ಮೊಗ್ಗಿನ ಜಡೆಯಲ್ಲಿ ಮಿಂಚ್ತಾ ಇರೋ ಈ ಹುಡುಗಿ ಯಾರು? ಕನ್ನಡದ ಆ್ಯಂಕರ್, ಗೆಸ್ ಮಾಡಿ

Published : Apr 20, 2023, 06:35 PM IST

ಕೆಂಪು ಸೀರೆ, ಮೊಗ್ಗಿನ ಜಡೆಯಲ್ಲಿರುವ ಈ ಹುಡುಗಿ ಯಾರು ಅನ್ನೋದನ್ನು ನೀವು ಗೆಸ್ ಮಾಡ್ತೀರಾ? ಇವರು ಕಿರುತೆರೆ ಸೀರಿಯಲ್ ಗಳಲ್ಲಿ ಮಿಂಚಿದ ನಟಿ ಹೌದು, ಜೊತೆಗೆ ಸದ್ಯ ನಿರೂಪಕಿಯಾಗಿ ಮಿಂಚ್ತಾ ಇರೋ ಸ್ಟಾರ್ ಕೂಡ ಹೌದು ಯಾರು ಗೆಸ್ ಮಾಡಿ. 

PREV
16
ಮೊಗ್ಗಿನ ಜಡೆಯಲ್ಲಿ ಮಿಂಚ್ತಾ ಇರೋ ಈ ಹುಡುಗಿ ಯಾರು? ಕನ್ನಡದ ಆ್ಯಂಕರ್, ಗೆಸ್ ಮಾಡಿ

ಉದ್ದವಾದ ಮೊಗ್ಗಿನ ಜಡೆ, ಅಮ್ಮನ ಕೆಂಪು ಬಣ್ಣದ ರೇಷ್ಮೆ ಸೀರೆ, ಕುತ್ತಿಗೆಯಲ್ಲಿ ಮುತ್ತಿನ ಮಾಲೆ, ಕೈಯಲ್ಲಿ ಗುಲಾಬಿ ಬಳೆ, ಹಣೆ ಮೇಲೆ ಮುಂದಾಲೆ ತೊಟ್ಟು ಫೋಟೋಗೆ ಫೋಸ್ ನೀಡುತ್ತಿರುವ ಈ ಬೆಡಗಿ ಯಾರು ಅನ್ನೋದನ್ನು ನೀವು ಗೆಸ್ ಮಾಡ್ತೀರಾ? 

26

ಇವರು ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಒಂದು ಕಾಲದಲ್ಲಿ ಸೀರಿಯಲ್‌ನಲ್ಲಿ ಲೀಡ್ ರೋಲ್‌ನಲ್ಲಿ, ಮಿಂಚುತ್ತಾ, ತಮ್ಮ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳನ್ನು ಪಡೆದ ನಟಿ. ನಂತರ ಜನರನ್ನು ನಗಿಸೋದಕ್ಕೂ ಸೈ ಎನಿಸಿಕೊಂಡ್ರು. ಇದೀಗ ಕಿರುತೆರೆಯಲ್ಲಿ ನಿರೂಪಕಿಯಾಗಿ (actor and anchor) ಮಿಂಚುತ್ತಿದ್ದಾರೆ ಇವರು.

36

ಈ ಫೋಟೋದಲ್ಲಿರೋರು ಬೇರೆ ಯಾರು ಅಲ್ಲ, ನಟಿ, ನಿರೂಪಕಿಯಾಗಿ ಮಿಂಚುತ್ತಿರುವ ಶ್ವೇತಾ ಚಂಗಪ್ಪ (Shwetha Chengappa). ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಳೆಯ ಫೋಟೊವನ್ನು ಶೇರ್ ಮಾಡಿದ್ದು, ಈ ಫೋಟೋದಲ್ಲಿ ಕಾಣಿಸುತ್ತಿರುವ ಹುಡುಗಿ ಯಾರು ಗೆಸ್ ಮಾಡಬಲ್ಲಿರಾ ಎಂದು ಬರೆದುಕೊಂಡಿದ್ದಾರೆ. 

46

ತಮ್ಮ ಬಾಲ್ಯದ ಫೋಟೋದಲ್ಲಿ ತುಂಬಾನೆ ಮುಗ್ಧೆಯಾಗಿ ಕಾಣಿಸ್ತಿರೋ ಶ್ವೇತಾ… ತಮ್ಮ ಚಿತ್ರಕ್ಕೆ ಬಾಲ್ಯವು ನಿಜವಾಗಿಯೂ ಪ್ರತಿಯೊಬ್ಬ ಮನುಷ್ಯನ ಜೀವನದ ತುಂಬಾ ಸುಂದರವಾದ ಜೊತೆಗೆ ಮುಗ್ಧವಾದ ಭಾಗ ಅಲ್ವಾ? ಎಂದು ಬರೆದುಕೊಂಡಿದ್ದಾರೆ. ನಟಿಯ ಫೋಟೊ ನೋಡಿ ಅಭಿಮಾನಿಗಳು ಸಂತಸ ಹಂಚಿ ಕೊಂಡಿದ್ದಾರೆ.

56

ಕಿರುತೆರೆ ಜನಗತ್ತಿನಲ್ಲಿ ಬರೋಬ್ಬರಿ 20 ವರ್ಷಗಳನ್ನು ಪೂರೈಸಿರುವ ಶ್ವೇತಾ, ಸದ್ಯ ನಟನೆಯಿಂದ ದೂರ ಉಳಿದಿದ್ದರೂ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ನಂ 1 ಶೋನಲ್ಲೂ ಇವರು ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. 
 

66

ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಮತ್ತೊಂದು ಹೊಸ ರಿಯಾಲಿಟಿ ಶೋನಲ್ಲೂ ಸಹ ಶ್ವೇತಾ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಚೋಟಾ ಚಾಂಪಿಯನ್ ಪ್ರೋಮೋ ರಿಲೀಸ್ ಆಗಿದ್ದು, ಅದರಲ್ಲಿ ಶ್ವೇತಾ ಚೆಂಗಪ್ಪ, ರಚಿತಾ ರಾಮ್, ವಿಜಯ್ ರಾಘವೇಂದ್ರ, ಕುರಿ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಚೋಟಾ ಚಾಂಪಿಯನ್ ಯಾವಾಗ ಆರಂಭವಾಗಲಿದೆ ಕಾದು ನೋಡಬೇಕು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories