ಬ್ರಹ್ಮಗಂಟು.... ಅಕ್ಕನಿಗಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟ ತಂಗಿ ಕಥೆ…. ಶೀಘ್ರದಲ್ಲಿ ಝೀ ಕನ್ನಡದಲ್ಲಿ

First Published | Mar 21, 2024, 2:51 PM IST

ಝೀ ಕನ್ನಡದಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಬ್ರಹ್ಮಗಂಟು, ಇಂದಿಗೂ ಜನಮನದಲ್ಲಿ ಹಾಗೇ ಉಳಿದಿದೆ. ಗುಂಡಮ್ಮ ಪಾತ್ರದ ಮೂಲಕ ಗೀತಾ ಭಾರತಿ ಇಂದಿಗೂ ಮನೆಮಾತಾಗಿದ್ದಾರೆ, ಇದೀಗ ಅದೇ ಹೆಸರಿನ ಹೊಸ ಧಾರವಾಹಿ ಬರಲಿದೆ. 
 

ಝೀ ಕನ್ನಡದಲ್ಲಿ (Zee Kannada) ಇತ್ತೀಚೆಗೆ ಎರಡು ಜನಪ್ರಿಯ ಧಾರಾವಾಹಿಗಳಾದ ಪಾರು ಮತ್ತು ಹಿಟ್ಲರ್ ಕಲ್ಯಾಣ ಮುಗಿದಿದ್ದು, ಆ ಧಾರವಾಹಿಗಳ ಬದಲಿಗೆ ಈಗಾಗಲೇ ಶ್ರಾವಣಿ ಸುಬ್ರಹ್ಮಣ್ಯ ಪ್ರಸಾರವಾಗುತ್ತಿದೆ, ಇದೀಗ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗಲು ರೆಡಿಯಾಗುತ್ತಿದೆ, ಅದುವೇ ಬ್ರಹ್ಮಗಂಟು. 
 

ಬ್ರಹ್ಮಗಂಟು (Bramhagantu) ಎಂದು ಕೇಳಿದಾಗ ಈ ಹಿಂದೆ ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಖಂಡಿತಾ ನೆನಪಾಗುತ್ತೆ ಅಲ್ವಾ? ಲಕ್ಕಿ ಮತ್ತು ಗುಂಡಮ್ಮನ ಮಧುರ ಪ್ರೇಮ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಅದೇ ಹೆಸರಿನ ಹೊಸ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ. 
 

Tap to resize

ಹೊಸ ಸೀರಿಯಲ್ ಬ್ರಹ್ಮಗಂಟು ಅಕ್ಕ ತಂಗಿಯರ ಕಥೆಯಾಗಿದ್ದು, ಅಕ್ಕನಿಗಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟ ತಂಗಿ ಕಥೆ ಇದಾಗಿದೆ. ಈಗಾಗಲೇ ಪ್ರೊಮೋ ಬಿಡುಗಡೆಯಾಗಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 
 

ಪ್ರೊಮೋದಲ್ಲೇ (serial promo) ಕಥೆ ಏನಿರಬಹುದು ಅನ್ನೋದನ್ನು ಜನ ಊಹಿಸಿಯಾಗಿದೆ, ಯಾಕಂದ್ರೆ, ಪ್ರೋಮೋ ಪೂರ್ತಿ ಕಥೆಯನ್ನು ತಿಳಿಸಿದೆ. ಧಾರಾವಾಹಿ ಶೀಘ್ರದಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ. ಆದರೆ ಯಾವಾಗ ಪ್ರಸಾರವಾಗುವುದು ಎನ್ನುವ ಬಗ್ಗೆ ಮಾತ್ರ ಮಾಹಿತಿ ಬಿಟ್ಟುಕೊಟ್ಟಿಲ್ಲ. 
 

