ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಒಂದು ಜನಪ್ರಿಯ ಸೀರಿಯಲ್ ಎಂದರೆ ಅದು ರಾಮಾಚಾರಿ. ನಾಯಕನ ದೃಢ ಸ್ವಭಾವ, ನಾಯಕಿಯ ಸೊಕ್ಕು, ಇವರಿಬ್ಬರ ಜಗಳ, ಪ್ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಪ್ರೇಕ್ಷಕರ ಮನದಲ್ಲಿ ಈ ಸೀರಿಯಲ್ ನಂಬರ್ 1 ಸ್ಥಾನದಲ್ಲಿದೆ.
28
ದಿನದಿಂದ ದಿನಕ್ಕೆ ಅನೇಕ ಟ್ವಿಸ್ಟ್ ಆಂಡ್ ಟರ್ನ್ ಗಳನ್ನು ನೀಡುತ್ತಾ, ಬಹಳ ಮನರಂಜನೆ ನೀಡಿದ ಈ ಸೀರಿಯಲ್ (Ramachari serial) ನಲ್ಲಿ, ಸದ್ಯ ಆಶ್ರಮದಲ್ಲಿದ್ದ ಚಾರುವನ್ನು ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ. ಈ ಗುಟ್ಟು ರಟ್ಟಾದ್ರೆ ಎರಡೂ ಮನೆಗಳಲ್ಲಿ ಸಹ ದೊಡ್ಡ ಗಲಾಟೆ ಆಗೋದು ಖಚಿತ.
38
ಇನ್ನು ಸೋಶಿಯಲ್ ಮೀಡಿಯಾ (social media) ವಿಷಯಕ್ಕೆ ಬಂದ್ರೆ ಚಾರು ಆಲಿಯಾಸ್ ಮೌನ ಗುಡ್ಡೆಮನೆ ಹೆಚ್ಚಾಗಿ ತಮ್ಮ ಹೊಸ ಹೊಸ ಫೋಟೋಸ್ ಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಈ ನಟಿ ಇದೀಗ ಹೊಸ ಫೋಟೋಸ್ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದಾರೆ.
48
ಇನ್ನು ಮೌನ (Mouna Guddemane) ಬಗ್ಗೆ ಹೇಳೋದಾದ್ರೆ ಮೂಲತಃ ಮಂಗಳೂರಿನವರಾದ ಮೌನಗೆ ರಾಮಾಚಾರಿ ಮೊದಲ ಧಾರಾವಾಹಿ. ಅದಕ್ಕೂ ಮೊದಲು ಮಾಡೆಲಿಂಗ್ ನಲ್ಲಿ ಗುರ್ತಿಸಿಕೊಂಡಿದ್ದರು. ಇದು ಮೊದಲ ಧಾರಾವಾಹಿಯಾದರೂ ತಮ್ಮ ಸ್ಟೈಲ್, ಲುಕ್ ಮತ್ತು ಅಭಿನಯದಿಂದ ಈ ನಟಿ ಪ್ರೇಕ್ಷಕರ ಮನಸಲ್ಲಿ ಮನೆ ಮಾಡಿರೋದು ನಿಜ.
58
ಇಪ್ಪತ್ತೆರಡರ ಹರೆಯ ಈ ಸುಂದರಿ ಟೀನೇಜ್ ನಲ್ಲೇ ಮಿಸ್ ಟೀನ್ ಮಂಗಳೂರು (Miss teen Mangalore) ಅನ್ನೋ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದಾದ ಬಳಿಕ ಹಲವು ಆಲ್ಬಂ ಹಾಡುಗಳಲ್ಲಿ ಸಹ ಇವರು ಮಿಂಚಿದ್ದರು.
68
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜ್‌ನಲ್ಲಿ ಪಿಯುಸಿ, ಡಿಗ್ರಿ ಮುಗಿಸಿರೋ ಮೌನ ಬಿಗ್‌ಬಾಸ್‌ನ ಸ್ಪರ್ಧಿ ವಿಶ್ವನಾಥ್ ಅವರ ವೀಡಿಯೋ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇವರು ಸಾಕಷ್ಟು ತುಳು ಆಲ್ಬಂಗಳಲ್ಲೂ ನಟಿಸಿದ್ದರು.
78
'ಅಸೆದ ಕಡಲ್', 'ಮನಸಾ' ಮೊದಲಾದ ತುಳು ಆಲ್ಬಂಗಳಲ್ಲಿ ಹಾಗೂ 'ರಾಧಾಕೃಷ್ಣ' ಅನ್ನೋ ಈಕೆಯ ಆಲ್ಬಂ ಹಿಂದಿ ಕನ್ನಡ ತುಳು ಭಾಷೆಗಳಲ್ಲಿ ಬಂದಿವೆ. ಆದರೆ ಈಕೆ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದದ್ದು ಮಾತ್ರ ರಾಮಾಚಾರಿ ಸೀರಿಯಲ್ ನ ಧಿಮಾಕಿನ ಹುಡುಗಿಯಾಗಿ.
88
ಮಂಗಳೂರಿನ ಈ ಸುಂದರ ಬೆಡಗಿಯ ಸಖತ್ತಾಗಿರೋ ಫೋಟೋಗಳನ್ನು ನೀವು ನೋಡಿ. ಅವರ ಸೋಶಿಯಲ್ ಮೀಡೀಯಾ (social media)ನೋಡಿದ್ರೆ ಅಲ್ಲಿ ನಿಮಗೆ ಮಾಡರ್ನ್ ಆಗಿರೋ, ಟ್ರೆಡಿಶನಲ್ ಲುಕ್ ನಲ್ಲಿರೋ ಹಲವಾರು ಫೋಟೋಗಳು ಸಹ ಕಾಣಬಹುದು.