ಹೊಸ ಧಾರಾವಾಹಿಗಳು: ಹಿಟ್ಲರ್‌ ಕಲ್ಯಾಣ to ಕನ್ಯಾಕುಮಾರಿ, ನಿಮ್ಮ ಫೇವರೆಟ್ ಯಾವುದು.?

ಕನ್ನಡ ವಾಹಿನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಪ್ರಸಾರವಾಗಿ ಕೆಲವೇ ವಾರಗಳಲ್ಲಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿವೆ. ಹೊಸ ಧಾರಾವಾಹಿಗಳ ಪಟ್ಟಿ ಇಲ್ಲಿದೆ. 

ಹಿಟ್ಲರ್ ಕಲ್ಯಾಣ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಎರಡನೇ ಮದುವೆ ಆಗುತ್ತಿರುವ ಎಜೆ, ಅಂಕಲ್‌ನ ಮದುವೆ ಆಗುವುದಿಲ್ಲ ಎಂದು ಲೀಲಾ. ಹಣಕ್ಕೆ ಆಸೆ ಪಡುವ ಅಮ್ಮ, ಸೊಸೆ ಬೇಕು ಬೇಕು ಎನ್ನುವ ಮೂವರು ಸೊಸೆಯಂದಿರು. ಯಾರ ಜೊತೆ ಎಜೆ ಕಲ್ಯಾಣ..? 

ಕಾದಂಬರಿ: ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾದಂಬರಿ ಹಣ ಸಂಪಾದಿಸಿ ಬರುವೆನೆಂದು ಮನೆ ಬಿಟ್ಟು ಹೋದ ತಂದೆ ಇಂದಿಗೂ ಮರಳಿಲ್ಲ. ಇಡೀ ಮನೆ ಜವಾಬ್ದಾರಿಯನ್ನು ಕಾದಂಬರಿ ಹೇಗೆ ನಿಭಾಯಿಸುತ್ತಾಳೆ? ಎನ್ನುವುದೇ ತಿರುಳು. 


ಲಕ್ಷಣ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.  ಕಪ್ಪು ಬಣ್ಣದ ಬಗ್ಗೆ ಜನರಿಗೆ ಇರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವ ಪ್ರಯತ್ನವಿದು. ಬಣ್ಣ ಮುಖ್ಯವಲ್ಲ ಮನಸ್ಸು ಮುಖ್ಯ ಎಂದು ಅರ್ಥಪೂರ್ಣವಾಗಿ ತೋರಿಸಲಾಗಿದೆ. 

ಮರಳಿ ಮನಸಾಗಿದೆ: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದು ಹಿಂದಿ ಧಾರಾವಾಹಿ ರಿಮೇಕ್. ತಂದೆ ಮಾತು ಕೊಟ್ಟ ಕಾರಣ ಮದುವೆ ಆದ ಪೊಲೀಸ್ ಅಧಿಕಾರಿ. ಮಾಜಿ ಪ್ರೇಯಸಿ ಸಿಕ್ಕಾಗ ಆಗುವ ಖುಷಿ. ಪೋಲಿಸ್ ಯಾವುದು ಆಯ್ಕೆ ಮಾಡಿಕೊಳ್ಳುತ್ತಾರೆ?

ಕನ್ಯಾಕುಮಾರಿ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.  ಕನ್ನಿಕಾ- ಚರಣ ಪ್ರೀತಿ,  ಸಿರಿವಂತ ಮಿಡಲ್ ಕ್ಲಾಸ್ ಜೀವನ ಶೈಲಿಯನ್ನು ತೋರಿಸಲಾಗಿದೆ.

ನಿನ್ನಿಂದಲೆ: ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನಿಂದಲೇ ಧಾರಾವಾಹಿಯಲ್ಲಿ  ಸಾಂಪ್ರದಾಯಿಕ ಮನೆಯಲ್ಲಿ ಸ್ನೇಹ ಮತ್ತು ಪ್ರೀತಿ ಹೇಗೆ ಉಳಿಯುತ್ತದೆ ಎಂದು ತೋರಿಸಲಾಗಿದೆ.

Latest Videos

click me!