾವ್ ಧಾನ್ ಇಂಡಿಯಾ ಸೀರಿಯಲ್ ಗಳಲ್ಲೂ ನಟಿಸಿದ್ದಾರಂತೆ ನಟಿ. 
 

910

ಅಷ್ಟೇ ಅಲ್ಲ ಅಮಿತಾ ಜಾಹೀರಾತುಗಳಲ್ಲಿ ಸಹ ಮಿಂಚಿದ್ದಾರೆ.  ಈಕೆ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಾಬಾದ್ ಸೀರೆಗಳಿಗೆ ಮಾಡೆಲ್ ಆಗಿ ಹಲವಾರು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. 
 

1010

ಕಿರುತೆರೆಯಲ್ಲಿ ಯಾವಾಗಲೂ ಸೀರೆಯಲ್ಲಿ ಕಾಣಿಸಿಕೊಳ್ಳುವ ಅಮಿತಾ, ನಿಜ ಜೀವನದಲ್ಲಿ ತುಂಬಾನೆ ಸ್ಟೈಲಿಶ್, ಹೆಚ್ಚಾಗಿ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವು ದಿನಗಳಲ್ಲಿ ಹಿಂದೆ ಸ್ವಿಮ್ ಸೂಟ್ ಫೋಟೊ ಹರಿಯಬಿಟ್ಟು ಇಂಟರ್ನೆಟ್ ನಲ್ಲಿ ಕಿಚ್ಚು ಹೆಚ್ಚಿಸಿದ್ದರು.

Read more Photos on
click me!

Recommended Stories