ಶರ್ಟ್ ಬಟನ್​ ತೆಗೆದು ಹಾಟ್​ ಆಗಿ ಪೋಸ್ ಕೊಟ್ಟ ಪುಟ್ಟಗೌರಿ: ಏನಮ್ಮಾ ನಿನ್ನ ಬೋಲ್ಡ್‌ನೆಸ್ಸೂ ಎಂದ ಫ್ಯಾನ್ಸ್‌!

First Published | Mar 21, 2024, 1:49 PM IST

ಸದಾ ಸ್ಟೈಲಿಶ್ ಹಾಗೂ ಬೋಲ್ಡ್ ಫೋಟೋಶೂಟ್​ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿರುವ ನಟಿ ಸಾನ್ಯಾ ಅಯ್ಯರ್​ ಸ್ಯಾಂಡಲ್​ವುಡ್​ನಲ್ಲಿ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದು, ಇದೀಗ  ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಾನ್ಯಾ  ಅಯ್ಯರ್ ತಮ್ಮ ಚೊಚ್ಚಲು ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದು ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿಈ ಹಿಂದೆ ಪೋಸ್ಟ್ ಮಾಡಿದ್ದರು. ಇದೀಗ ಸಮ್ಮರ್ ಹಾಲಿಡೇಗೋಸ್ಕರ ತಾಯಿ ಜೊತೆ ಕೂರ್ಗಿಗೆ ಹೋಗಿದ್ದಾರೆ. ಅಲ್ಲಿ ಫೋಟೋಗೆ ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಬಿಸಿಲು ಜೋರಾಗಿದ್ದು, ವೆಕೇಷನ್ ಎಂಜಾಯ್ ಮಾಡಲು ನಟಿ ಸಾನ್ಯಾ ಕೊಡಗಿಗೆ ತೆರಳಿದ್ದಾರೆ. ಕೊಡಗಿನ ನಿಸರ್ಗದ ನಡುವೆ ಫುಲ್ ಎಂಜಾಯ್ ಮಾಡಿದ್ದಾರೆ. ಇನ್ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Tap to resize

ಸ್ಟೈಲಿಶ್ ಲುಕ್​ನಲ್ಲಿ ನಟಿ ಸಾನ್ಯಾ ಅಯ್ಯರ್ ಬೋಲ್ಡ್ ಆಗಿ ಮಿಂಚಿದ್ದು. ಶಾರ್ಟ್ ಸ್ಕರ್ಟ್​ ತೊಟ್ಟ ಸಾನ್ಯಾ, ಶರ್ಟ್ ಬಟನ್​ ತೆಗೆದು ಹಾಟ್​ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಪೋಟೋಸ್ ​ಪಡ್ಡೆ ಹುಡುಗರ ಹೈದಯಕ್ಕೆ ಬೆಂಕಿ ಇಟ್ಟಿದೆ.

ಬಿಸಿಲಿಗೆ ಕೂಲಿಂಗ್ ಗ್ಲಾಸ್ ತೊಟ್ಟ ಪುಟ್ಟ ಗೌರಿ ಈಗ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಫೋಟೋಸ್‌ಗೆ ಲೈಕ್​​ಗಳ ಸುರಿಮಳೆ ಆಗಿದ್ದು, ಕರ್ನಾಟಕ ಬ್ಯೂಟಿ, ಸಖತ್ ಹಾಟ್, ಏನಮ್ಮಾ ನಿನ್ನ ಬೋಲ್ಡ್‌ನೆಸ್ಸೂ ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಸಾನ್ಯಾ  ಅಯ್ಯರ್ ಸಾಕಷ್ಟು ಬದಲಾಗುತ್ತಿದ್ದಾರೆ. ಈ​ ಸಿನಿಮಾದಲ್ಲಿ ಸಾನ್ಯಾ ಅಯ್ಯರ್​ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದು, ಇಂದ್ರಜಿತ್ ಲಂಕೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಹಿಂದೆ ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಸಾನ್ಯಾ  ಅಯ್ಯರ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳನ್ನು ಒಂದೊಂದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸೀರಿಯಲ್ ಮೂಲಕ ಸಿನಿ ಜರ್ನಿ ಶುರು ಮಾಡಿದ ಸಾನ್ಯಾ, ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡು ಮನಸ್ಸು ಗೆದ್ದಿದ್ದರು. ಪುಟ್ಟಗೌರಿಯಲ್ಲಿ ಅದ್ಭುತವಾಗಿ ನಟಿಸಿದ್ದನ್ನು ಇನ್ನೂ ಜನ ಮರೆತಿಲ್ಲ. 

Latest Videos

click me!