ಅಪ್ಪ,ಅಮ್ಮನಿಗೆ ಇಬ್ಬರು ಮುದ್ದಿನ ಹೆಣ್ಣು ಮಕ್ಕಳು, ದೊಡ್ಡವಳು ಸುಂದರಿ, ಚಿಕ್ಕವಳು ಕಪ್ಪು ಬಣ್ಣದ, ಕಣ್ಣಿಗೆ ಕನ್ನಡಕ ಧರಿಸಿದ ಹುಡುಗಿ. ಊರವರೂ ಇಬ್ಬರ ಬಗ್ಗೆ ಆಡಿಕೊಂಡಿದ್ದು ಆಗಿದೆ, ದೊಡ್ಡವಳು ಸುಂದರಿ, ಆದ್ರೆ, ಆ ಸೌಂದರ್ಯ ಚಿಕ್ಕವಳಿಗೆ ಬಂದಿಲ್ಲ ಅನ್ನುವ ವ್ಯಂಗ್ಯ. 
 

ತನ್ನ ಬಗ್ಗೆ ಎಲ್ಲಾ ಏನು ಹೇಳ್ತಿದ್ದಾರೆ ಅನ್ನೋದು ಗೊತ್ತಿದ್ರೂ ಬಾಲ್ಯದಿಂದಲೇ ಅಕ್ಕನಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ತಂಗಿ. ಅಕ್ಕ ತಪ್ಪು ಮಾಡಿದ್ರೆ, ಅದನ್ನು ತಾನೆ ಮಾಡಿದ್ದು ಎಂದು ಹೇಳಿ ಹೊಡೆಸಿಕೊಳ್ಳೋದಕ್ಕೂ ತಂಗಿ ರೆಡಿ, ಅಪ್ಪ ಇಬ್ಬರಿಗಾಗಿ ಡ್ರೆಸ್ ತಂದಾಗ, ಅಕ್ಕ ಎರಡನ್ನೂ ಮೊದಲು ನಾನೆ ಹಾಕುತ್ತೇನೆ ಎಂದು ಹೇಳಿದಾಗಲೂ ಅಕ್ಕ ತಾನೆ, ಪರವಾಗಿಲ್ಲ ಅವಳೇ ಹಾಕಲಿ ಎನ್ನುವ ಕರುಣಾಮಯಿ ತಂಗಿ. 
 

ಅಕ್ಕನ ಅಂದಕ್ಕೆ ತಾನೆ ದೃಷ್ಟಿ ಬೊಟ್ಟಾಗಿ ನಿಂತಿರುವ ತಂಗಿ, ತನಗೆ ನೂರು ಕಷ್ಟ ಬಂದರೂ ಅಕ್ಕನಿಗಾಗಿಯೇ ದೇವರಲ್ಲಿ ಮೊರೆ ಇಡುವ, ಅಹಂಕಾರಿ ಅಕ್ಕನ ತಂಗಿಯ ಕಥೆಯನ್ನು ಬ್ರಹ್ಮಗಂಟು ಮೂಲಕ ಹೇಳಹೊರಟಿದ್ದಾರೆ. ವೀಕ್ಷಕರು ಈಗಾಗಲೇ ಕಥೆ ಹೀಗೆಯೆ ಇರಬಹುದು ಎಂದು ಹೇಳಿ ತಮ್ಮ ಕಥೆಯನ್ನೆಲ್ಲಾ ಬರೆದು ಕಾಮೆಂಟ್ ಮಾಡಿದ್ದಾರೆ. 
 

ಇದು ಯಾರೇ ನೀ ಅಭಿಮಾನಿ ಸಿನಿಮಾ ತರಹದ ಕಥೆಯಾಗಿದೆ. ಕೊನೆಗೆ ಆಗೋದು ಇಷ್ಟೇ ಅಕ್ಕ ಲವ್ ಮಾಡೋ ಹುಡುಗನನ್ನು ತಂಗಿ ಮದುವೆಯಾಗ್ತಾಳೆ. ಅಕ್ಕನೇ ವಿಲನ್ ಆಗ್ತಾಳೆ. ಇಷ್ಟವಿಲ್ಲದೇ ಮದುವೆಯಾದ ಹುಡುಗ, ಕೊನೆಗೆ ಆಕೆಯ ಗುಣಗಳಿಂದ ಆಕೆಗೆ ಹತ್ತಿರವಾಗ್ತಾನೆ. ಇಷ್ಟೇ ಅಲ್ವ ಕಥೆ ಎಂದು ಕ್ಲೈಮಾಕ್ಸ್ ಕೂಡ ಹೇಳಿದ್ದಾರೆ ವೀಕ್ಷಕರು. 
 

Latest Videos

click me!