ಮಂಗಳೂರಿನಲ್ಲಿ ದೀಪಿಕಾ ದಾಸ್‌ ಬೆಕ್ಕು ಪತ್ತೆ; 15 ಸಾವಿರ ಬಹುಮಾನ ಯಾರ ಕೈ ಸೇರಿತ್ತು?

First Published | Feb 27, 2023, 9:09 AM IST

ಕಪ್ಪು ಬೆಕ್ಕು ಎನ್ನುವ ಕಾರಣಕ್ಕೆ ಕಳ್ಳತನ ಮಾಡಿದ ಪುಂಡರು. ಮಂಗಳೂರಿನಿಂದ ನನ್ನ ಕೈ ಸೇರಿದ ಮೇಲೆ ಹೆಚ್ಚಿಗೆ ಮಾಹಿತಿ ಕೊಡುವುದಾಗಿ ಹೇಳಿದ ದೀಪಿಕಾ.... 
 

 ಕನ್ನಡ ಕಿರುತೆರೆ ನಾಗಿಣಿ, ಬಿಗ್ ಬಾಸ್ ಸೀಸನ್ 7 ಮತ್ತ 8ರ ಸ್ಪರ್ಧಿ ದೀಪಿಕಾ ದಾಸ್ ತಮ್ಮ ಹುಟ್ಟುಹಬ್ಬದ ದಿನವೇ ಬೆಕ್ಕು ಕಳ್ಳತನವಾಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 

ಬೆಕ್ಕಿಗೆ ಶ್ಯಾಡೋ ಎಂದು ಹೆಸರು ಇಟ್ಟಿದ್ದಾರೆ. ಕಪ್ಪು ಬೆಕ್ಕು (ಕತ್ತಿನ ಸುತ್ತ ಕಂದುಬಣ್ಣವಿರುತ್ತದೆ). ಪರ್ಷಿಯಮನ್ ಬ್ರೀಡ್‌ಗೆ ಸೇರಿದೆ. ಇದು ಗಂಡು ಬೆಕ್ಕು, ಕೇವಲ 9 ತಿಂಗಳು ಎಂದು ಮಾಹಿತಿ ಕೊಟ್ಟಿದ್ದಾರೆ.

Tap to resize

ಈಗ ಇದೇ ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ. ಶ್ಯಾಡೋ ಹುಡುಕಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಿದ್ದಾರೆ ಹಾಗೂ ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ನೀಡಲಿದ್ದಾರಂತೆ.

ಸಿಹಿ ಸುದ್ದಿ. ಶ್ಯಾಡೋನ ನಾವು ಪತ್ತೆ ಮಾಡಿದ್ದೀವಿ. ಆಕೆಯನ್ನು ಕಿಡ್ನ್ಯಾಪ್ ಮಾಡಿ ಮಂಗಳೂರಿಗೆ ಕಳುಹಿಸಲಾಗಿತ್ತೆ. ಆಕೆಯನ್ನು ಪತ್ತೆ ಮಾಡಲು ಸಹಾಯ ಮಾಡಿದ ನಿಮಗೆ ಮೊದಲು ಧನ್ಯವಾದಗಳನ್ನು ಹೇಳಬೇಕು ಎಂದಿದ್ದಾರೆ ದೀಪಿಕಾ ದಾಸ್. 

 ಅಲ್ಲದೆ ಬೆಕ್ಕನ್ನು ಹುಡುಕಿ ಕೊಟ್ಟವರಿಗೆ 10,000 ರಿಂದ 15, 000 ಬಹುಮಾನ ಕೊಡಲಾಗುವುದು ಎಂದು ಘೋಷಿಸಿದ್ದಾರೆ. ಮಾಹಿತಿ ನೀಡಲು ಮೂರ್ನಾಲ್ಕು ನಂಬರ್‌ಗಳನ್ನು ಕೊಟ್ಟಿದ್ದಾರೆ. 

 ಬೆಕ್ಕು ಹುಡುಕಲು ಯಾರು ಸಹಾಯ ಮಾಡಿದ್ದರು? ಅವರಿಗೆ ಎಷ್ಟು ಬಹುಮಾನ ನೀಡಿದ್ದಾರೆ ಅನ್ನೋ ಕ್ಯೂರಿಯಾಸಿಟಿಯಲ್ಲಿದ್ದಾರೆ ನೆಟ್ಟಿಗರು. ಮಾಹಿತಿಗಾಗಿ ಕಾಯುತ್ತಿದ್ದಾರೆ. 

Latest Videos

click me!